ಶನಿವಾರಸಂತೆ, ಅ. ೮: ಮತಾಂತರಗೊAಡವರು ಮನೆಗಳಲ್ಲಿ ಹಾಗೂ ದುಂಡಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾರ್ಥನಾ ಮಂದಿರ ಮಾಡುವ ಸಲುವಾಗಿ ಗ್ರಾಮ ಪಂಚಾಯಿತಿಗೆ ಎನ್‌ಓಸಿಗಾಗಿ ಅರ್ಜಿ ಸಲ್ಲಿಸಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿ ಶನಿವಾರಸಂತೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬನ್ನಿ ಮಂಟಪದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ನಂತರ ಪ್ರತಿಭಟನಾಕಾರರು ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಮೆರವಣಿಗೆಯಲ್ಲಿ ತೆರಳಿ ಸೋಮವಾರ ಪೇಟೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದು; ವ್ಯವಸ್ಥಾಪಕ ಬಿ.ಕೆ. ರವೀಂದ್ರ ಅವರು ಮನವಿ ಸ್ವೀಕರಿಸಿದರು. ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸುಳುಗಳಲೆ ಕಾಲೋನಿಯ ಮಲ್ಲೇಶ್ ಎಂಬವರ ಮನೆಯಲ್ಲಿ ಕ್ರೆöÊಸ್ತ ಧರ್ಮದ ಪ್ರಚಾರ, ಪ್ರಾರ್ಥನೆ ನಡೆಸುತ್ತಿದ್ದು, ಅಲ್ಲಿಗೆ ಬರುವ ಜನರನ್ನು ಸುಳ್ಳು ಆಸೆ-ಆಮಿಷಕ್ಕೆ ಒಳಪಡಿಸಿ ಮತಾಂತರ ಮಾಡುತ್ತಿದ್ದಾರೆ.ಈ ವಿಚಾರವಾಗಿ ಮನೆಯಲ್ಲಿ ಪ್ರಾರ್ಥನೆ ಮಾಡಲು ಎನ್.ಓ.ಸಿ.ಗೆ ಪಂಚಾಯಿತಿಗೆ ಅರ್ಜಿ ಸಲ್ಲಿಸಿರುವುದು ಸಾರ್ವಜನಿಕರಿಂದ ಹಿಂದೂ ಜಾಗರಣಾ

(ಮೊದಲ ಪುಟದಿಂದ) ವೇದಿಕೆಯ ಗಮನಕ್ಕೆ ಬಂದಿರುತ್ತದೆ ಎಂದು ಪ್ರಮುಖರು ತಿಳಿಸಿದರು.

ಈ ವಿಚಾರದ ಬಗ್ಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿರುತ್ತದೆ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿದು ಬಂದಿರುವುದರಿAದ ಸಾರ್ವಜನಿಕರ ಸಮ್ಮುಖದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರ ಗಮನಕ್ಕೆ ತರಲಾಗುತ್ತಿದೆ. ಕೆಲವು ಕಾಣದ ಶಕ್ತಿಗಳು ಅನುಮತಿ ನೀಡಬೇಕೆಂದು ಗ್ರಾಮ ಪಂಚಾಯಿತಿಗೆ ಒತ್ತಡ ಹೇರುತ್ತಿರುವುದು ಕಂಡುಬAದಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಕಾನೂನು ಹಾಗೂ ಸಾರ್ವಜನಿಕರ ಮನವಿಗೆ ವಿರೋಧವಾಗಿ ಕ್ರೆöÊಸ್ತ ಪ್ರಾರ್ಥನಾ ಮಂದಿರಕ್ಕೆ ಪರವಾನಗಿ ನೀಡಿದರೇ ಹಿಂದೂ ಜಾಗರಣಾ ವೇದಿಕೆ, ಇತರೆ ಹಿಂದೂ ಸಂಘಟನೆಗಳು ಹಾಗೂ ಹಿಂದೂಗಳು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಿಜೆಪಿ ಮುಖಂಡ ಎಸ್.ಎನ್. ರಘು, ಹಿಂದೂ ಜಾಗರಣಾ ವೇದಿಕೆಯ ತಳೂರು ಪುನೀತ್, ಮಾದಾಪುರ ಸುನೀಲ್ ಮಾತನಾಡಿದರು.

ಪ್ರತಿಭಟನೆಯ ನೇತೃತ್ವವನ್ನು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರಾದ ತಳೂರು ಪುನೀತ್, ಬಿಳಾಹ ದಿನೇಶ್, ಸೋಮಶೇಖರ್ ಪೂಜಾರಿ, ಮಾದಾಪುರ ಸುನೀಲ್, ಕೊಡ್ಲಿಪೇಟೆಯ ಅನುಜ್, ಅನಿಲ್, ದಯಾ, ಹರೀಶ್, ಹೊನ್ನರಾಜ್, ಭಜರಂಗದಳದ ಧನಂಜಯ್, ಸುರೇಶ್, ಬಿಜೆಪಿ ಮುಖಂಡರಾದ ಎಸ್.ಎನ್. ರಘು, ಅನಂತ್ ಕುಮಾರ್, ನಿತಿನ್ ವಹಿಸಿದ್ದರು. ನೂರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪೊಲೀಸ್ ಠಾಣಾಧಿಕಾರಿ ಗೋವಿಂದ್ ರಾಜ್ ಹಾಗೂ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.