ಚೆಯ್ಯಂಡಾಣೆ, ಅ. ೯: ಎಡಪಾಲ ಸಮೀಪದ ಕಿಕ್ಕರೆಯ ಜುಮಾ ಮಸೀದಿಯ ಸಮೀಪ ಎಸ್.ಎಸ್.ಎಫ್, ಎಸ್.ವೈ.ಎಸ್. ಹಾಗೂ ಕೆ.ಎಂ.ಜೆ. ಸಂಯುಕ್ತ ಆಶ್ರಯದಲ್ಲಿ ವಾರ್ಷಿಕ ಮಹ್ಲರತುಲ್ ಬದ್ರಿಯಾ ಹಾಗೂ ಎಸ್.ಎಸ್.ಎಫ್. ಕಡಂಗ ಸೆಕ್ಟರ್‌ನ ಅಲ್ ತದ್ ಕೀರ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕೊಡಗು ಜಿಲ್ಲಾ ನಾಇಬ್ ಖಾಝಿಯಾಗಿದ್ದ ಮಾರ್ಹೂಂ ಮಹಮೂದ್ ಮುಸ್ಲಿಯಾರ್ ಅವರ ಖಬರ್ ಸ್ಥಾನದಲ್ಲಿ ಝಿಯಾರತ್ ಹಾಗೂ ಪ್ರಾರ್ಥನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೊಟ್ಟಮುಡಿ ಮರ್ಕಜ್ ಮುದರಿಸ್ ಶಿಯಾಬುದ್ದೀನ್ ನೂರಾನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಸ್.ಎಸ್.ಎಫ್. ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಸ್ ಅಮಾನಿ ಪುಷ್ಪಗಿರಿ ಇಂದಿನ ಯುವ ಸಮೂಹ ಸಾಮಾಜಿಕ ಜಾಲತಾಣಕ್ಕೆ ದಾಸರಾಗುತ್ತಿರುವುದು ಕಳವಳಕಾರಿ.
ಯುವಕ, ಯುವತಿಯರು ಧರ್ಮದ ಆದರ್ಶಕ್ಕೆ ಧಕ್ಕೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದು, ಇದನ್ನು ನಿಯಂತ್ರಿಸಲು ಎಸ್.ಎಸ್.ಎಫ್. ಕಠಿಣ ಶ್ರಮ ವಹಿಸುತ್ತಿದೆ.
ಯುವ ಸಮೂಹ ಸಾಮಾಜಿಕ ಜಾಲತಾಣಕ್ಕೆ ಬಲಿಯಾಗದೆ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದರು.
ಮಹ್ಲರತುಲ್ ಬದ್ರಿಯಾ ಮಜ್ಲಿಸ್ ಹಾಗೂ ಪ್ರಾರ್ಥನೆಗೆ ಕಿಕ್ಕರೆ ಜುಮಾ ಮಸೀದಿಯ ಖತೀಬ್ ಷಂಶುದ್ದೀನ್ ಅಮ್ಜದಿ ನೇತೃತ್ವ ವಹಿಸಿದ್ದರು.
ಇದೇ ಸಂದರ್ಭ ತಾ. ೧೩ ರಂದು ಚಾಮಿಯಾಲದಲ್ಲಿ ನಡೆಯಲಿರುವ ಎಸ್.ಎಸ್.ಎಫ್. ಕಡಂಗ ಸೆಕ್ಟರ್ ಸಾಹಿತ್ಯೋತ್ಸವದ ಪೋಸ್ಟರ್ ಅನ್ನು ಅನಸ್ ಅಮಾನಿ ಪುಷ್ಪಗಿರಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಝುಬೈರ್ ಸಅದಿ, ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ರಾಜ್ಯ ಸಮಿತಿಯ ಮುಜೀಬ್, ಡಿವಿಷನ್ ಅಧ್ಯಕ್ಷ ಖಮರುದ್ದಿನ್ ಅನ್ವಾರಿ, ಕಾರ್ಯದರ್ಶಿ ರಶಾದ್, ಮೊಯ್ಯದ್ದೀನ್ ಮುಸ್ಲಿಯಾರ್ ಕಡಂಗ, ಕಿಕ್ಕರೆ ಮಸೀದಿಯ ಅಧ್ಯಕ್ಷ ಬಶೀರ್, ಮಜೀದ್ ಮುಸ್ಲಿಯಾರ್, ಸ್ವಾಗತ ಸಮಿತಿಯ ಚೆರ್ಮನ್ ಹಂಝ, ಕನ್ವಿನರ್ ಅಶ್ರಫ್ ಕಡಂಗ, ಷಂಶುದ್ದೀನ್, ಸೂಫಿ ಕಿಕ್ಕರೆ, ಕಡಂಗ ಸೆಕ್ಟರ್ ಅಧ್ಯಕ್ಷ ಸಮ್ಮಸ್, ಕಾರ್ಯದರ್ಶಿ ರಾಝಿಕ್, ಸವಾದ್, ರಮಿಝ್, ಶಫೀಕ್, ಸಾಬಿತ್, ಅರ್ಫಾಜ್, ಮುರ್ಶಿದ್, ಉನೈಸ್, ಅನಸ್, ಎಸ್.ಎಸ್.ಎಫ್.ಎಸ್.ವೈ.ಎಸ್., ಕೆ.ಎಂ.ಜೆ. ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕನ್ವಿನರ್ ಶಮೀರ್ ಸಖಾಫಿ ಸ್ವಾಗತಿಸಿ, ಹಂಝ ನಿರೂಪಿಸಿ, ಶಮ್ಮಸ್ ವಂದಿಸಿದರು.