ಕಣಿವೆ, ಅ. ೯: ದಸರಾ ಅಂಗವಾಗಿ ಮೈಸೂರಿನಲ್ಲಿ ನಡೆದ ಫುಟ್ಬಾಲ್ ಕ್ರೀಡಾ ಪಂದ್ಯಾವಳಿಯಲ್ಲಿ ಕುಶಾಲನಗರದ ಮೊಹಮ್ಮದ್ ಇಬ್ರಾಹಿಂ (ಟಿಲ್ಲು) ನೇತೃತ್ವದ ತಂಡ ಫುಟ್ಬಾಲ್‌ನಲ್ಲಿ ಅಮೋಘವಾದ ಸಾಧನೆ ಮಾಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ವಿಜೇತ ಟಿಲ್ಲು ನೇತೃತ್ವದ ತಂಡಕ್ಕೆ ಮುಖ್ಯಮಂತ್ರಿ ಟ್ರೋಫಿ ಲಭಿಸಿದೆ.
ಮೈಸೂರು ವಿಭಾಗವನ್ನು ಪ್ರತಿನಿಧಿಸುವ ದಸರಾ ಪಂದ್ಯಾವಳಿ ಯಲ್ಲಿ ಕೊಡಗಿನ ಫುಟ್ಬಾಲ್ ಆಟಗಾರರಾದ ಮೊಹಮ್ಮದ್ ಇಬ್ರಾಹಿಂ (ಟಿಲ್ಲು) ನಾಯಕ.
ಮೊಹಮ್ಮದ್ ಇರ್ಷಾದ್, ಸುಂಟಿಕೊಪ್ಪದ ದಿವಾಕರ್, ಉನೈಸ್, ಕುಟ್ಟಿ ಇರ್ಷಾದ್, ಅಸಾಮುದ್ದೀನ್, ಅಮ್ಮತ್ತಿಯ ವಿಜೇಶ್, ಕೊಡಗರ ಹಳ್ಳಿಯ ವಿಜಯ್, ಪಾಲಿಬೆಟ್ಟದ ಕಿರಣ್, ದೀಕ್ಷಿತ್, ಮಣಿಕಂಠ ಮೊದಲಾದವರು ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ದಸರಾದ ಅಂಗವಾಗಿ ನಡೆಯುವ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕಳೆದ ೨೦೨೨ ರಲ್ಲಿ ಕೊಡಗಿನ ತಂಡ ಮೊದಲ ಬಾರಿಗೆ ಚಾಂಪಿಯನ್ ಆಗಿದ್ದೆವು. ಇದೀಗ ಎರಡನೇ ಬಾರಿ ಚಾಂಪಿಯನ್ ಆದೆವು ಎಂದು ತಂಡದ ನಾಯಕ ಟಿಲ್ಲು `ಶಕ್ತಿ'ಗೆ ಮಾಹಿತಿ ನೀಡಿದರು.