ಮಡಿಕೇರಿ, ಅ. ೮: ಆಧುನಿಕತೆಯ ಭರಾಟೆಯ ನಡುವೆ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇವುಗಳು ಮತ್ತೆ ಪುನರ್ಜೀವನಗೊಳ್ಳಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕೊಡಗು ಜಿಲ್ಲಾ ಸದಸ್ಯ ಕಾರ್ಯದರ್ಶಿ ಶುಭ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಮಡಿಕೇರಿಯ ಬಾಲ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಫಲಾಪೇಕ್ಷೆ ಇಲ್ಲದೆ ಮಕ್ಕಳ ಏಳಿಗೆಗೆ ಶ್ರಮಿಸಿದ ಪೋಷಕರ ಬಗ್ಗೆ ಮಕ್ಕಳು ನಿರಂತರ ಕಾಳಜಿ ವಹಿಸ ಬೇಕಾಗಿದೆ ಎಂದ ಅವರು, ಹಿರಿಯರ ಮಾತಿಗೆ ಮನ್ನಣೆ ನೀಡಬೇಕು. ಅವರ ಜೀವನ ಅನುಭವದ ಮಾತುಗಳನ್ನು ಅರಿತು ಮುಂದುವರಿಯಬೇಕು ಎಂದರು. ಕಾಲಘಟ್ಟ ಬದಲಾದ ಹಾಗೆ ಹಿರಿಯರು ತಾಂತ್ರಿಕತೆಗೆ ಒಗ್ಗಿಕೊಳ್ಳ ಬೇಕು. ಆಸ್ತಿಯ ದಾಖಲೆಗಳನ್ನು ದಿಢೀರನೆ ಮಕ್ಕಳ ಹೆಸರಿಗೆ ಬರೆದಿಡುವುದು ಸೂಕ್ತವಲ್ಲ, ಈ ಸಂಬAಧ ಹಲವು ಪ್ರಕರಣಗಳು ನ್ಯಾಯಾಲಯಕ್ಕೆ ಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಜೀವನದ ಮೌಲ್ಯಗಳು ಕುಸಿಯು ತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಶಿಕ್ಷಣದಲ್ಲಿ ಜೀವನದ ಮೌಲ್ಯಗಳ ಬಗ್ಗೆ ಪಠ್ಯದಲ್ಲಿ ತಿಳಿಸುವ ಅಗತ್ಯತೆ ಉಂಟಾಗಿದೆ ಎಂದರು.

ವಕೀಲೆ ಮೀನಾ ಕುಮಾರಿ ಅವರು ಉಪನ್ಯಾಸ ನೀಡಿ, ಹಿರಿಯ ನಾಗರಿಕರು ಹೆಚ್ಚಿನ ಅನುಭವ ಹೊಂದಿದವರಾಗಿದ್ದು ಅದನ್ನು ಪ್ರತಿಯೊಬ್ಬರೂ ಬಳಸಿಕೊಳ್ಳಬೇಕು. ಸರಕಾರ ಹಿರಿಯರ ಜೀವನ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕಲ್ಪಿಸಿದೆ. ಮಕ್ಕಳು ಪೋಷಕರನ್ನು ಕಡೆಗಣಿಸುತ್ತಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಕಾನೂನು ಪ್ರಕಾರ ಮೂರು ವರ್ಷ ಜೈಲು ಮತ್ತು ಐದು ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಹಿರಿಯ ನಾಗರಿಕರ ಸಮಸ್ಯೆಗಳಿಗೆ ಕಾನೂನು ಸೇವಾ ಪ್ರಾಧಿಕಾರ ಮೂಲಕ ತೋರಿದ ಸ್ಪಂದನ ಲಭಿಸುತ್ತದೆ. ಆಸ್ತಿ ವಿಷಯದಲ್ಲಿ ಮಕ್ಕಳೊಂದಿಗೆ ವಿವಾದ ಬಂದಲ್ಲಿ ಮತ್ತೆ ಆಸ್ತಿಯನ್ನು ವಾಪಾಸ್ ಪಡೆಯುವ ಅವಕಾಶ ಹಿರಿಯ ನಾಗರಿಕರಿಗೆ ಇರುವುದಾಗಿ ಅವರು ಹೇಳಿದರು.

ಮಕ್ಕಳನ್ನು ಜವಾಬ್ದಾರಿ ಯುತವಾಗಿ ಬೆಳೆಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ. ಹಿರಿಯ ನಾಗರಿಕರು ಯಾವುದೇ ಸಂದರ್ಭ ಇತರರ ಮೇಲೆ ಅವಲಂಬನೆ ಆಗಬಾರದು, ಕೊರಗುವುದನ್ನು ಬಿಡಬೇಕು. ಸಮಸ್ಯೆಗೆ ಉತ್ತರವನ್ನು ಪಡೆಯಲು ಪ್ರಯತ್ನಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಆರ್ ಐಶ್ವರ್ಯ ಅವರು ಮಾತನಾಡಿ ಹಿರಿಯರು ನಡೆಸಿದ ಜೀವನದ ಹಾದಿಯಲ್ಲಿ ಯುವ ಪೀಳಿಗೆ ಮುಂದುವರಿಯಬೇಕು ಎಂದರು.

ಕೊಡಗು ಜಿಲ್ಲೆಯಲ್ಲಿ ಎಲ್ಲಾ ಹಿರಿಯರು ಬಹುತೇಕ ಕ್ರಿಯಾಶೀಲ ರಾಗಿದ್ದು, ಜಿಲ್ಲೆಯ ಮಾರ್ಗದರ್ಶಕ ರಾಗಿದ್ದಾರೆ ಅವರ ಅನುಭವವನ್ನು ಎಲ್ಲರೂ ಪಡೆಯುವಂತಾಗಲಿ ಎಂದು ಹೇಳಿದರು.

ವೀರಾಜಪೇಟೆ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಶಂಕರಿ ಪೊನ್ನಪ್ಪ ಮಾತನಾಡಿ, ಹಿರಿಯ ನಾಗರಿಕರ ಸಮಗ್ರ ಸಮಸ್ಯೆಗಳ ಬಗ್ಗೆ ಮಾಹಿತಿ ಒದಗಿಸಿದರು. ಜಿಲ್ಲೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ಹಂತದಲ್ಲಿ ಹಿರಿಯರು ಧೃತಿಗೆಡುವ ಅಗತ್ಯ ಇಲ್ಲ. ದುಶ್ಚಟಗಳಿಗೆ ಬಲಿಯಾಗಬೇಡಿ ಎಂದು ಅವರು ಹಿರಿಯ ನಾಗರಿಕರ ಸಮಸ್ಯೆಗಳ ಬಗ್ಗೆ ವಿಶ್ಲೇಷಣೆ ಮಾಡಿದರು.

ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ವೇದಿಕೆಯಲ್ಲಿ ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಬಾದುಮಯ್ಯ, ಮಡಿಕೇರಿ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ತಿಮ್ಮಯ್ಯ, ಸೋಮವಾರಪೇಟೆ ಅಣ್ಣಪ್ಪ ಮತ್ತು ನಿವೃತ್ತ ಅಧಿಕಾರಿಯ ಸಿಬ್ಬಂದಿಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ಕಾರ್ಯಕ್ರಮದಲ್ಲಿ ಮಕ್ಕಳ ಸಂಜೀವಿನಿ ನಾಟಿ ವೈದ್ಯೆ ಅಯಿನಮಂಡ ಲೀಲಾವತಿ ಗಣಪತಿ, ಮತ್ತು ರಾಷ್ಟಿçÃಯ ಮಟ್ಟದ ಹಿರಿಯ ಕ್ರೀಡಾಪಟು ಪಾಲೆಕಂಡ ಬೆಳ್ಳಿಯಪ್ಪ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕ್ರೀಡಾಪಟುಗಳು ಹಿರಿಯ ನಾಗರಿಕರಾದ ಸೀತಮ್ಮ ಅವರಿಂದ ಪ್ರಾರ್ಥನೆ ನೆರವೇರಿತು. ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ ಜಿ ವಿಮಲಾ ಅವರು ಸ್ವಾಗತಿಸಿದರು. ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು. ನವೀನ್ ವಂದಿಸಿದರು.