ಕಣಿವೆ, ಅ. ೯: ವಿಶ್ವ ದಲ್ಲಿಯೇ ವಿಶೇಷ ವಾಗಿರುವ ಕೊಡವರ ಆಚಾರ ವಿಚಾರಗಳು ಹಾಗೂ ಸಂಸ್ಕೃತಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಜೋಪಾನವಾಗಿ ಒಯ್ಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ ಹೇಳಿದರು. ಕೂಡಿಗೆಯ ಕೊಡವ ಕೂಟದ ವತಿಯಿಂದ ಸ್ಥಳೀಯ ರೈತ ಸಹಕಾರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕೈಲ್ದ್ಪೊಳ್ದ್ ಸಂತೋಷ ಕೂಟ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕೊಡವ ಕೂಟಕ್ಕೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದರು. ಕೊಡವ ಕೂಟದ ಅಧ್ಯಕ್ಷ ವಾಂಚೀರ ಮನು ನಂಜುAಡ ಮಾತನಾಡಿ, ಕೊಡವರ ಜಮ್ಮಾ ಆಸ್ತಿ ಪಾಸ್ತಿಗಳನ್ನು ಪರಭಾರೆ ಮಾಡದಂತೆ ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ಈ ನಿಟ್ಟಿನಲ್ಲಿ ಯುವ ಸಮುದಾಯ ಕೊಡವ ಪರಂಪರೆ ಹಾಗೂ ಸಂಸ್ಕೃತಿಯ ವಾರಸುದಾರ ರಾಗಬೇಕು. ಹಾಗಾಗಿ ಮಕ್ಕಳಿಗೆ ಪೋಷಕರು ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ವಿಶೇಷ ಶ್ರಮ ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕೊಡವ ಕೂಟದ ಕಾರ್ಯದರ್ಶಿ ಮುಂಡAಡ ಸತೀಶ್, ಖಜಾಂಚಿ ದೇಯಂಡ ಪೊನ್ನಪ್ಪ, ನಿರ್ದೇಶಕರಾದ ಕೊಳುವಂಡ ಮಂದಪ್ಪ, ಪಟ್ಟಡ ಚಿಟ್ಟಿಯಪ್ಪ, ಮುಕ್ಕಾಟಿರ ಅಪ್ಪಣ್ಣ, ಐಮುಡಿಯಂಡ ರಮೇಶ್, ಪಟ್ಟಡ ಬೀನಾ, ಪಾಲೆಂಗಡ ಸುಜಾತ ಇದ್ದರು. ಐಮುಡಿಯಂಡ ಸವಿತಾ ಸ್ವಾಗತಿಸಿ, ಕೋಡಿಮಣಿಯಂಡ ಸವಿತಾ ನಿರೂಪಿಸಿ, ಪಾಲೆಂಗಡ ಸುಜಾತ ಪ್ರಾರ್ಥಿಸಿ, ಕೊಳುವಂಡ ಮಂದಪ್ಪ ವಂದಿಸಿದರು.