ವೀರಾಜಪೆಟೆ, ಅ. ೭: ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿ ಇತ್ತೀಚೆಗೆ ಬಡ್ತಿ ಪಡೆದು ಮಡಿಕೇರಿಗೆ ನಿಯೋಜಿತರಾಗಿದ್ದ ಬಾನಂಗಡ ಅರುಣ್ ಅವರು ಇದೀಗ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ವೀರಾಜಪೇಟೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಮಹೇಶ್ ಕುಮಾರ್ ಅವರು ಮಡಿಕೇರಿಗೆ ವರ್ಗಾವಣೆಗೊಂಡಿದ್ದು, ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್ ಅವರನ್ನು ವೀರಾಜಪೇಟೆಗೆ ವರ್ಗಾಯಿಸಲಾಗಿದೆ. ಇವರು ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿಗೆ ನಿಯೋಜಿತರಾಗಿದ್ದಾರೆ. ವೀರಾಜಪೇಟೆಯ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಹೇಶ್‌ರವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಇದೇ ಸಂದರ್ಭ ಬಾನಂಗಡ ಅರುಣ್ ಅವರಿಗೆ ಮಹೇಶ್ ಅಧಿಕಾರವನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸೂಪರಿಂಟೆAಡೆAಟ್ ಸಣ್ಣ ಜವರಯ್ಯ, ನಾಗೇಶ್, ಸರ್ಕಾರಿ ಹಾಗೂ ಲೈಸೆನ್ಸ್ ಭೂಮಾಪಕರು, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಮಾತನಾಡಿದ ಅರುಣ್, ಕಳೆದ ಐದು ವರ್ಷ ವೀರಾಜಪೇಟೆಯಲ್ಲಿ ಮಹೇಶ್ ಅವರು ಭೂಮಾಪಕರ ಕೊರತೆಯ ಒತ್ತಡದ ನಡುವೆ ಉತ್ತಮ ಕೆಲಸ ಕಾರ್ಯವನ್ನು ನಿರ್ವಹಿಸಿದ್ದಾರೆ. ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಕಚೇರಿ ಸಿಬ್ಬಂದಿಗಳೊAದಿಗೆ ಕೂಡ ಉತ್ತಮ ಒಡನಾಟವನ್ನು ಇಟ್ಟುಕೊಂಡು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹೆಚ್ಚು ಸಮಯವನ್ನು ಕಚೇರಿಯಲ್ಲಿ ಮೀಸಲಿಟ್ಟಿದ್ದರು ಎಂದರಲ್ಲದೆ ತಾನು ಇದೀಗ ಎರಡು ತಾಲೂಕಿನ ಇಲಾಖೆಯ ಜವಾಬ್ದಾರಿಯನ್ನು ಹೊತ್ತಿದ್ದು, ಎಲ್ಲಾ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಕೋರಿದÀರು. ಸಾರ್ವಜನಿಕರಲ್ಲಿ ಕುಂದುಕೊರತೆ ಇದ್ದಲ್ಲಿ ಹಾಗೂ ಕಚೇರಿ ಕೆಲಸ ಕಾರ್ಯಗಳಲ್ಲಿ ವಿಳಂಬವಾದಲ್ಲಿ ನೇರವಾಗಿ ಗಮನಕ್ಕೆ ತರುವಂತೆ ಅರುಣ್ ಅವರು ಇದೇ ಸಂದರ್ಭ ಮನವಿ ಮಾಡಿಕೊಂಡರು.