ಸುಂಟಿಕೊಪ್ಪ, ಅ. ೮: ಸಮೀಪದ ಕೊಡಗರಹಳ್ಳಿ ಎಜುಕೇಷನ್ ಸೊಸೈಟಿ ಶಿಕ್ಷಣ ಸಂಸ್ಥೆಯ ವಾರ್ಷಿಕ ಮಹಾಸಭೆ ಶಾಲಾ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಅಧ್ಯಕ್ಷರಾಗಿ ಎಸ್.ಬಿ.ಶಂಕರ್, ಕಾರ್ಯದರ್ಶಿಗಳಾಗಿ ಕುಂಜಿಲನ ಎಸ್. ಮಂಜುನಾಥ್, ಅವರು ಪುನರಾಯ್ಕೆಗೊಂಡರು.
ಈ ಸಂದರ್ಭ ಉದ್ಯಮಿ ಕೆ.ವಿ.ಕಾಮತ್ ಅವರು ಚೌಡಿಕಾಡು ತೋಟದ ಮಾಲೀಕರಾದ ಹರೀಶ್ಪೈ ಅವರ ಮುಖಾಂತರ ರೂ. ೮ಲಕ್ಷ ರೂಪಾಯಿಗಳನ್ನು ಶಾಲಾ ಅಭಿವೃದ್ಧಿಗೆ ದೇಣಿಗೆಯಾಗಿ ನೀಡಿದರು.
ಈ ಸಂದರ್ಭ ಉಪಾಧ್ಯಕ್ಷ ಮೋಟಂಡ ಕುಟ್ಟಪ್ಪ , ಆಡಳಿತ ಮಂಡಳಿ ಸದಸ್ಯರಾದ ಅಕ್ಕಪ್ಪಂಡ ಸನ್ನಿ ಕಾರ್ಯಪ್ಪ, ನಾಗಚೆಟ್ಟಿರ ಕುಟ್ಟಯ್ಯ, ಚೆಟ್ಟೋಳಿರ ದತ್ತ ಸೋಮಣ್ಣ, ಮಂಡುವAಡ ಚಂಗಪ್ಪ, ಬಿ.ಡಿ.ಸುಭಾಶ್, ಆಡಳಿತ ಮಂಡಳಿ ಸದಸ್ಯರು ಸುಂಟಿಕೊಪ್ಪ ನಾಡು ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಕೆ.ಇಂದಿರಾ, ಶಿಕ್ಷಕ ಪ್ರತಿನಿಧಿಯಾದ ಎಂ.ಎಸ್.ದಿನೇಶ್ ಹಾಜರಿದ್ದರು.