ಗೋಣಿಕೊಪ್ಪಲು, ಅ. ೮: ಗೋಣಿಕೊಪ್ಪ ದಸರಾ ಜನೋತ್ಸವ ಅಂಗವಾಗಿ ಕಾವೇರಿ ಕಲಾ ವೇದಿಕೆಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಿಯಾಲಿಟಿ ಶೋಗಳ ಖ್ಯಾತ ಹಾಸ್ಯ ಕಲಾವಿದರಿಂದ ಹಾಸ್ಯದ ಹೊನಲು ಪ್ರೇಕ್ಷಕರಿಗೆ ನಗುವಿನ ಕಚಗುಳಿ ನೀಡಿತು. ಗಾಯಕರಿಂದ ಗಾನ ವೈಭವ ಮೂಡಿಬಂತು.

ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ರಾಗಿಣಿ ಎಂದು ಖ್ಯಾತನಾಗಿರುವ ರಾಘವೇಂದ್ರ, ಗಿಚ್ಚಿ ಗಿಲಿಗಿಲಿ, ಬಿಗ್‌ಬಾಸ್ ಖ್ಯಾತಿಯ ತುಕಾಲಿ ಸಂತೋಷ್, ಗಿಚ್ಚಿಗಿಲಿಗಿಲಿ ವಿಜೇತ ಚಂದ್ರಪ್ರಭ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರ್ಯ ಮಂಥನ ಅವರುಗಳಿಂದ ಹಾಸ್ಯದ ಸ್ಕಿಟ್‌ಗಳು ಮೂಡಿಬಂದವು.

ಸರಿಗಮಪ ಸೀಸನ್ ೨೦ರ ವಿಜೇತೆ ಅಮೂಲ್ಯ, ಫೈನಲಿಸ್ಟ್ ದರ್ಶನ್ ನಾರಾಯಣ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸ್ಥಳೀಯ ಪೊಲೀಸ್ ತಂಡದವರಿAದ ಸಾಂಸ್ಕೃತಿಕ ಕಾರ್ಯಕ್ರಮ ಜಗನ್ಮೋಹನ ನಾಟ್ಯಾಲಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.