ಗೋಣಿಕೊಪ್ಪಲು, ಅ. ೮: ಶ್ರೀರಾಮ, ಕೃಷ್ಣ, ಸರಸ್ವತಿ, ಆಂಜನೇಯ, ದುರ್ಗಿ, ಓನಕೆ ಓಬವ್ವ ಹೀಗೆ ವೈವಿಧ್ಯಮಯ ವೇಷತೊಟ್ಟು ವೇದಿಕೆಗೆ ಮೆರುಗು ನೀಡಿದ ಚಿಣ್ಣರು, ನೃತ್ಯ, ಗಾಯನ ಮೂಲಕ ಕಲಾಲೋಕ ಸೃಷ್ಟಿಸಿ ಆಟೋಟದಲ್ಲಿ ಸೈ ಎನಿಸಿಕೊಂಡ ಮಕ್ಕಳು..

ಗೋಣಿಕೊಪ್ಪ ದಸರಾ ಜನೋತ್ಸವ ಅಂಗವಾಗಿ ಕಾವೇರಿ ದಸರಾ ಸಮಿತಿಯಿಂದ ನಡೆದ ೮ನೇ ವರ್ಷದ ಮಕ್ಕಳ ದಸರಾ ಎಲ್ಲಾ ವಯೋಮಾನದವರನ್ನು ತನ್ನತ್ತ ಸೆಳೆಯಿತು. ವೈವಿಧ್ಯಮಯ ಕಾರ್ಯಕ್ರಮಗಳಿಂದ ಚಿಣ್ಣರಲೋಕವೇ ನಿರ್ಮಾಣವಾಗಿತ್ತು.

ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ೪೬ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಮೆರುಗು ನೀಡಿದರು.

ವಿವಿಧ ಭಾಗಗಳಿಂದ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಗಳಾದರು. ವಿವಿಧ ಶಾಲೆಯ ಶಿಕ್ಷಕರು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು. ಮಕ್ಕಳ ಪ್ರೋತ್ಸಾಹಕ್ಕೆ ಪೂರಕವಾಗಿ ಪೋಷಕರು

(ಮೊದಲ ಪುಟದಿಂದ) ಕೂಡ ಕಾರ್ಯಕ್ರಮದಲ್ಲಿ ಆಗಮಿಸಿ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಕಣ್ತುಂಬಿಕೊAಡರು. ಕಾವೇರಿ ಕಲಾವೇದಿಕೆಯು ವಿದ್ಯಾರ್ಥಿಗಳಿಂದ, ಪೋಷಕರಿಂದ ತುಂಬಿ ತುಳುಕುತ್ತಿತ್ತು. ಈ ಬಾರಿ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಪಾಲ್ಗೊಂಡು ಸಡಗರ ಸಂಭ್ರಮ ಅನುಭವಿಸಿದರು. ಕಾವೇರಿ ಕಲಾ ವೇದಿಕೆಯಲ್ಲಿ ಛದ್ಮವೇಷÀ, ಜಾನಪದ ಗೀತೆ, ನೃತ್ಯ ಸ್ಪರ್ಧೆ,ಕ್ಲೇ ಮಾಡಲಿಂಗ್, ಸೈಕಲ್‌ರೇಸ್ ಸ್ಪರ್ಧೆ, ಮ್ಯೂಸಿಕಲ್ ಚೇರ್, ಕಾಲುಚೀಲ ಓಟ, ಕಪ್ಪೆ ಹಾರುವುದು, ಬುಕ್ ಬ್ಯಾಲೆನಿಂಗ್ಸ್ ಸೇರಿದಂತೆ ವಿವಿಧ ಆಟೋಟಗಳು ನಡೆದವು. ವಿಜೇತ ತಂಡಕ್ಕೆ ಕಾವೇರಿ ದಸರಾ ಸಮಿತಿ ವತಿಯಿಂದ ಬಹುಮಾನವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿ ವಿದ್ಯಾರ್ಥಿಗಳಿಗೆ ಪ್ರಸಂಶನಾ ಪತ್ರ ನೀಡಲಾಯಿತು.

ವಿಶೇಷವಾಗಿ ನಡೆದ ಉದ್ಘಾಟನೆ

ಪ್ರತಿಭಾವಂತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ದಸರಾ ಉದ್ಘಾಟನೆಗಳನ್ನು ವಿಶೇಷ ರೀತಿಯಲ್ಲಿ ಮಾಡುವ ಮೂಲಕ ಗಮನ ಸೆಳೆದರು.

ಉದ್ಘಾಟನೆ ಕಾರ್ಯಕ್ರಮ ಪ್ರತಿಭಾವಂತ ವಿದ್ಯಾರ್ಥಿ ತಿತಿಮತಿ ಮೊರಾರ್ಜಿ ಶಾಲೆಯ ಪಿ.ಎಸ್. ಅಮೂಲ್ಯ ಅಧ್ಯಕ್ಷತೆಯಲ್ಲಿ ಜರುಗಿತು. ಕ್ರೀಡಾಕೂಟದ ಉದ್ಘಾಟನೆಯನ್ನು ತಿತಿಮತಿ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ಪಿ.ಸಿ. ಅಯ್ಯಪ್ಪ ನೆರವೇರಿಸಿದರು. ದಸರಾ ಸಮಿತಿಯ ಅಧ್ಯಕ್ಷ ಪ್ರಮೋದ್ ಗಣಪತಿ, ಮಕ್ಕಳ ದಸರಾ ಸಮಿತಿ ಅಧ್ಯಕ್ಷ ತಿರುನೆಲ್ಲಿಮಾಡ ಜೀವನ್, ಬಿ.ಇ.ಓ. ಡಾ. ರವಿ, ಬಿಆರ್‌ಸಿ ಬಿಂದು, ಅಕ್ಷರ ದಾಸೋಹ ಅಧಿಕಾರಿ ಕೆ.ಆರ್. ರಾಜೇಶ್, ದಸರಾ ಸಮಿತಿಯ ಪದಾಧಿಕಾರಿಗಳಾದ ಕಂದಾ ದೇವಯ್ಯ, ಚಂದನ್ ಕಾಮತ್, ಶೀಲಾ ಬೋಪಣ್ಣ, ಧ್ಯಾನ್ ಸುಬ್ಬಯ್ಯ, ಎಂ. ಮಂಜುಳ, ಚಂದನ ಮಂಜುನಾಥ್, ಧನಲಕ್ಷಿö್ಮ, ಓಮನ, ಪಿ.ಹೆಚ್. ಆಲೀಮ, ಎಂ. ಗಿರಿಜಾ ಮತ್ತಿತರರು ಪಾಲ್ಗೊಂಡಿದ್ದರು. -ಹೆಚ್.ಕೆ. ಜಗದೀಶ್