ಚೆಯ್ಯಂಡಾಣೆ, ಅ. ೯: ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ವತಿಯಿಂದ ನವೆಂಬರ್ ೨೨ ರಿಂದ ೨೪ ರವರೆಗೆ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟ ವನ್ನು ಆಯೋಜಿಸಲಾಗಿದೆ ಎಂದು ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್‌ನ ಕಾರ್ಯದರ್ಶಿ ವಿಲಿನ್ ಬೇಪಡಿಯಂಡ ಕ್ಲಬ್‌ನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕರಡ ಪ್ರಾಥಮಿಕ ಶಾಲಾ ಮೈದಾನದಲ್ಲಿ ೩ ದಿನಗಳ ಕಾಲ ಪಂದ್ಯಾಟ ನಡೆಯಲಿದೆ.

ಪ್ರಥಮ ಬಾರಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ (ನಮ್ಮೆ) ಪಾಂಡAಡ ಕಪ್ ನಡೆದ ಹೆಗ್ಗಳಿಕೆಗೆ ಪಾತ್ರವಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ಕರಡದಲ್ಲಿ ನಡೆಯುವ ಈ ಹಾಕಿ ಪಂದ್ಯಾವಳಿಯಲ್ಲಿ ಕಡಿಯತ್ ನಾಡಿಗೆ ಒಳಪಟ್ಟ ಗ್ರಾಮಗಳು ಭಾಗವಹಿಸಲು ಅವಕಾಶವಿದ್ದು, ಪಾಲ್ಗೊಳ್ಳುವ ತಂಡಗಳು ಹೆಸರನ್ನು ನೋಂದಾಯಿಸಬಹುದಾಗಿದೆ. ಪಂದ್ಯಾಟದಲ್ಲಿ ಬಲಿಷ್ಠ ತಂಡಗಳು ಭಾಗವಹಿಸಲಿದ್ದು ಒಟ್ಟು ೯ ಜನ ಆಟಗಾರ ಪಾಲ್ಗೊಳ್ಳುವ ತಂಡದಲ್ಲಿ ೩ ಜನ ಅತಿಥಿ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ನ. ೨೪ ರಂದು ಅಂತಿಮ ಪಂದ್ಯಾವಳಿಯ ಸಮಾ ರೋಪ ಸಮಾರಂಭ ನಡೆ ಯಲಿದೆ. ಕ್ರೀಡಾ ಅಭಿಮಾನಿಗಳು ಪಂದ್ಯಾವಳಿ ಯಶಸ್ವಿಗೆ ಸಹಕಾರ ನೀಡಬೇಕೆಂದು ವಿಲಿನ್ ಕೋರಿದರು.

ತಂಡದ ಹೆಸರನ್ನು ನೋಂದಾಯಿಸಲು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ೯೪೮೩೬೩೦೩೫೨ ಹಾಗೂ ೯೬೮೬೪೪೫೭೭೯.

ಈ ಸಂದರ್ಭ ಕ್ಲಬ್ ಅಧ್ಯಕ್ಷ ಬೇಪಡಿಯಂಡ ಬಿದ್ದಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಮೇದುರ ಗಣು ಕುಶಾಲಪ್ಪ, ಉಪಾಧ್ಯಕ್ಷ ಐತಿಚಂಡ ಭೀಮಯ್ಯ, ಕೋಶಾಧಿಕಾರಿ ಐತಿಚಂಡ ಪ್ರಕಾಶ್ ಕಾರ್ಯಪ್ಪ ಹಾಗೂ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.