ಮಡಿಕೇರಿ, ಅ. ೯: ಮಡಿಕೇರಿಯ ಗಣಪತಿ ಕೊಡವ ಕೇರಿಯ ಕೈಲ್ ಪೊಳ್ದ್ ಒತ್ತೊರ್ಮೆ ಕೂಟ ಮಡಿಕೇರಿಯ ಕೊಡವ ಸಮಾಜ ಸಭಾಂಗಣದಲ್ಲಿ ಸಂಭ್ರಮದಿAದ ಜರುಗಿತು. ಕೇರಿಯ ಎಲ್ಲಾ ಸದಸ್ಯರು ಅವರ ಕುಟುಂಬದ ಸದಸ್ಯರೊಂದಿಗೆ ಭಾಗವಹಿಸಿ ಪಾರಂಪರಿಕ ಆಚರಣೆಗಳನ್ನು ನಡೆಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇರಿಯ ಅಧ್ಯಕ್ಷ ಮುಕ್ಕಾಟಿರ ಅಪ್ಪಯ್ಯ ಅವರು ನಮ್ಮ ಸಂಪ್ರದಾಯದ ಆಚರಣೆ ಗಳನ್ನು ಕ್ರಮ ಬದ್ದವಾಗಿ ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು. ಕೊಡವ ಪದ್ಧತಿ ಜಗತ್ತಿನಲ್ಲೇ ವಿಶಿಷ್ಟ ಪದ್ಧತಿಯಾಗಿದ್ದು ಇದನ್ನು ಉಳಿಸುವ ಜವಾಬ್ದಾರಿ, ಹೊಣೆಗಾರಿಕೆ ಪ್ರಸ್ತುತ ಕೊಡವ ಸಂಘ, ಸಂಸ್ಥೆಗಳ ಮೇಲಿದೆ ಎಂದು ಹೇಳಿದರು.
ಮಡಿಕೇರಿ ನಗರ ಸಭೆಗೆ ಸದಸ್ಯರಾಗಿ ನಾಮನಿರ್ದೇಶನ ಗೊಂಡಿರುವ ಮಂಡಿರ ಸದಾ ಮುದ್ದಪ್ಪ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕಿರಿಯಮಾಡ ರತನ್ ಅವರನ್ನು ಸಂಘದ ನೂತನ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.
ವಿವಿಧ ಆಟೋಟ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಬಟ್ಟಿರ ರಾಜಪ್ಪ, ತೇಲಪಂಡ ಸುಬ್ಬಯ್ಯ, ಬಲ್ಲಚಂಡ ರೇಖಾ, ಚಿಲ್ಲವಂಡ ಮಧು, ಚಂಬAಡ ಸುರೇಶ್ ಮುತ್ತಪ್ಪ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸದಾ ಮುದ್ದಪ್ಪ ವರದಿ ವಾಚನ ಮಾಡಿದರು.
ಮಂಡಿರ ಯುಕ್ತ ನೀಲಮ್ಮ ಪ್ರಾರ್ಥಿಸಿ, ಚೌಂಡಿರ ಬನ್ಸಿ ಗಂಗಮ್ಮ ಸ್ವಾಗತಿಸಿ, ವಂದಿಸಿದರು.