ಸುAಟಿಕೊಪ್ಪ, ಅ. ೮: ಫ್ರೆೆ್ರಂಡ್ಸ್ ಫುಟ್ಬಾಲ್ ಕ್ಲಬ್ ಮತ್ತು ಮಿಡ್ ಸಿಟಿ ವತಿಯಿಂದ ರಾಷ್ಟçಮಟ್ಟದ ೫ ಆಟಗಾರರ ಫುಟ್‌ಬಾಲ್ ಟೂರ್ನಿಯು ತಾ. ೧೧, ೧೨ ಮತ್ತು ೧೩ ರಂದು ಸುಂಟಿಕೊಪ್ಪ ಜಿಯಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹಮೀದ್ ತಿಳಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾ. ೧೧ ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಪಂದ್ಯವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ಲತೀಫ್ ಅವರು ಉದ್ಘಾಟಿಸಲಿದ್ದಾರೆ. ಅವರೊಂದಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಉಪಾಧ್ಯಕ್ಷೆ ಶಿವಮ್ಮ ಸೇರಿದಂತೆ ಇತರರು ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹಮೀದ್ ವಹಿಸಲಿದ್ದಾರೆ. ಈ ಟೂರ್ನಿಯಲ್ಲಿ ಭಾರತದ ೩೨ ತಂಡಗಳು ಭಾಗವಹಿಸಲಿದ್ದು, ಪ್ರಥಮ ಬಹುಮಾನ ರೂ. ೭೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. ೪೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.
ತಾ. ೧೧ ಮತ್ತು ೧೨ ರಂದು ಹಗಲು ವೇಳೆಯಲ್ಲಿ ಫುಟ್‌ಬಾಲ್ ಟೂರ್ನಿ ನಡೆಯಲಿದ್ದು, ತಾ. ೧೩ ರಂದು ನಡೆಯುವ ಫೈನಲ್ ಪಂದ್ಯವು ಹೊನಲು ಬೆಳಕಿನಿಂದ ಕೂಡಿರುತ್ತದೆ. ಫೈನಲ್ ಪಂದ್ಯದ ಸಮಾರೋಪ ಸಮಾರಂಭಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್, ಗ್ರಾಮ ಪಂಚಾಯಿತಿಯ ಸದಸ್ಯರು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಪಾಂಡ್ಯನ್ ಮಾಹಿತಿ ನೀಡಿದರು.
ಈ ಟೂರ್ನಿಯನ್ನು ಸುಂಟಿಕೊಪ್ಪದ ಫುಟ್‌ಬಾಲ್ ಲೋಕಕ್ಕೆ ತಮ್ಮನ್ನು ಸಮರ್ಪಿಸಿ ನಮ್ಮನ್ನಗಲಿದ ಆಟಗಾರರಾದ ಶಿವಕುಮಾರ್, ಜಾವಮನೆ ಮುಸ್ತಫಾ, ಸಮೀರ್, ಮೂಸ ಅವರ ಸ್ಮರಣಾರ್ಥವಾಗಿ ಎಸ್.ಎಂ.ಎಸ್.ಎA. ಫುಟ್‌ಬಾಲ್ ಟೂರ್ನಿ ಆಯೋಜಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.