ಮಡಿಕೇರಿ, ಅ. ೮: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಮಡಿಕೇರಿ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ತಾ. ೭ರಂದು ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋನಿ ರಿಯಾಲಿಟಿ ಶೋ ಸೂಪರ್ ಸ್ಟಾರ್ ಸಿಂಗರ್ ವಿಜೇತ ಕೇರಳದ ಪುಟಾಣಿ ಆವಿರ್ಭವ್ ಹಾಗೂ ಬೆಂಗಳೂರಿನ ಐಶ್ವರ್ಯ ಅವರುಗಳ ಹಾಡುಗಾರಿಕೆ ಗಮನ ಸೆಳೆದವು. ಇದರೊಂದಿಗೆ ಕುಶಾಲನಗರದ ಏಂಜೆಲ್ ವಿಂಗ್ಸ್ ತಂಡ, ಮಡಿಕೇರಿಯ ನಾಟ್ಯ ನಿಕೇತನ ತಂಡ, ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡ, ಕುಶಾಲನಗರದ ಕೇಡನ ಪ್ರಗತಿ ಮತ್ತು ತಂಡದಿAದ ನೃತ್ಯ ಪ್ರದರ್ಶನ ಮೂಡಿ ಬಂದವು.