ಗೋಣಿಕೊಪ್ಪಲು, ಅ. ೭: ೪೬ನೇ ವರ್ಷದ ಶ್ರೀ ಕಾವೇರಿ ದಸರಾ ಸಮಿತಿಯ ಜನೋತ್ಸವ ಕಾರ್ಯ ಕ್ರಮದ ಅಂಗವಾಗಿ ಗೋಣಿಕೊಪ್ಪ ಶಿವಾಜಿ ಸೇನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ, ದಸರಾ ಜನೋತ್ಸವ ಪ್ರಯುಕ್ತ ಗೋಣಿಕೊಪ್ಪದ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾಟದಲ್ಲಿ ಸೂಪರ್ ಈಗಲ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಬ್ಲಾö್ಯಕ್ ಪ್ಯಾಂರ‍್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು.

ಹೊನಲು ಬೆಳಕಿನ ಕಬಡ್ಡಿ ಫೈನಲ್ ಪಂದ್ಯದಲ್ಲಿ ತೀವ್ರ ಸೆಣಸಾಟ ನಡೆದ ಸೂಪರ್ ಈಗಲ್ಸ್ ಗೋಣಿ ಕೊಪ್ಪಲುವಿನ ಬ್ಲಾö್ಯಕ್ ಫ್ಯಾಂರ‍್ಸ್ ತಂಡವನ್ನು ೨೧-೯ ಸ್ಕೋರ್‌ಗಳ ಅಂತರದಿAದ ಸೋಲಿಸಿತು. ವಿಜೇತ ತಂಡಕ್ಕೆ ರೂ. ೪೦ ಸಾವಿರ ನಗದು, ದ್ವಿತೀಯ ಸ್ಥಾನ ಪಡೆದ ಬ್ಲಾö್ಯಕ್ ಫ್ಯಾಂಥರ್ ತಂಡಕ್ಕೆ ರೂ. ೨೦ ಸಾವಿರ ನಗದು ಹಾಗೂ ಪಾರಿತೋಷಕವನ್ನು ನೀಡಲಾಯಿತು.

ಜಿಂಗಲಕ ತಂಡ ೩ನೇ ಸ್ಥಾನ ಹಾಗೂ ಎಸ್‌ಬಿಆರ್ ಟ್ರೇರ‍್ಸ್ ತಂಡ ೪ನೇ ಸ್ಥಾನ ಪಡೆಯಿತು. ತೀವ್ರ ಹಣಾಹಣಿಯಿಂದ ಕೂಡಿದ್ದ ಫೈನಲ್ ಪಂದ್ಯಾಟವನ್ನು ವೀಕ್ಷಿಸಲು ಕ್ರೀಡಾಭಿಮಾನಿಗಳು ಮೈದಾನದಲ್ಲಿ ಕಿಕ್ಕಿರಿದು ಸೇರಿದ್ದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗೋಣಿ ಕೊಪ್ಪಲುವಿನ ಎಲ್‌ಎಂಸಿ ಆಸ್ಪತ್ರೆಯ ವೈದ್ಯ ಡಾ. ಅಮೃತ್ ನಾಣಯ್ಯ, ಸಮಿತಿಯ ಗೌರವ ಅಧ್ಯಕ್ಷ ಕೊಲ್ಲಿರ ಗಯಾ ಕಾವೇರಪ್ಪ, ಗೋಣಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್‌ರೈ (ಮಂಜು), ವಕೀಲರಾದ ಪ್ರದೀಪ್ ಕುಮಾರ್, ಉದ್ಯಮಿಗಳಾದ ಎಂ.ಜಿ. ಮೋಹನ್, ಎಂ.ಎA. ನಾಗೇಶ್,

(ಮೊದಲ ಪುಟದಿಂದ) ಎಂ.ಜಿ. ನಾಗರಾಜ್, ಎಂ.ಎನ್. ಯೋಗೇಶ್, ಎಂ.ಜಿ. ಕಾಂತರಾಜ್, ಸಿದ್ದರಾಜು ವಿಶ್ವ ಹಿಂದೂ ಪರಿಷದ್‌ನ ಗೋಣಿಕೊಪ್ಪ ಅಧ್ಯಕ್ಷ ಅಮೃತ್ ರಾಜ್, ಅರುವತ್ತೋಕ್ಕಲು ಗ್ರಾ.ಪಂ. ಸದಸ್ಯ ಅಜ್ಜಿಕುಟ್ಟಿರ ಸಜನ್ ಚಂಗಪ್ಪ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಲ್‌ಎಂಸಿ ಆಸ್ಪತ್ರೆಯ ಡಾ. ಅಮೃತ್ ನಾಣಯ್ಯ ಮಾತನಾಡಿ, ಶಿವಾಜಿ ಸೇನೆಯು ಕ್ರೀಡೆಯೊಂದಿಗೆ ಹಲವು ಸಾಮಾಜಿಕ ಕಾರ್ಯಗಳನ್ನು ನಡೆಸುವ ಮೂಲಕ ಸಮಾಜದಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದೆ. ಕ್ರೀಡೆಯ ಆಯೋಜನೆಯಿಂದ ಸ್ಥಳೀಯ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ನಿರ್ಮಾಣವಾಗುತ್ತಿದೆ. ಹೊನಲು ಬೆಳಕಿನ ಪಂದ್ಯಾಟವನ್ನು ಆಯೋಜಿಸುವ ಮೂಲಕ ಸುತ್ತಮುತ್ತಲಿನ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗಿದೆ ಎಂದರು.

ವಕೀಲ ಪ್ರದೀಪ್ ಕುಮಾರ್ ಮಾತನಾಡಿ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾಕೂಟ ನಡೆಸಿರುವುದು ಶ್ಲಾಘನೀಯ ಎಂದರು. ಸಮಿತಿಯ ಅಧ್ಯಕ್ಷ ಎಲ್.ಎನ್. ಅಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೇಕ್ಷ ಹಾಗೂ ಸೋನಲ್ ಪ್ರಾರ್ಥಿಸಿ, ಶಿವಾಜಿ ಯುವ ಸೇನೆಯ ಸಂಘಟನಾ ಕಾರ್ಯದರ್ಶಿ ವಿನೋದ್ ಸ್ವಾಗತಿಸಿ, ಭಾಗ್ಯವತಿ ಅಣ್ಣಪ್ಪ ನಿರೂಪಿಸಿ, ಎ.ಜಿ. ಸುರೇಶ್ ವಂದಿಸಿದರು.