ಮಡಿಕೇರಿ, ಅ. ೯: ಮಡಿಕೇರಿ ತಾಲೂಕು ಎಂ. ಬಾಡಗ-೧, ಅಂಗನವಾಡಿ ಕಾರ್ಯಕರ್ತೆ ಬಿ.ಬಿ. ಜಯಂತಿ ಅವರಿಗೆ ಮಡಿಕೇರಿ ತಾಲೂಕು ಮಟ್ಟದ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ದೊರಕಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಡಿಕೇರಿಯ ಬಾಲ ಭವನದಲ್ಲಿ ನಡೆದ ಅಂಗನವಾಡಿ ದಿನಾಚರಣೆ ಹಾಗೂ ಪೋಷಣ್ ಮಸಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಜಯಂತಿ ಅವರಿಗೆ ಪ್ರಶಸ್ತಿ ವಿತರಣೆ ಮಾಡಿದರು.