ಕೂಡಿಗೆ, ಅ. ೯: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಜಿಲ್ಲಾ ಇತಿಹಾಸ ವೇದಿಕೆ, ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು, ಕುಶಾಲನಗರ ಸಹಯೋಗದಲ್ಲಿ ಇತಿಹಾಸ ಕಾರ್ಯಾಗಾರ ಮತ್ತು ಅಭಿನಂದನಾ ಸಮಾರಂಭವು ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಾಗಾರದ ಉದ್ಘಾಟನೆ ಯನ್ನು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪ ನಿರ್ದೇಶಕಿ ಕೆ. ಮಂಜುಳಾ ನೆರವೇರಿಸಿದರು. ನಂತರ ಮಾತನಾಡಿದ ಅವರು, ಇತಿಹಾಸ ಉಪನ್ಯಾಸಕರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಮಮತಾ ಇಲಾಖೆಯು ಒದಗಿಸಿರುವ ಮೂರು ಮಾದರಿ ಪ್ರಶ್ನೆ ಪತ್ರಿಕೆಗಳ ವಿವರಗಳನ್ನು ಉಪನ್ಯಾಸಕರಿಗೆ ತಿಳಿಸಿದರು. ಕನ್ನಡ ಭಾರತಿ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿ ಬಿ. ಜೈವರ್ಧನ್, ಮಾತನಾಡಿದರು. ಕೂಡಿಗೆಯ ಪ.ಪೂ. ಕಾಲೇಜು ಪ್ರಾಂಶುಪಾಲ ಡಾ. ಬಸಪ್ಪ, ಸೋಮವಾರಪೇಟೆ ನಿವೃತ್ತ ಉಪನ್ಯಾಸಕ ತಿಲೋತ್ತಮೆ ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನಾಗೇಂದ್ರ ಸ್ವಾಮಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಹಂಡ್ರAಗಿ ನಾಗರಾಜ್ ವಹಿಸಿದ್ದರು.
ಶೇ. ೧೦೦ ಫಲಿತಾಂಶ ಪಡೆದ ಕಾಲೇಜಿನ ಇತಿಹಾಸ ಉಪನ್ಯಾಸಕರು ಗಳಿಗೆ ಸನ್ಮಾನಿಸಲಾಯಿತು. ಇತಿಹಾಸ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಆರು ವಿದ್ಯಾರ್ಥಿಗಳಿಗೆ ಒಂದು ಸಾವಿರ ನಗದು ಬಹುಮಾನ ಹಾಗೂ ಕಿರು ಕಾಣಿಕೆಯನ್ನು ನೀಡಲಾಯಿತು.
ಮುಂದಿನ ತಿಂಗಳುಗಳಲ್ಲಿ ನಿವೃತ್ತರಾಗಲಿರುವ ಪ್ರಾಂಶುಪಾಲರು ಮತ್ತು ಉಪನ್ಯಾಸಕರನ್ನು ಈಗಾಗಲೇ ನಿವೃತ್ತರಾಗಿರುವ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.
ಇತಿಹಾಸ ಉಪನ್ಯಾಸಕ ಶಾಂತಿ ಸ್ವಾಗತಿಸಿ, ಶ್ವೇತಾ ಕೆ.ಎಸ್. ವಂದಿಸಿದರು. ಕೃಷ್ಣನವರು ಕಾರ್ಯಕ್ರಮವನ್ನು ನಿರೂಪಿಸಿದರು.