ಮಡಿಕೇರಿ, ಅ. ೮: ವಿಜಯದಶಮಿ ಪ್ರಯುಕ್ತ ತಾ.೧೨ ರಂದು ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ನಡೆಯಲಿರುವ ಮಂಟಪಗಳ ಶೋಭಾಯಾತ್ರೆ ಸುಸೂತ್ರವಾಗಿ ನೆರವೇರಲು ಒಟ್ಟು ಸುಮಾರು ೨,೦೦೦ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮಾಹಿತಿ ನೀಡಿದರು. ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ೮೦ ಪಿ.ಎಸ್.ಐ, ೧೨೬ ಎ.ಎಸ್.ಐ, ೯೭೫ ಕಾನ್ಸ್ಟೆಬಲ್ ಹಾಗೂ ಹೆಡ್ ಕಾನ್ಸ್ಟೆಬಲ್‌ಗಳು, ೩೬೦ ಹೋಂ ಗಾರ್ಡ್ಸ್ ಸೇರಿದಂತೆ ಒಟ್ಟು ೨,೦೦೦ ಪೊಲೀಸ್ ಸಿಬ್ಬಂದಿ ಮಡಿಕೇರಿ - ಗೋಣಿಕೊಪ್ಪ ದಸರಾದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಿದ್ದಾರೆ. ಕಳೆದ ದಸರಾದಲ್ಲಿ ನಡೆದಂತಹ ಸಣ್ಣಪುಟ್ಟ ಲೋಪಗಳನ್ನು ಈ ಬಾರಿ ಸರಿಪಡಿಸಿಕೊಂಡು ಇಲಾಖೆ ಕಾರ್ಯನಿರ್ವಹಿಸಲಿದೆ ಎಂದರು.

ಮಡಿಕೇರಿ ದಸರಾಗೆ ೧.೫ ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದೆ. ಮಹಿಳೆಯರು ಹಾಗೂ ಮಕ್ಕಳ ರಕ್ಷಣೆ, ಟ್ರಾಫಿಕ್ ನಿರ್ವಹಣೆ ಹಾಗೂ ಪಾರ್ಕಿಂಗ್ ವ್ಯವಸ್ಥೆ - ಇವು ಮೂರು ಪ್ರಮುಖ ವಿಚಾರಗಳಾಗಿದ್ದು, ಈ ನಿಟ್ಟಿನಲ್ಲಿ ವಿಶೇಷ ತಂಡಗಳನ್ನು ರಚಿಸಿ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸಲಿದೆ ಎಂದು ಅವರು ಮಾಹಿತಿ ನೀಡಿದರು. ನಗರದಲ್ಲಿನ ನಿರ್ಜನ ಪ್ರದೇಶಗಳಲ್ಲಿ, ಹೆಚ್ಚಾಗಿ ಹೊರವಲಯದಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಯಲು ಪೊಲೀಸ್ ಜೀಪ್ ಹಾಗೂ ಚೀತಾ ದ್ವಿಚಕ್ರ ವಾಹನಗಳನ್ನು ಪೊಲೀಸ್ ಸಿಬ್ಬಂದಿ ಬಳಸಿ ಗಸ್ತು ನಡೆಸಲಿದ್ದಾರೆ ಎಂದು ಕೂಡ ಈ ಸಂದರ್ಭ ಅವರು ಮಾಹಿತಿ ನೀಡಿದರು. ಶೋಭಾಯಾತ್ರೆ ವೀಕ್ಷಿಸಲು

(ಮೊದಲ ಪುಟದಿಂದ) ಆಗಮಿಸುವ ಸಾರ್ವಜನಿಕರು, ಸುರಕ್ಷತಾ ದೃಷ್ಟಿಯಿಂದ ಹಳೆಯ ಮತ್ತು ಸುರಕ್ಷಿತವಲ್ಲದ ಕಟ್ಟಡವನ್ನು ಏರದಂತೆ ಎಸ್.ಪಿ ಮನವಿ ಮಾಡಿದರು. ಕಟ್ಟಡದ ಮಾಲೀಕರು ಕೂಡ ಈ ಬಗ್ಗೆ ಗಮನಹರಿಸುವಂತೆ ಸೂಚಿಸಿದರು.

ಗೋಣಿಕೊಪ್ಪ ದಸರಾದಲ್ಲಿಯೂ ಹೆಚ್ಚಿನ ಜನ ಸೇರುವುದರಿಂದ ವಿಜಯದಶಮಿಯಂದು ಸಂಜೆ ೬ ರಿಂದ ಮುಂದಿನ ದಿನ ಬೆಳಿಗ್ಗೆ ೬ ಗಂಟೆಯವರೆಗೆ ಸಂಚಾರಿ ವ್ಯವಸ್ಥೆಯಲ್ಲಿ ನಿಯಂತ್ರಣ ಮಾಡಲಾಗುವುದು. ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಸಂಚಾರಿ ವ್ಯವಸ್ಥೆಯಲ್ಲಿ ಬದಲಾವಣೆ - ೧೧ ಕಡೆಗಳಲ್ಲಿ ಚೆಕ್‌ಪೋಸ್ಟ್ಗಳು

ತಾ.೧೨ರ ಮಧ್ಯಾಹ್ನ ೩ ಗಂಟೆಯಿAದ ತಾ.೧೩ರ ಬೆಳಿಗ್ಗೆ ೧೦ ಗಂಟೆವರೆಗೆ ನಗರಕ್ಕೆ ವಾಹನ ಪ್ರವೇಶ ನಿಷೇಧ

ತಾ.೧೨ ರಂದು ದಶಮಂಟಪಗಳ ಶೋಭಾಯಾತ್ರೆಯ ಅಂಗವಾಗಿ ಮಡಿಕೇರಿ ನಗರದಲ್ಲಿ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ವಾಹನಗಳ ಸಂಚಾರದಲ್ಲಿ ಹಾಗೂ ವಾಹನಗಳ ನಿಲುಗಡೆ ಸಂಬAಧ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಎಸ್‌ಪಿ ಹೇಳಿದರು.

ತಾ.೧೨ ರಂದು ಮಧ್ಯಾಹ್ನ ೩ ಗಂಟೆಯಿAದ ತಾ.೧೩ರ ಬೆಳಿಗ್ಗೆ ೧೦ ಗಂಟೆಯವರೆಗೆ ಮಡಿಕೇರಿ ನಗರದ ಒಳಗೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಇದೇ ಸಮಯದಲ್ಲಿ ಮಡಿಕೇರಿ ನಗರದ ದಶಮಂಟಪಗಳು ಸಾಗುವ ಹಾಗೂ ಜನಸಂದಣಿ ಇರುವ ರಸ್ತೆಗಳಲ್ಲಿ ಪ್ರಮುಖವಾಗಿ ಮಡಿಕೇರಿ ನಗರದ ಸುದರ್ಶನ ವೃತ್ತದಿಂದ ಜಿ.ಟಿ ವೃತ್ತದವರೆಗೆ, ರಾಜಾಸೀಟ್‌ನಿಂದ ಎಂ.ಎA ವೃತ್ತದವರೆಗೆ, ಎಂ.ಎA ವೃತ್ತದಿಂದ-ಹಳೇ ಖಾಸಗಿ ಬಸ್ ನಿಲ್ದಾಣ, ಹಳೇ ಖಾಸಗಿ ಬಸ್ ನಿಲ್ದಾಣದಿಂದ ಐ.ಜಿ ವೃತ್ತದವರೆಗೆ, ಐ.ಜಿ ವೃತ್ತದಿಂದ ಬನ್ನಿ ಮಂಟಪದವರೆಗೆ, ಗಣಪತಿ ಬೀದಿ, ಕಾಲೇಜು ರಸ್ತೆ, ಎಸ್.ಬಿ.ಐ ಜಂಕ್ಷನ್, ಮೋಣಪ್ಪ ಗ್ಯಾರೇಜ್‌ನಿಂದ ಹಳೇ ಖಾಸಗಿ ಬಸ್ ನಿಲ್ದಾಣದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ಮಾಡುವುದನ್ನು ನಿಷೇಧಿಲಾಗಿದೆ. ತಾ.೧೨ ರಂದು ಸಂಜೆ ೪ ಗಂಟೆಯಿAದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣ ಹಾಗೂ ಖಾಸಗಿ ಬಸ್ ನಿಲ್ದಾಣದ ಆವರಣವನ್ನು ಮಡಿಕೇರಿ ನಗರದ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡಲು ಬಳಸಿಕೊಳ್ಳಬಹುದು ಎಂದು ಎಸ್.ಪಿ ಕೆ. ರಾಮರಾಜನ್ ಅವರು ಮಾಹಿತಿ ನೀಡಿದರು.

ಪೊಲೀಸ್ ಇಲಾಖೆಯಿಂದ ನಿಗದಿ ಪಡಿಸಿರುವ ಆಟೋದಲ್ಲಿ ಸಂಚಾರಕ್ಕೆ ವ್ಯವಸ್ಥೆ

ಮಡಿಕೇರಿ ದಸರಾ ವೀಕ್ಷಿಸಲು ಹೊರಗಿನಿಂದ ಆಗಮಿಸುವವರಿಗೆ ವಿವಿಧ ಚೆಕ್‌ಪೋಸ್ಟ್ಗಳಿಂದ ಆಟೋ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನಗಳನ್ನು ನಿಗದಿತ ಸ್ಥಳಗಳಲ್ಲಿ ನಿಲುಗಡೆಗೊಳಿಸಿ ನಿಗದಿಪಡಿಸಿರುವ ಆಟೋಗಳಲ್ಲಿ ನಿಗದಿತ ದರ ಪಾವತಿಸಿ ಸಾರ್ವಜನಿಕರು ನಗರಕ್ಕೆ ಆಗಮಿಸಬಹುದಾಗಿದೆ.

ತಾಳತ್ತಮನೆ ಚೆಕ್ ಪೋಸ್ಟ್ ಮತ್ತು ಪಾರ್ಕಿಂಗ್ ವಿವರ

ಮಂಗಳೂರು ರಸ್ತೆ, ನಾಪೋಕ್ಲು ರಸ್ತೆ ಭಾಗಮಂಡಲ ರಸ್ತೆ ಕಡೆಯಿಂದ ದಸರಾ ವೀಕ್ಷಿಸಲು ಬರುವ ಸಾರ್ವಜನಿಕರ ವಾಹನಗಳನ್ನು ತಾಳತ್ತಮನೆ ಜಂಕ್ಷನ್ ಚೆಕ್ ಪೋಸ್ಟ್ನಲ್ಲಿ ತಡೆಯಲಾಗುವುದು. ಅಲ್ಲಿ ಸಾರ್ವಜನಿಕರು ತಮ್ಮ ವಾಹನಗಳನ್ನು ತಾಳತ್ತಮನೆ ಜಂಕ್ಷನ್ ಸಮೀಪದ ನೇತಾಜಿ ಯುವಕ ಸಂಘದ ಮೈದಾನ ಹಾಗೂ ತಾಳತ್ತಮನೆಯ ಗ್ಲಾಸ್ ಬ್ರಿಡ್ಜ್ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಬೇಕು. ತಾಳತ್ತಮನೆ ಚೆಕ್ ಪೋಸ್ಟ್ನಿಂದ ಮಡಿಕೇರಿ ಜಿ.ಟಿ ವೃತ್ತಕ್ಕೆ ಬರಲು ಪೊಲೀಸ್ ಇಲಾಖೆಯಿಂದ ನಿಗದಿಪಡಿಸಿದ ಆಟೋಗಳಲ್ಲಿ ನಿಗದಿ ಪಡಿಸಿದ ದರವನ್ನು ಮಾತ್ರ ನೀಡಿ ಸಾರ್ವಜನಿಕರು ಆಟೋದಲ್ಲಿ ಜಿ.ಟಿ ವೃತ್ತಕ್ಕೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ.

ಮೇಕೇರಿ ಜಂಕ್ಷನ್ ಚೆಕ್‌ಪೋಸ್ಟ್ ಹಾಗೂ ಪಾರ್ಕಿಂಗ್ ವಿವರ

ವೀರಾಜಪೇಟೆ, ಮೂರ್ನಾಡು ರಸ್ತೆಯಿಂದ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಮೇಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡಿ ಅಲ್ಲಿಂದ ಜಿ.ಟಿ ವೃತ್ತಕ್ಕೆ ಬರಲು ಮೇಕೇರಿ ಚೆಕ್‌ಪೋಸ್ಟ್ನಲ್ಲಿ ಪೊಲೀಸ್ ಇಲಾಖೆಯಿಂದ ನಿಯೋಜಿಸಲ್ಪಟ್ಟ ಆಟೋಗಳ ಸಹಕಾರದೊಂದಿಗೆ ನಿಗದಿಪಡಿಸಿದ ಪ್ರಯಾಣದ ದರವನ್ನು ನೀಡಿ ಪ್ರಯಾಣ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಕಮಾನು ಗೇಟ್ ಚೆಕ್ ಪೋಸ್ಟ್ ಹಾಗೂ ಪಾರ್ಕಿಂಗ್ ವಿವರ

ಮೈಸೂರು ರಸ್ತೆ ಕಡೆಯಿಂದ ಬರುವ ಸಾರ್ವಜನಿಕರ ವಾಹನಗಳನ್ನು ಕಮಾನುಗೇಟ್ ಚೆಕ್‌ಪೋಸ್ಟ್ನಲ್ಲಿ ಪರಿಶೀಲಿಸಲಾಗುವುದು. ಅಲ್ಲಿಂದ ವಾಹನಗಳು ಕಮಾನುಗೇಟ್‌ನಿಂದ ಚೈನ್‌ಗೇಟ್‌ವರೆಗೆ, ನಂತರ ಗೌಡಸಮಾಜಕ್ಕಾಗಿ ತೆರಳಿ ಮ್ಯಾನ್ಸ್ ಕಾಂಪೌAಡ್ ಮೈದಾನ ಹಾಗೂ ಜೂನಿಯರ್ ಕಾಲೇಜ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವ ಸೌಲಭ್ಯವಿದೆ.

ಸಂಪಿಗೆಕಟ್ಟೆ ಚೆಕ್ ಪೋಸ್ಟ್ ಹಾಗೂ ಪಾರ್ಕಿಂಗ್ ವಿವರ

ಸೋಮವಾರಪೇಟೆಯಿಂದ ಬರುವ ವಾಹನಗಳನ್ನು ಸಂಪಿಗೆಕಟ್ಟೆಯಿAದ ಎ.ವಿ ಶಾಲೆಗಾಗಿ ಮುತ್ತಪ್ಪ ದೇವಸ್ಥಾನ ಮಾರ್ಗವಾಗಿ ತೆರಳಿ ಸಂತ ಜೋಸೆಫರ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಅಬ್ಬಿಫಾಲ್ಸ್ ಜಂಕ್ಷನ್ ಕಡೆಯಿಂದ ಬರುವ ವಾಹನಗಳಿಗೆ ಪಾರ್ಕಿಂಗ್

ಅಬ್ಬಿಫಾಲ್ಸ್ ಜಂಕ್ಷನ್ ಕಡೆಯಿಂದ ಬರುವ ಸಾರ್ವಜನಿಕರ ವಾಹನಗಳನ್ನು ಸೆಂಟ್ ಜೋಸೆಫ್ ಶಾಲಾ ಮೈದಾನ ಅಥವಾ ಐ.ಟಿ.ಐ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು.

ಗಾಳಿಬೀಡು ಚೆಕ್‌ಪೋಸ್ಟ್ ಹಾಗೂ ಪಾರ್ಕಿಂಗ್ ವಿವರ

ಗಾಳಿಬೀಡು ಹಾಗೂ ಕಾಲೂರು ಕಡೆಯಿಂದ ಬರುವ ಸಾರ್ವಜನಿಕರ ವಾಹನಗಳು ಐ.ಟಿ.ಐ ಕಾಲೇಜು ಅಥವಾ ಎಫ್.ಎಂ.ಸಿ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.