ಮಡಿಕೇರಿ, ಅ. ೯: ‘ಕಸದ ಬುಟ್ಟಿ’ಯನ್ನು ಎದೆಗೂಡಿಗೆ ಹೋಲಿಸಿ ‘ಕಸವನ್ನೊಮ್ಮೆ ವಿಲೇವಾರಿ ಮಾಡಿ, ಹಗುರವಾಗಿ ಬಿಡೋಣ’ ಎನ್ನುತ್ತ ಭಾವನೆಗಳಿಗೆ ಅಕ್ಷರ ಸ್ಪರ್ಶ ನೀಡಿದ ಕವಯತ್ರಿ, ‘ಅಂತಿಮ ಸತ್ಯ’ ಎನ್ನುತ್ತ ಆರೋಗ್ಯವೇ ಭಾಗ್ಯ ಎಂದು ಒತ್ತಿ ಹೇಳಿದ ಸಾಹಿತಿ, ‘ಹಸಿರ ಗರ್ಭ’ ಅಲುಗಾಡಿಸಬೇಡಿ ಎಂಬ ಮನವಿ..ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತ ಆ ದಿನಗಳು ಮರಳಿ ಬರಲಿ ಎಂಬ ಆಶಯ.. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ದೂರವಾಗುತ್ತಿರುವ ಮಾನವ ಸಂಬAಧ ಎಂಬ ಕಳವಳ..

ಹೀಗೆ ತಮ್ಮೊಳಗಿನ ಭಾವನೆಗಳ ಅಭಿವ್ಯಕ್ತಿ ಮೂಲಕ ಹೃದಯಸ್ಪರ್ಶಿ ಕವನಗಳು ಮಡಿಕೇರಿ ದಸರಾ ಜನೋತ್ಸವದಲ್ಲಿ ಚಿಂತನೆಗೆ ಹಚ್ಚುವಂತೆ ಮಾಡಿದವು. ಮಡಿಕೇರಿ ದಸರಾ ಅಂಗವಾಗಿ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಗೋಷ್ಠಿಗೂ ಮುನ್ನ ನಗರದಲ್ಲಿರುವ ಕುವೆಂಪು ಪುತ್ಥಳಿಗೆ ಕವಿಗೋಷ್ಠಿ ಅಧ್ಯಕ್ಷೆ ಹಂಚೆಟ್ಟೀರ ಫ್ಯಾನ್ಸಿ ಮುತ್ತಣ್ಣ, ಬಹುಭಾಷ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ಸೇರಿದಂತೆ ಸಮಿತಿ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿದರು.

೫೯ ಬಹುಭಾಷೆ ಕವನಗಳು

ಕನ್ನಡ, ಕೊಡವ, ಅರೆಭಾಷೆ, ಮರಾಠಿ, ತುಳು, ಮಲೆಯಾಳಂ, ಕುಂಬಾರ, ಕೊಂಕಣಿ, ಹವ್ಯಕ, ಇಂಗ್ಲೀಷ್, ಯರವ ಭಾಷೆಯ ಒಟ್ಟು ೫೯ ಕವನಗಳು ಗೋಷ್ಠಿಯಲ್ಲಿ ವಾಚನವಾದವು. ಕೊಡಗು ಸೇರಿದಂತೆ ಇತರ ಜಿಲ್ಲೆಗಳಿಂದಲೂ ಕವಿಗಳು ಆಗಮಿಸಿ ಕವನ ವಾಚಿಸಿದರು.

ಭಾವನೆಗಳ ತೋರಣ ಕಟ್ಟಿದ ಕವಿಗಳು

೭೮ ವರ್ಷದ ಅಜ್ಜಿ ಮಕ್ಕಳಿಗೆ ತನ್ನ ಮಾತಿನ ಮೂಲಕ ಹೇಳುವ ಬುದ್ದಿವಾದವನ್ನು ಹವ್ಯಕ ಭಾಷೆಯಲ್ಲಿ ಹುಲಿತಾಳದ ಭಾಗೀರಥಿ ‘ಅಬ್ಬೆ ಹೇಳದ್ದು’ ಶೀರ್ಷಿಕೆಯ ಕವನದ ಮೂಲಕವೇ ಅಭಿವ್ಯಕ್ತಿಗೊಳಿಸಿದರು. ‘ಹೀಂಗೆ ಏಕೆ ಆತ್’ ಅರೆಭಾಷೆಯ ಕವನ ಮೂಲಕ ದುರಾಸೆಯಿಂದ ಆಗುತ್ತಿರುವ ಪರಿಸರ ನಾಶ, ಮುಂದಿನ ಭವಿಷ್ಯಕ್ಕೆ ಮಾರಕ ಎಂಬ ಕಳವಳವನ್ನು ಪೆರಾಜೆಯ ತೇಜೇಶ್ವರ್ ಕುಂದಲ್ಪಾಡಿ ವ್ಯಕ್ತಪಡಿಸಿದರು. ಗಾಳಿಗೂ ಅಲುಗಾಡದ ಕಲ್ಲಿನಂತೆ ಇರಬೇಕು ಸತಿ-ಪತಿ ಸಂಬAಧ ಎಂದು ಪಂದ್ಯAಡ ರೇಣುಕಾ ಸೋಮಯ್ಯ ತಮ್ಮ ಕೊಡವ ಭಾಷೆಯ ‘ವಡಿಯ ಪೊಣ್ಣ್ರ ಸಮ್ಮಂದ’ ಕವನದ ಮೂಲಕ ಹೇಳಿದರು.

ಮಡಿಕೇರಿಯ ವೇದಶ್ರೀ ‘ಸ್ವಾತಂತ್ರö್ಯ ಅಮೃತ ಮಹೋತ್ಸವ’ ಎಂಬ ಕವನದ ಮೂಲಕ ಭವ್ಯ ಭಾರತದ ಪರಂಪರೆಯನ್ನು ಬಿಂಬಿಸಿದರು. ಕೆ. ಶೋಭಾ ರಕ್ಷಿತ್ ‘ನಗುವಿನಲ್ಲಿ ಕಾಣಬಹುದು ಚೈತನ್ಯದ ನಾಕ, ಆರೋಗ್ಯವೇ ಭಾಗ್ಯವೆಂಬುದೆ ಸತ್ಯ ಕೊನೆತನಕ’ ಎನ್ನುವ ಸಾಲಿನ ಮೂಲಕ ‘ಅಂತಿಮ ಸತ್ಯ’ ಎಂಬ ಕವನವನ್ನು ಮುಂದಿಟ್ಟರು. ಮಡಿಕೇರಿಯ ಎಂ. ಅಬ್ದುಲ್ಲಾ ‘ಶೀರ್ಷಿಕೆ ಇಲ್ಲದ ಕವನ’ ಎಂಬ ಶೀರ್ಷಿಕೆಯ ಕವನದ ಮೂಲಕ ವಯನಾಡಿನ ದುರಂತವನ್ನು ಜ್ಞಾಪಿಸಿದರು. ‘ಆ ತಾರೆ ಹೊಳೆದಂತೆ, ಈ ನಿನ್ನ ಮೊಗವು, ಹೂ ಮಲ್ಲೆ ಬಿರಿದಂತೆ, ಈ ನಿನ್ನ ನಗುವು’ ಎನ್ನುತ್ತ ‘ಕೋಮಲೆ’ ಕವನವನ್ನು ರಾಧಿಕ ವಿಶ್ವನಾಥ್ ವರ್ಣನಾತ್ಮಕವಾಗಿ ವಿವರಿಸಿದರು. ಬೆಂಗಳೂರಿನ ಅಯ್ಯೇಟ್ಟಿ ಶ್ರುತಿ ‘ಹಸಿರ ಗರ್ಭ’ ಕವನದ ಮೂಲಕ ಸಸ್ಯ ಸಂಕುಲ ನಾಶ ಮಾಡದಂತೆ ಸಂದೇಶ ಸಾರಿದರು. ‘ಹೆಣ್ಣೇ ನೀ ಎಚ್ಚೆತ್ತುಕೋ’ ಎಂಬ ಕವನದಲ್ಲಿ ಕುಕ್ಕನೂರು ರೇಷ್ಮ ಮನೋಜ್ ಸಮಾಜದಲ್ಲಿ ಸ್ತಿçà ಶೋಷಣೆಗೆ ಕನ್ನಡಿ ಹಿಡಿದರು. ‘ಬಣ್ಣಿಸಲೇ ನಿನ್ನ.?’ ಎಂದ ಕಡಬದ ಕವಿ ಅನನ್ಯ ಸುಬ್ರಮಣ್ಯ ಮೌನಾತ್ಮಗಳನ್ನು ಅಕ್ಷರ ರೂಪದಲ್ಲಿ ಬಣ್ಣಿಸಿದರು. ಗೋಣಿಕೊಪ್ಪದ ಎಂ.ಬಿ. ಜಯಲಕ್ಷಿö್ಮ ಬಿರುಬಿಸಿಲನ ನಡುವೆ ‘ಮುಂಗಾರಿನ ಸೊಬಗು’ ಕವನದ ಮೂಲದ ಮುದ ನೀಡಿದರು. ಸ್ಮೃತಿ ಪಟಲದಿಂದ ಮರೆಯಾಗುತ್ತಿರುವ ಬಾಲ್ಯದ ದಿನಗಳನ್ನು ‘ಗತಿಸಿದ ಬಾಲ್ಯ’ ಎಂಬ ಕವನದ ಮೂಲಕ ಕಸ್ತೂರಿ ಗೋವಿಂದಮಯ್ಯ ನೆನಪು ಮಾಡಿಸಿದರು. ಯರವ ಭಾಷೆಯಲ್ಲಿ ಗೋಣಿಕೊಪ್ಪದ ವೈ.ಬಿ. ಚುಬ್ಬಿ ‘ಪಣಿಯ ಬಾಕು’ ಎಂಬ ಕವನದಲ್ಲಿ ಕಾಡುಮಕ್ಕಳ ಜೀವನಕ್ರಮ ಕುರಿತು ವಿವರಿಸಿದರು. ವೀರಾಜಪೇಟೆಯ ಚೈತ್ರ ‘ದೋಸ್ತಿ’ ಎಂಬ ಯರವ ಭಾಷೆಯ ಕವನ ಹೇಳಿದರು.

(ಮೊದಲ ಪುಟದಿಂದ) ಗೋಣಿಮರೂರಿನ ಯು.ಎನ್. ರೇಖಾ ‘ಕಸದ ಬುಟ್ಟಿ’, ಮಡಿಕೇರಿಯ ನಿರ್ಮಲ ಪೂವಯ್ಯ ‘ಭೂಮಾತೆ’, ಕೊಡಂಬೂರು ಗ್ರಾಮದ ಈರಮಂಡ ಹರಿಣಿ ವಿಜಯ್ ‘ಮನುಜಮತ ವಿಶ್ವಪಥ’, ಮೈಸೂರಿನ ವಾಣಿ ರಾಘವೇಂದ್ರ ‘ಚೆಲುವಿ ಇವಳು’, ಬಂಟ್ವಾಳದ ಕುಶಾಲನಗರದ ತೇಜಸ್ ಮೂರ್ತಿ ‘ನಿರೀಕ್ಷಣೆ’, ಮೂರ್ನಾಡಿನ ಕಿಗ್ಗಾಲು ಗಿರೀಶ್ ‘ಹುಣ್ಣಿಮೆಯ ಚಂದಮಾಮ’, ಶನಿವಾರಸಂತೆಯ ಎಂ.ಕೆ. ಭೂಮಿಕ ‘ಬೊಗಸೆಗಣ್ಣಿನ ಒಲವು’, ಮಡಿಕೇರಿಯ ಹೇಮಲತಾ ಪೂರ್ಣಪ್ರಕಾಶ್ ‘ಲೇಖನಿಯೊಳಗೆ’, ಅಮ್ಮತ್ತಿಯ ಬಾದುಮಂಡ ಲೀನಾ ಕಾಳಯ್ಯ ‘ಹೃದಯ ಗೀತೆ’ ಎಂಬ ಕವನ ವಾಚಿಸಿದರು.

ಕಾನ್‌ಬೈಲಿನ ಮಾಲಾಮೂರ್ತಿ ‘ನೆಪವಿರದ ನೆನಪುಗಳು’, ಕೊಡಗರಹಳ್ಳಿಯ ಮಮತ ಪಾಣತ್ತಲೆ ‘ಮರಳಿ ಬರಲಿ ಬಾಲ್ಯ’, ಬೆಸೂರಿನ ಕೃತಜ್ಞಾ ‘ಅದೇಕೋ ಗೊತ್ತಾಗಲೇ ಇಲ್ಲ’, ಕುಶಾಲನಗರದ ವಿಜಯಶ್ರೀ ಅನಿಲ್ ಕೆದಿಲಾಯ ‘ಭರವಸೆಯ ಬೆಳಕು’, ಮೂರ್ನಾಡಿನ ಕೆ. ಪಲ್ಲವಿ ‘ವಿಧಿಯಾಟದ ತಿರುವು’, ಕುಶಾಲನಗರದ ನಳಿನಿ ಸತ್ಯನಾರಾಯಣ ‘ಪರಿಚ್ಛೇದ’, ಮಡಿಕೇರಿಯ ಅಂಬೆಕಲ್ಲು ಸುಶೀಲ ಅವರು ‘ಮೆರೆಯಲಿ ನಮ್ಮ ಭಾರತ’, ಅಲ್ಲಾರಂಡ ವಿಠಲ ನಂಜಪ್ಪ ‘ಸತ್ತ ಮೇಲೆ ಕೊಡುವ ಮುತ್ತಿಗೆ ರುಚಿ ಇಲ್ಲ’ ಎಂಬ ಕವನಗಳನ್ನು ವಾಚಿಸಿದರು.

ಕೊಡವ ಭಾಷೆಯಲ್ಲಿ ಉಳುವಂಗಡ ಕಾವೇರಿ ಉದಯ ‘ಜಾರ್’ನ ತುಳಿ’, ಬೆಂಗಳೂರಿನ ಪ್ರೀತು ಗಣೇಶ್ ‘ತಾಮನೆರ ಕೊದಿ’, ಬಲಂಬೇರಿಯ ಯಶೋಧ ‘ಪಡ್ಚವನ ಕೊಡಗ್ರ ಬಗ್ಗೆ’, ಅರೆಭಾಷೆಯಲ್ಲಿ ಸೋಮವಾರಪೇಟೆಯ ಹೇಮಂತ್ ಪಾರೇರ ‘ಚಾಮು ಗೂಡೆದು ಮದ್ವೆ’, ತಣ್ಣಿಮಾನಿಯ ರಂಜಿತ್ ದಾಮೋದರ ಕುದುಪಜೆ ‘ಅ(ತ್ಯ)ನಾಚಾರ’, ಮಡಿಕೇರಿಯ ಕಟ್ರತನ ಲಲಿತಾ ಅಯ್ಯಣ್ಣ ‘ಕರ್ಮಚಾರಿ’ ಎಂಬ ಕವನವನ್ನು ಮುಂದಿಟ್ಟರು.

ಮರಾಠಿ ಭಾಷೆಯಲ್ಲಿ ಕೋಡಿಹಾಳದ ಎಚ್. ಭೀಮರಾವ್ ವಾಷ್ಠರ್ ‘ಜಗಾತ್ಲ ಥೊರ್ಲ ದೇವ ಕಿಷ್ಣ’, ತುಳು ಭಾಷೆಯಲ್ಲಿ ಪುತ್ತೂರಿನ ನಾರಾಯಣ ಕುಂಬ್ರ ‘ಹಳ್ಳಿದ ಬದ್ಕ್’, ಪೆರ್ಲಂಪಾಡಿಯ ಪೂರ್ಣಿಮ ‘ನಮ್ಮ ತುಳುನಾಡ್’, ಮದೆನಾಡಿನ ಪಿ.ಯು.ಸುಂದರ ‘ನಮ್ಮ ಕನ್ನಡಿಗೆರ್’ ಎಂಬ ಕವನವನ್ನು ನಿರೂಪಿಸಿದರು.

ಮಲೆಯಾಳಂ ಭಾಷೆಯಲ್ಲಿ ವೀರಾಜಪೇಟೆಯ ಎಂ.ಪಿ. ಪುಷ್ಪಲತ ‘ಓರ್ಮಯಿಲ್ ಓಣಂ’, ಮಂಗಳೂರಿನ ಡಾ. ಮೀನಾಕ್ಷಿ ರಾಮಚಂದ್ರ ‘ಅಮ್ಮಯೋಡೊಪ್ಪೊಂ ಓರು ಯಾತ್ರ’, ಕುಂಭಾರ ಭಾಷೆಯಲ್ಲಿ ಬೆಟ್ಟಗೇರಿಯ ಸುನಿತಾ ವಿಶ್ವನಾಥ್ ‘ನಿತ್ಯ ಕನ್ನಡ’, ಕೊಂಕಣಿಯಲ್ಲಿ ಮಂಗಳೂರಿನ ಕಲ್ಲಚ್ಚು ಮಹೇಶ್ ನಾಯಕ್ ‘ಮಕ್ಹಾ ತೂ ಶಕ್ತಿ ದೀ ದೇವಿ’ ಎಂಬ ಕವನವನ್ನು ಓದಿದರು.

ಇಂಗ್ಲೀಷ್‌ನಲ್ಲಿ ಮಡಿಕೇರಿಯ ಎನ್.ಜೆ. ಸಂಜನಾ ‘ದಿ ಲಾಂಗ್ವೆಜ್ ಲಾಕ್‌ಡೌನ್’, ಕೆ.ಆರ್. ಜೀವಿತ ‘ಮಡಿಕೇರಿ ದಸರಾ ಲೈಟ್’, ಹಿಂದಿಯಲ್ಲಿ ಗೋಣಿಕೊಪ್ಪದ ಎಂ.ಹೆಚ್. ಪ್ರಜ್ಞಾ ‘ಗುರು’ ಕವನ ಓದಿದರು. ಮಡಿಕೇರಿಯ ಗೌರಮ್ಮ ಮಾದಮ್ಮಯ್ಯ , ವೀರಾಜಪೇಟೆಯ ಎ.ವಿ. ಮಂಜುನಾಥ್ ಚುಟುಕು ಕವನಗಳನ್ನು ಪ್ರಸ್ತುತಪಡಿಸಿದರು.