ಸೋಮವಾರಪೇಟೆ, ಅ. ೯: ಕನ್ನಡಸಿರಿ ಸ್ನೇಹ ಬಳಗದ ತಾಲೂಕು ಘಟಕದ ಉದ್ಘಾಟನೆ ಮತ್ತು ಶರದೃವಿನ ಐಸಿರಿ ಕವಿಗೋಷ್ಠಿ ಹಾಗೂ ಸಮೂಹ ಜಾನಪದ ನೃತ್ಯ ಕಾರ್ಯಕ್ರಮ ಸ್ಥಳೀಯ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.

ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಇಲ್ಲಿನ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ನಂತರ ಮಾತನಾಡಿ, ಇಂದು ಶಿಕ್ಷಣದ ಮೌಲ್ಯ ಕುಂದುತ್ತಿದೆ. ಪೋಷಕರು ಶಿಕ್ಷಣದ ಜೊತೆಗೆ ಸಂಸ್ಕಾರ ವನ್ನು ಮಕ್ಕಳಲ್ಲಿ ಮೂಡಿಸಬೇಕಿದೆ. ಹೊರ ರಾಜ್ಯಗಳಲ್ಲಿ ಆಯಾ ರಾಜ್ಯದ ಪ್ರಮುಖ ಭಾಷೆಗಳಿಗೆ ಮಾನ್ಯತೆ ಕೊಡುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ಕನ್ನಡಕ್ಕೆ ಹೆಚ್ಚಿನ ಮಹತ್ವ ನೀಡದಿರುವುದು ದುರಾದೃಷ್ಟ. ಎಲ್ಲರೂ ಮೌಲ್ಯವರ್ಧಿತ ಶಿಕ್ಷಣಕ್ಕೆ ಒತ್ತು ನೀಡಬೇಕು. ಕುವೆಂಪು, ಎಸ್.ಎಲ್. ಭೈರಪ್ಪ ನವರಂತ ಸಾಹಿತಿಗಳು, ಕವಿಗಳು ಕೊಡಗಿ ನಲ್ಲಿಯೂ ಹುಟ್ಟಬೇಕು ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕುಶಾಲನಗರದ ನಿವೃತ್ತ ಕಲಾ ಶಿಕ್ಷಕ ಉ.ರಾ. ನಾಗೇಶ್ ಮಾತನಾಡಿ, ನಮ್ಮ ಮಕ್ಕಳಿಗೆ ಕೇವಲ ಶಿಕ್ಷಣ ನೀಡದೆ, ಸಂಸ್ಕಾರಯುತ ಶಿಕ್ಷಣ ನೀಡಿದಲ್ಲಿ ಮಾತ್ರ ಅವರು ಸಮಾಜದಲ್ಲ್ಲಿ ತಲೆ ಎತ್ತಿ ನಿಲ್ಲಲು ಸಾಧ್ಯ. ನಾವು ಮಕ್ಕಳಿಗೆ ಓದುವುದನ್ನು ಮಾತ್ರ ಕಲಿಸಿದ್ದೇವೆ. ಕಲಿಕಾ ಕ್ರಮವನ್ನು ತಿಳಿಸಿಲ್ಲ. ಕೇವಲ ಪರೀಕ್ಷೆಗಾಗಿ ಮಾತ್ರ ವಿದ್ಯಾರ್ಥಿಗಳು ಕಲಿಯುತ್ತಿರುವುದರಿಂದ ಅವರಲ್ಲಿ ಸಂಸ್ಕಾರದ ಅರಿವಿಲ್ಲ ಎಂದರು. ಮಕ್ಕಳಿಗೆ ಪ್ರಖ್ಯಾತ ಸಾಹಿತಿಗಳ ಪುಸ್ತಕಗಳನ್ನು ಓದಲು ಅಭ್ಯಾಸ ಮಾಡಿಸಿದಲ್ಲಿ ಮಾತ್ರ ಅವರನ್ನು ಸಾಹಿತ್ಯದೆಡೆಗೆ ಸೆಳೆಯಲು ಸಾಧ್ಯ. ದಿನಂಪ್ರತಿ ದಿನಪತ್ರಿಕೆಗಳನ್ನು ಓದುವುದರಿಂದ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡಸಿರಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ಬಳಗದಿಂದ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡು ಬರುತ್ತಿದ್ದೇವೆ. ಸಂಘ-ಸAಸ್ಥೆಗಳು ಹೆಚ್ಚಾದಂತೆ ಭಾಷಾಪರ ಚಟುವಟಿಕೆಗಳು ಹೆಚ್ಚಾಗುವ ಮೂಲಕ ಕನ್ನಡ ಬೆಳವಣಿಗೆ ಸಾಧ್ಯ. ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಾಲೂಕು ಘಟಕವನ್ನು ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಿ ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು. ವೇದಿಕೆಯಲ್ಲಿ ವಿದ್ಯಾ ನರ್ಸಿಂಗ್ ಹೋಮ್‌ನ ವ್ಯವಸ್ಥಾಪಕ ಸುಲೈಮಾನ್, ಮಹಿಳಾ ಸಮಾಜದ ಅಧ್ಯಕ್ಷೆ ಸುಮಾ ಸುದೀಪ್, ಹಾಲೆ ಬೇಲೂರು ನಿರ್ವಾಣಿ ಶೆಟ್ಟಿ, ಜವರಪ್ಪ, ನ.ಲ. ವಿಜಯ, ಎಲ್.ಎಂ. ಪ್ರೇಮ ಉಪಸ್ಥಿತರಿದ್ದರು. ಕವಿಗೋಷ್ಠಿ ಅಧ್ಯಕ್ಷತೆ ಯನ್ನು ಸಾಹಿತಿ ಕಾಜೂರು ಸತೀಶ್ ವಹಿಸಿದ್ದರು. ೨೧ ಕವಿಗಳು ತಮ್ಮ ಕವನ ವಾಚಿಸಿದರು. ಈ ಸಂದರ್ಭ ಜಾನಪದ ತಂಡಗಳಿAದ ನೃತ್ಯ ಪ್ರದರ್ಶನ ನಡೆಯಿತು.