ಗೋಣಿಕೊಪ್ಪಲು, ಅ. ೭: ಅಮ್ಮತ್ತಿರ ಕುಟುಂಬದ ವತಿಯಿಂದ ಪೊನ್ನಂಪೇಟೆ ಪ್ರಾಥಮಿಕ ಶಾಲಾ ಆವರಣದಲ್ಲಿ ಅಮ್ಮಕೊಡವ ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಕ್ರೀಡಾಕೂಟ ನಡೆಯಿತು.

ಪುರುಷರಿಗಾಗಿ ಏರ್ಪಡಿಸ ಲಾಗಿದ್ದ ವಾಲಿಬಾಲ್ ಪಂದ್ಯಾಟ ಅಚ್ಚಿಯಂಡ ಹಾಗೂ ಪುತ್ತಾಮನೆ ನಡುವೆ ನಡೆಯಿತು. ಸಮಬಲದ ಹೋರಾಟದಲ್ಲಿ ಅಂತಿಮವಾಗಿ ಅಚ್ಚಿಯಂಡ ಪುತ್ತಾಮನೆಯನ್ನು ಸೋಲಿಸುವ ಮೂಲಕ ಚಾಂಪಿಯನ್ ಪಟ್ಟ ಪಡೆಯಿತು. ಪುತ್ತಾಮನೆ ರನ್ನರ್ ಆಫ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಮಹಿಳೆಯರಿಗಾಗಿ ಏರ್ಪಡಿಸ ಲಾಗಿದ್ದ ಥ್ರೋಬಾಲ್ ಪಂದ್ಯಾಟದಲ್ಲಿ ಮನ್ನಕಮನೆ ಬಲ್ಯಂಡ ತಂಡವನ್ನು ಸೋಲಿಸುವ ಮೂಲಕ ಈ ಬಾರಿಯ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ರನ್ನರ್ ಆಫ್ ಪ್ರಶಸ್ತಿಯು ಬಲ್ಯಂಡ ಪಡೆಯಿತು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಬೆಂಗಳೂರಿನ ರಿಸರ್ವ್ ಬ್ಯಾಂಕ್‌ನ ಉದ್ಯೋಗಿ ಕರ್ನಾಟಕ ರಾಜ್ಯ ಹಾಕಿ ತಂಡದ ಮಾಜಿ ನಾಯಕ ಅಮ್ಮತ್ತೀರ ಕವಿನ್ ಕೃಷ್ಣಕುಮಾರ್ ಮಾತನಾಡಿ, ಅಮ್ಮಕೊಡವ ಸಮುದಾಯವು ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ಕ್ರೀಡೆಯಲ್ಲಿ ರಾಷ್ಟç ಹಾಗೂ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಿದ ಕೀರ್ತಿ ತಂದವರಿದ್ದಾರೆ. ಇದರಿಂದ ಯುವ ಸಮುದಾಯಕ್ಕೆ ಸ್ಫೂರ್ತಿ ಸಿಗಲಿದೆ. ಕಿರಿಯ ವಯಸ್ಸಿನಲ್ಲಿಯೇ ಮಕ್ಕಳನ್ನು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವಂತ ಕೆಲಸವನ್ನು ಹೆತ್ತವರು ಮಾಡಬೇಕು. ಮೊದಲ ಬಾರಿಗೆ ಅಮ್ಮತ್ತೀರ ಕುಟುಂಬ ಕ್ರೀಡಾ ಕೂಟವನ್ನು ಆಯೋಜಿಸಿ ಆ ಮೂಲಕ ಸಮುದಾಯ ಬಾಂಧವರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿರುವುದು ಅತ್ಯಂತ ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ನಾಗರಹೊಳೆ ಹುಲಿ ಸಂರಕ್ಷಿತ

(ಮೊದಲ ಪುಟದಿಂದ) ಪ್ರದೇಶದ ಉಪಅರಣ್ಯ ಸಂರಕ್ಷಣಾಧಿಕಾರಿ, ಪುತ್ತಮನೆ ಸೀಮಾ ರಂಜನ್ ಕ್ರೀಡೆಯಲ್ಲಿ ಭಾಗವಹಿಸುವುದು ಅತಿಮುಖ್ಯ, ಸೋಲು ಗೆಲುವಿನ ಆಟದಲ್ಲಿರುವ ಅಮ್ಮಕೊಡವ ಸಮುದಾಯವು ಇತ್ತೀಚೆಗೆ ಹಲವು ಕ್ರೀಡೆಗಳನ್ನು ಆಯೋಜಿಸುವ ಮೂಲಕ ಜನಾಂಗವನ್ನು ಒಗ್ಗೂಡಿಸಿ ಮುಂದಕ್ಕೆ ತರುವ ಪ್ರಯತ್ನ ನಡೆಸುತ್ತಿದೆ. ಇದರಿಂದ ಸಮುದಾಯದ ಗೌರವವು ಹೆಚ್ಚಾಗಲಿದೆ ಎಂದರು.

ಮುಖ್ಯ ಅತಿಥಿ ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ, ಮಾಜಿ ತಾ.ಪಂ. ಅಧ್ಯಕ್ಷ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ಮಾತನಾಡಿ, ವಾರ್ಷಿಕವಾಗಿ ಕ್ರಿಕೆಟ್ ನಮ್ಮೆಗೆ ಸೀಮಿತವಾಗಿದ್ದ ಜನಾಂಗದ ಒಗ್ಗೂಡುವಿಕೆ ಇದೀಗ ಮತ್ತೊಂದು ಕ್ರೀಡೆಯನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಸಮುದಾಯ ಬಾಂಧವರು ಎಷ್ಟೇ ಒತ್ತಡವಿದ್ದರೂ ಇವುಗಳನ್ನು ಬದಿಗೊತ್ತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಆ ಮೂಲಕ ಸಮುದಾಯದಲ್ಲಿ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಎಂದರು.

ಸಮಾರAಭದ ಅಧ್ಯಕ್ಷತೆಯನ್ನು ಅಮ್ಮತ್ತೀರ ಕುಟುಂಬ ಅಧ್ಯಕ್ಷ ಅಮ್ಮತ್ತೀರ ಕೆ. ಅಶೋಕ್ ವಹಿಸಿದ್ದರು. ಆಟೋಟ ಸಮಿತಿಯ ಅಧ್ಯಕ್ಷ ಅಮ್ಮತ್ತೀರ ಆರ್. ಪರಮೇಶ್ವರ್, ಸಾಹಿತಿ, ವಿಶ್ವದಾಖಲೆ ನಿರ್ಮಿಸಿದ ಕವಯತ್ರಿ ಚಮ್ಮಣಮಾಡ ವಾಣಿ ರಾಘವೇಂದ್ರ, ಬೆಂಗಳೂರಿನ ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷೆ ಹೆಮ್ಮಚ್ಚಿಮನೆ ಡಾ. ಸರಸ್ವತಿ ಸೋಮೇಶ್, ಮೈಸೂರು ಅಮ್ಮಕೊಡವ ಸಂಘದ ಉಪಾಧ್ಯಕ್ಷ ಹೆಮ್ಮಚಿಮನೆ ಮಹೇಂದ್ರ, ಮೈಸೂರು ಅಮ್ಮಕೊಡವ ಸಮಾಜದ ಅಧ್ಯಕ್ಷ ಚಮ್ಮಣಮಾಡ ಬಿ. ಗಿರೀಶ್, ಕೋತೂರು ಅಮ್ಮ ಕೊಡವ ಸಂಘದ ಮನ್ನಕ್ಕಮನೆ ಕೆ. ರವಿ, ಪೊನ್ನಂಪೇಟೆ ಮಹಿಳಾ ಸಂಘದ ನಿರ್ದೇಶಕಿ ಅಮ್ಮತ್ತೀರ ಯಮುನಾ ಕೃಷ್ಣಕುಮಾರ್, ಮಾಯಮುಡಿ ಕಂಗಳತ್‌ನಾಡ್ ಅಧ್ಯಕ್ಷೆ ಬಾನಂಡ ಆಶಾ ಸುಧನ್, ಕೋತೂರುವಿನ ಮಹಿಳಾ ಸಂಘದ ಅಧ್ಯಕ್ಷ ಮನ್ನಕಮನೆ ಶ್ವೇತ ರವಿ, ಮಡಿಕೇರಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ನಾಳಿಯಮ್ಮನ ಬಿ. ಪಾಲಾಕ್ಷ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದೇ ಸಂದರ್ಭ ಸಿಸಿಎಫ್ ಪುತ್ತಮನೆ ಸೀಮಾ ರಂಜನ್, ವಿಶ್ವ ದಾಖಲೆ ನಿರ್ಮಿಸಿದ ಕವಯತ್ರಿ ಚಮ್ಮಣಮಾಡ ವಾಣಿ ರಾಘವೇಂದ್ರ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಅಮ್ಮತ್ತೀರ ವಾಸು ವರ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಿಂಬಿಕ, ಭೂಮಿಕ, ವಿಶ್ಮಿತ ಪ್ರಾರ್ಥಿಸಿ, ಅಮ್ಮತ್ತೀರ ರೇವತಿ ಪರಮೇಶ್ವರ್ ಸ್ವಾಗತಿಸಿ, ಅಮ್ಮತ್ತೀರ ಸ್ವಾತಿ ದಿಲನ್ ಹಾಗೂ ರಂಜಿತ್ ನಿರೂಪಿಸಿ, ಅಮ್ಮತ್ತಿರ ಆರತಿ ಸುರೇಶ್ ವಂದಿಸಿದರು.

-ಹೆಚ್.ಕೆ. ಜಗದೀಶ್