ಗೋಣಿಕೊಪ್ಪ, ಅ. ೯ : ದಸರಾ ಐತಿಹಾಸಿಕ ಹಿನ್ನೆಲೆ ಪ್ರಸ್ತುತ ಪಡಿಸುವಲ್ಲಿ ಮಾಧ್ಯಮಗಳ ಕೊಡುಗೆ ಅಪಾರ ಎಂದು ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಹೇಳಿದರು.

ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಪತ್ರಕರ್ತರ ಮುಕ್ತ ದಸರಾ ಕ್ರೀಡಾಕೂಟದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ದಸರಾ ಹಿನ್ನೆಲೆ, ಯಶಸ್ವಿ ಹಿಂದೆ ಮಾಧ್ಯಮಗಳ ಸಹಕಾರ ಮುಖ್ಯ. ಈ ನಿಟ್ಟಿನಲ್ಲಿ ಇಲ್ಲಿವರೆಗೂ ದಸರಾ ಮುನ್ನಡೆಸುವಲ್ಲಿ ಮಾಧ್ಯಮಗಳ ಪಾತ್ರ ಅಪಾರ ಅನುಭವ ನೀಡಿದೆ. ಅನಾವಶ್ಯಕವಾಗಿ ಗೊಂದಲ ಮಾಡುವುದರಿಂದ ಸಾಧಿಸಲು ಏನು ಉಳಿಯುವುದಿಲ್ಲ ಎಂದರು.

ಕಾವೇರಿ ದಸರಾ ಸಮಿತಿ ಉಪಾಧ್ಯಕ್ಷ ನಾಯಂದಿರ ಶಿವಾಜಿ ಮಾತನಾಡಿ, ಪತ್ರಕರ್ತರು ಜವಾಬ್ದಾರಿ ಮರೆಯಬಾರದು ಎಂದರು.

ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ ಪತ್ರಕರ್ತರ ಕೊಡುಗೆ ಗೋಣಿಕೊಪ್ಪ ದಸರಾ ಯಶಸ್ಸಿನ ಭಾಗವಾಗಿದೆ. ಉತ್ತಮ ರೀತಿಯಲ್ಲಿ ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದರು.

ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ, ಬಾಲ್ ಟು ವಿಕೆಟ್, ಒಂಟಿ ಕಾಲಿನ ಓಟ, ಗೋಣಿಚೀಲ ಓಟ, ಶಾಟ್ ಫುಟ್ ಕ್ರೀಡೆಗಳಲ್ಲಿ ಪತ್ರಕರ್ತರು ಪಾಲ್ಗೊಂಡರು. ಅಧ್ವೆöÊತ್ ಹುಂಡೈ ಶೋರೂಂ ವ್ಯವಸ್ಥಾಪಕ ಕೌಶಿಕ್ ಕಾಳಪ್ಪ ಶುಭ ಕೋರಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿದರು. ಸಹ ಕಾರ್ಯದರ್ಶಿ ಮಂಡೇಡ ಅಶೋಕ್ ಕಾರ್ಯಕ್ರಮ ನಿರೂಪಿಸಿದರು.

ಸಂಘದ ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ, ಖಜಾಂಚಿ ಅರುಣ್ ಕುಮಾರ್, ಸೇರಿದಂತೆ ದರ್ಶನ್ ದೇವಯ್ಯ, ಮನೋಜ್‌ಕುಮಾರ್ ಇತರರಿದ್ದರು.