ಮಡಿಕೇರಿ, ಅ. ೮: ಗೋಣಿಕೊಪ್ಪ ಜನೋತ್ಸವ ಅಂಗವಾಗಿ ತಾ. ೯ ರಂದು (ಇಂದು) ರಾತ್ರಿ ವಿವಿಧ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೯ ಗಂಟೆಗೆ ರಮೇಶ್ ಸಾರಥ್ಯದ ಸೈಕ್ಲೋನ್ ಹಾಗೂ ಅವಿನಾಶ್ ಸಾರಥ್ಯದ ರಿಫ್ಲೆಕ್ಷನ್ ನೃತ್ಯ ತಂಡದಿAದ ನೃತ್ಯ ಪ್ರದರ್ಶನ.
ಸಂಜೆ ೬ ರಿಂದ ೮ ಗಂಟೆಗೆ ಗೋಣಿಕೊಪ್ಪಲಿನ ಚಿಗುರು ತಂಡದವರಿAದ ನೃತ್ಯ ಕಾರ್ಯಕ್ರಮ ಮತ್ತು ಪೊನ್ನಂಪೇಟೆಯ ಪ್ರೇಕ್ಷ ಭಟ್ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ನಾಟ್ಯ ಸಂಕಲ್ಪ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.