ಐಗೂರು, ಅ. ೯: ಹೊಸತೋಟದ ಬಟಕನಳ್ಳಿಯ ಜಾಮಿಯಾ ಮಸೀದಿ, ಜಮಾಅತ್ ಸಮಿತಿ ಮತ್ತು ಮಿಷನ್ ಸ್ಪಿçಂಗ್ ಫೌಂಡೇಶನ್ ಸಹಭಾಗಿತ್ವದಲ್ಲಿ ಹೊಸ ತೋಟದ ಶಾದಿಮ ಮಹಲ್ನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ನೂರಕ್ಕೂ ಅಧಿಕ ಸಂಖ್ಯೆಯ ಕಣ್ಣಿನ ದೋಷವಿರುವ ರೋಗಿಗಳನ್ನು ತಪಾಸಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಜಮಾಅತ್ ಉಪಾಧ್ಯಕ್ಷ ಉಮ್ಮರ್, ಪ್ರಧಾನ ಕಾರ್ಯದರ್ಶಿ ಸಲೀಂ ಹೊಸತೋಟ, ಸದಸ್ಯ ಉನೈಸ್ ಉಪಸ್ಥಿತರಿದ್ದರು.