ಸುಂಟಿಕೊಪ್ಪ, ಅ. ೯: ಫ್ಯಾನ್ಸಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ದಂಪತಿ ಮಾರಾಟಕ್ಕೆ ಇಟ್ಟಿದ್ದ ಮಕ್ಕಳು ಆಡುವ ಸ್ವಿಂಗ್ ಕಾರನ್ನು ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ.

ಕಳೆದ ಭಾನುವಾರ ದಂಪತಿ ಇಬ್ಬರು ಪುಟ್ಟ ಮಕ್ಕಳೊಂದಿಗೆ ಸುಂಟಿಕೊಪ್ಪ ಪಟ್ಟಣದ ಹೃದಯಭಾಗದಲ್ಲಿರುವ ಫ್ಯಾನ್ಸಿ ಅಂಗಡಿಗೆ ಬಂದಿದ್ದಾರೆ. ಇವರ ಪೈಕಿ ಪುರುಷ ಅಂಗಡಿಯ ಮುಂಭಾಗದಲ್ಲಿ ನಿಂತಿದ್ದ ಮಹಿಳೆ ಅಂಗಡಿಯಲ್ಲಿ ವಸ್ತು ಖರೀದಿಸುವಂತೆ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಸ್ವಿಂಗ್ ಕಾರೊಂದನ್ನು ಮುಂದೆ ಇಟ್ಟಿದ್ದಾಳೆ. ನಂತರ ಹೊರಗೆ ಬಂದು ಅದನ್ನು ಕದ್ದೊಯ್ದು ಪರಾರಿಯಾಗಿದ್ದಾರೆ.