ಶನಿವಾರಸಂತೆ, ಅ. ೯: ಸಮೀಪದ ಕೊಡ್ಲಿಪೇಟೆಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಪೂಜೆ ಹಾಗೂ ಸಂಜೆ ದುರ್ಗಾ ಕಲ್ಪೋಕ್ತ ಪೂಜೆ, ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು.

ಅರ್ಚಕ ಮಹಾಬಲೇಶ್ವರ ಜೋಷಿ ಪೂಜಾ ವಿಧಿ ನೆರವೇರಿಸಿದರು. ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದ ಅಧಿಕ ಸಂಖ್ಯೆಯ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಬಳಗದ ಅಧ್ಯಕ್ಷೆ, ಸದಸ್ಯರು ಹಾಜರಿದ್ದರು.

ಕೂಡುಮಂಗಳೂರಿನ ದೊಡ್ಡಮ್ಮತಾಯಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಬೆಳಗ್ಗಿನಿಂದ ವಿಶೇಷ ಅಭಿಷೇಕ, ಮಹಾಮಂಗಳಾರತಿ, ಪೂಜಾ ಕಾರ್ಯಕ್ರಮ ನಡೆಯಿತು. ಭಕ್ತಾದಿಗಳು ಬೆಳಗ್ಗಿನ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಆಗಮಿಸಿದ ಎಲ್ಲಾ ಭಕ್ತರಿಗೂ ಪ್ರಸಾದ ವಿನಿಯೋಗ ನಡೆಯಿತು.

ಕೂಡಿಗೆ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಶ್ರಧ್ಧಾಭಕ್ತಿಯಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಚಂಡಿಕಾ ಹೋಮ, ಮೃತ್ಯುಂಜಯ ಹೋಮ ನಡೆಯಿತು.

ದೇವಿಯ ಸನ್ನಿಧಿಯಲ್ಲಿ ಗಣಪತಿ ಹೋಮ, ಶ್ರೀ ಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಕೇರಳದ ತಂಡದವರಿAದ ನಡೆಯಿತು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಆಗಮಿಸಿದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಚಂಡಿಕಾ ಹೋಮ ಪೂಜಾ ಕಾರ್ಯಕ್ರಮದಲ್ಲಿ ಹುದುಗೂರು, ಹಾರಂಗಿ, ಕುಶಾಲನಗರ ಕೂಡಿಗೆ, ಕೂಡುಮಂಗಳೂರು ಮದಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ. ಚಾಮಿ, ಉಪಾಧ್ಯಕ್ಷ ಎನ್.ಎಸ್. ಮುತ್ತಪ್ಪ, ಕಾರ್ಯದರ್ಶಿ ಬಿ.ಎಲ್. ಸುರೇಶ್, ಸೇರಿದಂತೆ ಸಮಿತಿಯ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು

ಶನಿವಾರಸಂತೆ: ಪಟ್ಟಣದ ತ್ಯಾಗರಾಜ ಕಾಲೋನಿಯ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದಲ್ಲಿ ಶರನ್ನವರಾತ್ರಿಯ ೫ ನೇ ದಿನ ನವದುರ್ಗೆಯರ ಪಂಚಮ ಸ್ವರೂಪ ಶ್ರೀ ಸ್ಕಂದಮಾತಾ ದೇವಿಯ ಆರಾಧನಾ ಪೂಜಾ ಕೈಂಕರ್ಯ ಶ್ರದ್ಧಾಭಕ್ತಿಯಿಂದ ನೆರವೇರಿತು.

ಭಕ್ತಾದಿಗಳು ದೇವಿ ಮತ್ತು ಗುಳಿಗ ದೈವಕ್ಕೆ ಹೂ, ಹಣ್ಣುಕಾಯಿ, ನೈವೇದ್ಯ ಸಮರ್ಪಿಸಿ, ನಿಂಬೆಹಣ್ಣಿನ ದೀಪದಾರತಿ ಬೆಳಗಿದರು. ಅರ್ಚಕರಾದ ಸಂತೋಷ್ ಕರ್ಕೇರ ಹಾಗೂ ಪ್ರಕಾಶ್ಚಂದ್ರ ಸುವರ್ಣ ಪೂಜಾ ವಿಧಿ ನೆರವೇರಿಸಿದರು. ಮಹಾಮಂಗಳಾರತಿ ನಂತರ ತೀರ್ಥ-ಪ್ರಸಾದ ವಿನಿಯೋಗ ನಡೆದು ಪೂಜಾ ಕಾರ್ಯ ಸಂಪನ್ನವಾಯಿತು.ಶನಿವಾರಸAತೆ: ಪಟ್ಟಣದ ತ್ಯಾಗರಾಜ ಕಾಲೋನಿಯ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದಲ್ಲಿ ಶರನ್ನವರಾತ್ರಿಯ ೫ ನೇ ದಿನ ನವದುರ್ಗೆಯರ ಪಂಚಮ ಸ್ವರೂಪ ಶ್ರೀ ಸ್ಕಂದಮಾತಾ ದೇವಿಯ ಆರಾಧನಾ ಪೂಜಾ ಕೈಂಕರ್ಯ ಶ್ರದ್ಧಾಭಕ್ತಿಯಿಂದ ನೆರವೇರಿತು.

ಭಕ್ತಾದಿಗಳು ದೇವಿ ಮತ್ತು ಗುಳಿಗ ದೈವಕ್ಕೆ ಹೂ, ಹಣ್ಣುಕಾಯಿ, ನೈವೇದ್ಯ ಸಮರ್ಪಿಸಿ, ನಿಂಬೆಹಣ್ಣಿನ ದೀಪದಾರತಿ ಬೆಳಗಿದರು. ಅರ್ಚಕರಾದ ಸಂತೋಷ್ ಕರ್ಕೇರ ಹಾಗೂ ಪ್ರಕಾಶ್ಚಂದ್ರ ಸುವರ್ಣ ಪೂಜಾ ವಿಧಿ ನೆರವೇರಿಸಿದರು. ಮಹಾಮಂಗಳಾರತಿ ನಂತರ ತೀರ್ಥ-ಪ್ರಸಾದ ವಿನಿಯೋಗ ನಡೆದು ಪೂಜಾ ಕಾರ್ಯ ಸಂಪನ್ನವಾಯಿತು.ಮಡಿಕೇರಿ: ಗೌಡ ಮಹಿಳಾ ಒಕ್ಕೂಟದ ಕಚೇರಿಯಲ್ಲಿ ಶ್ರದ್ಧಾಭಕ್ತಿಯಿಂದ ವರ್ಷಂಪ್ರತಿಯAತೆ ಶಾರದಾಪೂಜೆಯನ್ನು ನಡೆಸಲಾಯಿತು. ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ತೀರ್ಥ ಪ್ರಸಾದ ಸ್ವೀಕರಿಸಿ ಆಶೀರ್ವಾದ ಪಡೆದುಕೊಂಡರು.