ಕಣಿವೆ, ಅ. ೮: ಸೋಮವಾರ ರಾತ್ರಿ ನಂಜರಾಯಪಟ್ಟಣದ ವಿ.ಎಂ. ಸತೀಶ್ ಅವರ ಮನೆಯಂಗಳಕ್ಕೆ ದಾಳಿಯಿಟ್ಟ ಕಾಡಾನೆ ತೆಂಗಿನ ಮರವನ್ನು ನೆಲಕ್ಕುರುಳಿಸಿ ಕಾಫಿ ಗಿಡಗಳನ್ನು ಹಾಳು ಮಾಡಿದೆ.

ತೆಂಗಿನ ಮರ ಬಿದ್ದ ರಭಸಕ್ಕೆ ವಿದ್ಯುತ್ ಸಂಪರ್ಕದ ತಂತಿ ಕೂಡ ಹಾನಿಯಾಗಿದೆ ಎಂದು ಮನೆ ಮಾಲೀಕ ಸತೀಶ್ ದೂರಿದ್ದಾರೆ.