ಮಡಿಕೇರಿ, ಅ. ೮: ರೆಸಾರ್ಟ್ನಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಟೋ ಚಾಲಕನಾಗಿರುವ ಮಡಿಕೇರಿಯ ತ್ಯಾಗರಾಜ ಕಾಲೋನಿ ನಿವಾಸಿ ಎಂ. ರಫೀಕ್ (೪೦) ಬಂಧಿತ ಆರೋಪಿ. ಸೆ. ೨೯ ರಂದು ಗಾಳಿಬೀಡು ಗ್ರಾಮದ ವೈಷ್ಣವಿ ರೆಸಾರ್ಟ್ನ ಗಾರ್ಡನ್ನಲ್ಲಿ ಅಳವಡಿಸಿದ್ದ ೧೭ ಗಾರ್ಡನ್ ಲೈಟ್ಗಳು, ವಿದ್ಯುತ್ ತಂತಿ, ನೀರಿಗೆ ಅಳವಡಿಸಿದ್ದ ಮೋಟಾರ್ ಕಳವು ಆದ ಕುರಿತು ದೂರು ದಾಖಲಾಗಿತ್ತು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಾಕ್ಷಾö್ಯಧಾರಗಳನ್ನು ಕಲೆಹಾಕಿ ತಾ. ೭ ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಆರೋಪಿಯಿಂದ ನೀರಿನ ಮೋಟಾರ್ ಹಾಗೂ ೧೧ ಗಾರ್ಡನ್ ಲೈಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿವೈಎಸ್ಪಿ ಮಹೇಶ್ ಕುಮಾರ್, ಪಿಐ ಉಮೇಶ್, ಪಿಎಸ್ಐ ಶ್ರೀನಿವಾಸಲು ಹಾಗೂ ಅಪರಾಧ ಪತ್ತೆ, ತಾಂತ್ರಿಕ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.