ಗೋಣಿಕೊಪ್ಪಲು, ಅ. ೯: ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಗೋಣಿಕೊಪ್ಪದಲ್ಲಿ ದಸರಾ ಅಂಗವಾಗಿ ಮಂಗಳವಾರದAದು ಭರತನಾಟ್ಯ, ಉತ್ತರ ಭಾರತದ ಶಾಸ್ತಿçÃಯ ನೃತ್ಯ ಕಥಕ್ ನೃತ್ಯಗಳು, ಸ್ಟಿಕ್ ಡ್ಯಾನ್ಸ್ ಗಮನ ಸೆಳೆದವು.

ಮೈಸೂರಿನ ನವೀನ್ ಮತ್ತು ತಂಡ ಕ್ರಿಯೇಟಿವ್ ಸ್ಟಿಕ್ ಡ್ಯಾನ್ಸ್ ಗಮನ ಸೆಳೆಯಿತು. ಕೇರಳದ ವೈಬ್ರೇಟ್ ಮ್ಯೂಸಿಕಲ್ ಕಲಾತಂಡದಿAದ ನಾಡನ್ ಪಾಟ್, ಹಾಸ್ಯ, ರಾಕ್ ಸ್ಟಾರ್ ಕೌಶಿಕ್ ಪ್ರದೀಶ್ ಕಲಾಭವನ್ ಅವರಿಂದ ಸಂಗೀತ ರಸಮಂಜರಿ ನಡೆಯಿತು.