ಮಡಿಕೇರಿ, ಅ. ೮: ಮಡಿಕೇರಿ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾ.೯ರಂದು (ಇಂದು) ರಾಷ್ಟಿçÃಯ ಖ್ಯಾತಿಯ ಕೋಟೇರ ಯಾಮಿನಿ ಮುತ್ತಣ್ಣ ತಂಡದವರಿAದ ದೇವಿ ಮಾರ್ಗಂ ನೃತ್ಯ ರೂಪಕ, ಮಡಿಕೇರಿಯ ವಿಂಗ್ಸ್ ಆಫ್ ಫ್ಯಾಷನ್ ತಂಡದಿAದ ನೃತ್ಯ ಸೌರಭ, ಮೈಸೂರು ನಾದ ವಿದ್ಯಾಲಯ ತಂಡದಿAದ ಮಹಿಷಾಸುರ ಮರ್ದಿನಿ ನೃತ್ಯ ರೂಪಕ, ಮಡಿಕೇರಿ ಕೂರ್ಗ್ ಮೆಲೋಡಿಸ್ ತಂಡದಿAದ ರಸಮಂಜರಿ, ಮಂಗಳೂರಿನ ಯಶಸ್ವಿ ಡ್ಯಾನ್ಸ್ ಗ್ರೂಪ್ ತಂಡದಿAದ ಕಡಲ ಹಬ್ಬ ನೃತ್ಯ ಸಂಭ್ರಮ ಹಾಗೂ ಇನ್ನಿತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.