ಮಡಿಕೇರಿ, ಅ. ೮: ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ನಡೆಯುವ ಜವಾಹರ ನವೋದಯ ವಿದ್ಯಾಲಯದಲ್ಲಿ ೨೦೨೫-೨೬ನೇ ಸಾಲಿಗೆ ೯ ಮತ್ತು ೧೧ನೇ ತರಗತಿಗೆ ಖಾಲಿ ಇರುವ ಸ್ಥಾನಗಳ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಂದ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಈಗಾಗಲೇ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ತಾ. ೩೦ ರವರೆಗೆ ವಿಸ್ತರಿಸಿದ್ದು, ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.

೯ನೇ ತರಗತಿಗೆ ಅರ್ಜಿ ಸಲ್ಲಿಸುವವರು ಕೊಡಗು ಜಿಲ್ಲೆಯ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ, ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಪ್ರೌಢಶಾಲೆಯಲ್ಲಿ ೮ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಯ ಪಾಲಕರು ಕೊಡಗು ಜಿಲ್ಲೆಯ ನಿವಾಸಿಯಾಗಿದ್ದು, ವಿದ್ಯಾರ್ಥಿಯೂ ಕೂಡ ಕೊಡಗು ಜಿಲ್ಲೆಯಲ್ಲೇ ಓದುತ್ತಿರಬೇಕು. ಅಭ್ಯರ್ಥಿ ದಿನಾಂಕ ೦೧/೦೫/೨೦೧೦ ರಿಂದ ೩೧/೦೭/೨೦೧೨ ರೊಳಗೆ ಜನಿಸಿದವರಾಗಿರಬೇಕು. ಅರ್ಜಿ ಸಲ್ಲಿಸಲು ತಾ. ೩೦ ಕೊನೆಯ ದಿನವಾಗಿದೆ. ಪರೀಕ್ಷೆಯು ೨೦೨೫ ರ ಫೆಬ್ರವರಿ ೮ ರಂದು ನಡೆಯಲಿದೆ.

೧೧ನೇ ತರಗತಿಗೆ ಅರ್ಜಿ ಸಲ್ಲಿಸುವವರು ಕೊಡಗು ಜಿಲ್ಲೆಯ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ, ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಪ್ರೌಢಶಾಲೆಯಲ್ಲಿ ೧೦ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಯ ಪಾಲಕರು ಕೊಡಗು ಜಿಲ್ಲೆಯ ನಿವಾಸಿಯಾಗಿದ್ದು, ವಿದ್ಯಾರ್ಥಿಯೂ ಕೂಡಾ ಕೊಡಗು ಜಿಲ್ಲೆಯಲ್ಲೇ ಓದುತ್ತಿರಬೇಕು. ಅಭ್ಯರ್ಥಿ ದಿನಾಂಕ ೦೧/೦೬/೨೦೦೮ ರಿಂದ ೩೧/೦೭/೨೦೧೦ ರೊಳಗೆ ಜನಿಸಿದವರಾಗಿರಬೇಕು. ಅರ್ಜಿ ಸಲ್ಲಿಸಲು ತಾ. ೩೦ ಕೊನೆಯ ದಿನವಾಗಿದ. ಪರೀಕ್ಷೆಯು ೨೦೨೫ ರ ಫೆಬ್ರವರಿ ೮ ರಂದು ನಡೆಯಲಿದೆ. ವಿದ್ಯಾರ್ಥಿಗಳು hಣಣಠಿs://ಟಿಚಿvoಜಚಿಥಿಚಿ.gov.iಟಿ ಗಳಲ್ಲಿ ಸೂಕ್ತ ವಿವರ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು ಎಂದು ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.