ಮಡಿಕೇರಿ, ಅ. ೯: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಮಡಿಕೇರಿ ನಗರ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಮಹಿಳೆಯರಿಂದ ತಾ.೮ರಂದು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶನಿವಾರಸಂತೆಯ ಜ್ಞಾಹ್ನವಿ ಆಚಾರ್ಯ ಅವರ ನಾಟ್ಯ ನಿಲಯದ ನೃತ್ಯ ಸಂಸ್ಥೆ ವತಿಯಿಂದ ಭರತನಾಟ್ಯ, ಟೀಂ ರೆವಿನ್ಯೂ ತಂಡದಿAದ ನೃತ್ಯ, ಮಡಿಕೇರಿಯ ಹಿಂದೂ ಮಲೆಯಾಳಿ ಸಂಘದಿAದ ನೃತ್ಯ, ಕನ್ನಡ ಸಾಹಿತ್ಯ ಪರಿಷತ್ ತಂಡದಿAದ ಯಕ್ಷ ನೃತ್ಯ, ಮಡಿಕೇರಿ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದಿಂದ ಭರತನಾಟ್ಯ, ಕಕ್ಕಬೆ ಪೂಮಾಲೆ ಕುಡಿಯ ಸಾಂಸ್ಕೃತಿಕ ಸಮಿತಿಯಿಂದ ಬುಡಕಟ್ಟು ನೃತ್ಯ, ಭಾರತೀಯ ಜೀವವಿಮಾ ನಿಗಮ ತಂಡದಿAದ ನೃತ್ಯ, ಮೂರ್ನಾಡು ಹಿಂದೂ ಮಲೆಯಾಳಿ ಸಂಘದಿAದ ನೃತ್ಯ, ನೆಲ್ಲಕ್ಕಿ ಯುವತಿ ಮಂಡಳಿಯಿAದ ನೃತ್ಯ, ಶಿಕ್ಷಕಿಯರ ಲಹರಿ ತಂಡದಿAದ ನೃತ್ಯ ವೈಭವ, ಕೊಡವ ಪೊಮ್ಮಕ್ಕಡ ಕೂಟದಿಂದ ನೃತ್ಯ, ಬಲಮುರಿಯ ದೇವನೂರು ಗೌಡ ಒಕ್ಕೂಟದಿಂದ ಸಾಂಸ್ಕೃತಿಕ ವೈಭವ, ಸರಿಗಮಪ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ಮೂಡಿಬಂದವು.