*ಸಿದ್ದಾಪುರ, ಅ. ೯: ನವಪಲ್ಲವ ಸಾಹಿತ್ಯ ವೇದಿಕೆ ಹಾಗೂ ನೆಲ್ಲಿಹುದಿಕೇರಿ ಕೆ.ಪಿ.ಎಸ್. ಶಾಲೆಯ ಸಂಯುಕ್ತ ಆಶ್ರಯದಲ್ಲಿ ಲೇಖಕಿ ಎಂ.ಬಿ. ಜಯಲಕ್ಷಿö್ಮ ವಸಂತ್ ಹೊಸಮನೆ ಅವರು ರಚಿಸಿರುವ ಸಾಂಚವ್ಯ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.

ನೆಲ್ಲಿಹುದಿಕೇರಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್‌ದಾಸ್ ಪುಸ್ತಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಮಡಿಕೇರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೋರನ ಸರಸ್ವತಿ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ಡಾ. ಎಸ್.ವೈ. ಗುರುಶಾಂತ ಪುಸ್ತಕ ಪರಿಚಯ ಮಾಡಿದರು.

ಮುಖ್ಯ ಅತಿಥಿಗಳಾಗಿ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕೊಡಗು ಸಾಹಿತ್ಯ ಪರಿಷತ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಸೋಮವಾರಪೇಟೆ ನಿವೃತ್ತ ಉಪನ್ಯಾಸಕಿ ತಿಲೋತ್ತಮೆ ನಂದಕುಮಾರ್, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್, ಗೋಣಿಕೊಪ್ಪಲಿನ ಸಂಗನಗೌಡ ಪಾಟೀಲ್ ಪಾಲ್ಗೊಂಡಿದ್ದರು.

ವಸಂತ್ ಕುಮಾರ್ ಹೊಸಮನೆ ಸ್ವಾಗತಿಸಿ, ರಿಜಾ ಶ್ಯಾನ್, ಆಶಾ ನಿರೂಪಿಸಿ, ಸಾನಿಧ್ಯ ಹೊಸಮನೆ ವಂದಿಸಿದರು.