ಕಣಿವೆ, ಅ. ೭: ಕುಶಾಲನಗರ ಪಟ್ಟಣ ಪಂಚಾಯಿತಿಯ ಆಡಳಿತ ಮಂಡಳಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಜಯಲಕ್ಷಿö್ಮ ಹಾಗೂ ಉಪಾಧ್ಯಕ್ಷೆಯಾಗಿ ಪುಟ್ಟಲಕ್ಷಿö್ಮ ಸೋಮವಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.

ಪಂಚಾಯಿತಿಯ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಹೂಗುಚ್ಛ ನೀಡುವ ಮೂಲಕ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಯನ್ನು ಸ್ವಾಗತಿಸಿದರು.

ಈ ಸಂದರ್ಭ ನೂತನ ಚುನಾಯಿತ ಆಡಳಿತ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ಅನೇಕ ಸವಾಲುಗಳ ನಡುವೆ ಕಾಂಗ್ರೆಸ್ ಪಕ್ಷ ಪಟ್ಟಣದ ಆಡಳಿತದ ಗದ್ದುಗೆ ಹಿಡಿದಿದೆ. ಸಾರ್ವಜನಿಕರನ್ನು ಕಚೇರಿಯಲ್ಲಿ ಸತಾಯಿಸದೇ ಸಕಾಲದಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕಿದೆ.

ಪಂಚಾಯಿತಿಗೆ ಹೊಸದಾಗಿ ಸೇರಿರುವ ಮುಳ್ಳುಸೋಗೆ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಚುನಾಯಿತ ಆಡಳಿತ ಮಂಡಳಿ ಹೊಸ ಯೋಜನೆಗಳನ್ನು ರೂಪಿಸಬೇಕು ಎಂದರು.

ಪAಚಾಯಿತಿ ಕಚೇರಿಯೊಳಗೆ ಮುಖ್ಯಾಧಿಕಾರಿಗಳು ಬ್ರೋಕರ್‌ಗಳಿಗೆ ಆಸ್ಪದ ಮಾಡಿಕೊಡಬಾರದು. ಚುನಾಯಿತ ಸದಸ್ಯರು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಅಗತ್ಯ ಸಲಹೆ ನೀಡಿದರು.

ಕುಶಾಲನಗರ ಯೋಜನಾ ಪ್ರಾಧಿಕಾರದ. ಮಾಜಿ ಅಧ್ಯಕ್ಷ ಮಂಜುನಾಥ ಗುಂಡೂರಾವ್, ಹಾಲಿ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ, ಸದಸ್ಯರಾದ ಖಲೀಮುಲ್ಲಾ, ದಿನೇಶ್, ಸುರೇಶ್, ಪ್ರಕಾಶ್, ನವೀನ್, ಹರೀಶ್, ಶಿವಕುಮಾರ್, ಜಗದೀಶ್, ಪದ್ಮಾವತಿ, ಪ್ರಮುಖರಾದ ಕೆ.ಎನ್. ಅಶೋಕ್, ರಂಜನ್, ರೋಷನ್, ಅರುಣರಾವ್, ಕುಂಜ್ಞಿ ಕುಟ್ಟಿ ಇತರರಿದ್ದರು.