ಸೋಮವಾರಪೇಟೆ, ಅ. ೭: ಗುಜರಾತ್‌ನಲ್ಲಿರುವ ಸೋಮನಾಥ, ಆಂದ್ರಪ್ರದೇಶದ ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನ, ಮಧ್ಯಪ್ರದೇಶ ಉಜ್ಜೆöÊನಿಯಲ್ಲಿರುವ ಮಹಾಕಾಳೇಶ್ವರ, ನರ್ಮದಾ ನದಿ ತೀರದಲ್ಲಿರುವ ಓಂಕಾರೇಶ್ವರ, ಬಿಹಾರದಲ್ಲಿರುವ ವೈದ್ಯನಾಥೇಶ್ವರ, ಮಹಾರಾಷ್ಟç ಭೀಮಾ ನದಿ ತೀರದ ಭೀಮಾಶಂಕರ, ತಮಿಳುನಾಡಿನ ರಾಮೇಶ್ವರ, ಸೌರಾಷ್ಟç ಕಡಲ ತೀರದ ದ್ವಾರಕೆಯಲ್ಲಿರುವ ನಾಗೇಶ್ವರ, ವಾರಣಾಸಿಯಲ್ಲಿನ ವಿಶ್ವನಾಥ, ನಾಸಿಕ್‌ನಲ್ಲಿರುವ ತ್ರಯಂಬಕೇಶ್ವರ, ಉತ್ತರಾಖಂಡದ ಕೇದಾರನಾಥ, ಔರಂಗಾಬಾದ್ ನಲ್ಲಿರುವ ಗ್ರೀಶನೇಶ್ವರ ದೇವಾಲಯ ಗಳಿಗೆ ಭೇಟಿ ನೀಡಲು ಸಾಧ್ಯವಿಲ್ಲದ ವರು, ಸೋಮವಾರಪೇಟೆಯಲ್ಲಿಯೇ ಈ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಾಡಬಹುದು!

ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಪಟ್ಟಣದ ಜೇಸೀ ವೇದಿಕೆ ಮುಂಭಾಗ ವಿರುವ ಅಟಲ್‌ಜೀ ಕನ್ನಡ ಭವನದಲ್ಲಿ ಈ ದ್ವಾದಶ ಜ್ಯೋತಿರ್ಲಿಂಗಗಳು ದರ್ಶನ ಆರಂಭಿಸಿದ್ದು, ಆಸ್ತಿಕ ಮಂದಿಯನ್ನು ಆಧ್ಯಾತ್ಮಿಕ ಲೋಕಕ್ಕೆ ಸೆಳೆಯುವಲ್ಲಿ ಸಫಲಗೊಳ್ಳುತ್ತಿವೆ.

ಇತಿಹಾಸ ಪ್ರಸಿದ್ಧ ಈ ೧೨ ದೇವಾಲಯಗಳ ಗರ್ಭಗುಡಿಯಲ್ಲಿ ರುವ ಶಿವಲಿಂಗದ ಮಾದರಿಯನ್ನು, ಗರ್ಭಗುಡಿಯ ರೂಪದಲ್ಲಿಯೇ ವಿನ್ಯಾಸಗೊಳಿಸಿದ್ದು, ಅಟಲ್‌ಜೀ ಕನ್ನಡ ಭವನ ಇದೀಗ ಶಿವನ ಆಲಯವಾಗಿ ಮಾರ್ಪಟ್ಟಿದೆ. ವಿವಿಧ ರೂಪದ ಶಿವಲಿಂಗಗಳ ದರ್ಶನಕ್ಕಾಗಿ ಭಕ್ತಿ ಭಾವದ ನೆಲೆಯನ್ನಾಗಿ ಸಭಾಂಗಣ ವನ್ನು ಒಳವಿನ್ಯಾಸಗೊಳಿಸಲಾಗಿದೆ.

ನವರಾತ್ರಿ ಪ್ರಯುಕ್ತ ಪಟ್ಟಣದಲ್ಲಿ ಇದೇ ಪ್ರಥಮ ಬಾರಿಗೆ ‘ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಕಾರ್ಯಕ್ರಮವನ್ನು ತಾ.೭ರಿಂದ ೧೨ ರವರೆಗೆ ಈಶ್ವರೀಯ ವಿಶ್ವವಿದ್ಯಾಲಯ ದಿಂದ ಆಯೋಜಿಸಲಾಗಿದೆ. ತಾ. ೧೨ರವರೆಗೆ ಪ್ರತಿದಿನ ಬೆಳಿಗ್ಗೆ ೭ರಿಂದ ಸಂಜೆ ೮ರ ವರೆಗೆ ಅಟಲ್‌ಜಿ ಕನ್ನಡ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ತಾ.೧೪ರಿಂದ ಮಿನಿ ವಿಧಾನಸೌಧ ಹಿಂಬದಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ‘ನೆಮ್ಮದಿಯ ಜೀವನಕ್ಕೆ ಧ್ಯಾನವೇ ದಿವ್ಯ ಔಷದಿ’ü ಬಗ್ಗೆ ಪ್ರವಚನ ನಡೆಯಲಿದೆ.

ಪ್ರತಿದಿನ ಬೆಳಿಗ್ಗೆ ೬.೩೦ರಿಂದ ೮ ಗಂಟೆಯವರೆಗೆ ಸಾರ್ವಜನಿಕರಿಗೆ, ೧೦.೩೦ರಿಂದ ಹಿರಿಯ ನಾಗರಿಕರಿಗೆ, ಸಂಜೆ ೪ರಿಂದ ಮಹಿಳೆಯರಿಗೆ, ಸಂಜೆ ೬.೩೦ರಿಂದ ೮ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತ ಪ್ರವಚನ ಆಯೋಜಿಸಲಾಗಿದೆ.

ತಾ. ೧೨ರವರೆಗೆ ನಡೆಯುವ ಕಾರ್ಯಕ್ರಮಕ್ಕೆ ಇಂದು ಪಟ್ಟಣದ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿಗಳು ಚಾಲನೆ ನೀಡಿದರು. ಪ್ರವಚನ ನೀಡಿದ ಮೈಸೂರು ವಲಯದ ಪ್ರಧಾನ ಸಂಚಾಲಕಿ ಬಿ.ಕೆ. ಲಕ್ಷಿö್ಮÃ ಅವರು, ಭಾರತ ಆಧ್ಯಾತ್ಮಿಕ ದೇಶವಾಗಿದ್ದು, ಇಡೀ ಪ್ರಪಂಚಕ್ಕೆ ಜ್ಞಾನ ಹಂಚುವ ಶಕ್ತಿಯಿದೆ. ಆಧುನಿಕ ಯುಗದಲ್ಲಿ ಮನಸ್ಸುಗಳು ಹಂಚಿಹೋಗಿದ್ದು, ಇವುಗಳನ್ನು ಒಂದುಗೂಡಿಸುವ ಶಕ್ತಿ ಆಧ್ಯಾತ್ಮಿಕಕ್ಕೆ ಇದೆ ಎಂದರು.

ಆಧ್ಯಾತ್ಮಿಕ ಜ್ಞಾನದಿಂದ ಜೀವನದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳ ಬಹುದು. ನಕಾರಾತ್ಮಕ ಚಿಂತನೆಯಿAದ ದೂರ ಉಳಿಯಲು ಇದು ಸಹಕಾರಿ ಯಾಗಿದೆ. ಕರ್ಮದಲ್ಲಿ ಶುದ್ಧತೆಯಿಟ್ಟು ಕೊಳ್ಳಬೇಕು. ಕರ್ಮ ಶ್ರೇಷ್ಠತೆ ಮಾತ್ರ ಮಾನವನನ್ನು ಮರಣಾನಂತರವೂ ಹಿಂಬಾಲಿಸುತ್ತದೆ ಎಂದು ತಿಳಿ ಹೇಳಿದರು.

ಜೀವನವನ್ನು ಸುಧಾರಿಸಿಕೊಳ್ಳಲು ಭಗವಂತನು ಕಲಿಸುವ ರಾಜಯೋಗವು ಸಹಕಾರಿಯಾಗುತ್ತದೆ. ದಿನದ ೨೪ ಗಂಟೆಯಲ್ಲಿ ಒಂದು ಗಂಟೆಯನ್ನು ಆಧ್ಯಾತ್ಮಿಕ ಪ್ರವಚನ ಕೇಳಲು ಮೀಸಲಿಟ್ಟರೆ ಆರೋಗ್ಯ, ನೆಮ್ಮದಿ ಲಭಿಸುತ್ತದೆ ಎಂದ ಅವರು, ರಾಜಯೋಗ ಕಾರ್ಯಕ್ರಮದಲ್ಲಿ ನೀತಿ ಶಿಕ್ಷಣದ ಜೊತೆಗೆ ವ್ಯಸನಮುಕ್ತ ಆಂದೋಲನವನ್ನು ನಡೆಸಲಾಗುತ್ತಿದೆ ಎಂದರು.

ಈ ಸಂದರ್ಭ ವೀರಾಜಪೇಟೆ ಸೆಂಟರ್‌ನ ಸಂಚಾಲಕಿ ಬಿ.ಕೆ. ಕೋಮಲ, ಮೈಸೂರು ವಿದ್ಯಾರಣ್ಯಪುರದ ಸಂಚಾಲಕಿ ಬಿ.ಕೆ. ಯತ್ನ, ಜಯಲಕ್ಷಿö್ಮÃಪುರಂ ಸೆಂಟರ್‌ನ ಜಯಂತಿ, ಕುಶಾಲನಗರದ ಪಶುವೈದ್ಯರಾದ ಡಾ. ಮೋಟಯ್ಯ ಅವರುಗಳು ಉಪಸ್ಥಿತರಿದ್ದರು.