vಸೋಮವಾರಪೇಟೆ, ಅ. ೮: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ೨೦೨೪ರ ಪಂಚ ಕಾವ್ಯೋತ್ಸವ ಕವಿಗೋಷ್ಠಿಯಲ್ಲಿ ಕೊಡಗಿನ ಕವಿಗಳು ಕವನ ವಾಚಿಸಿ ಸಾಹಿತ್ಯಾಸಕ್ತರ ಗಮನ ಸೆಳೆದರು.
ಕಾವ್ಯೋತ್ಸವದಲ್ಲಿ ಕೊಡಗಿನ ಕವಿಗಳಾದ ವೈಲೇಶ ಪಿ.ಎಸ್., ಉಳುವಂಗಡ ಕಾವೇರಿ ಉದಯ, ಲೀಲಾಕುಮಾರಿ ತೊಡಿಕಾನ, ಕೃಪಾ ದೇವರಾಜ್ ಮತ್ತು ಹೇಮಂತ್ ಪಾರೇರಾ ಅವರುಗಳು ತಮ್ಮ ಕವನ ವಾಚಿಸಿ ಗಮನ ಸೆಳೆದರು.
ಇದರೊಂದಿಗೆ ಸಮಷ್ಟಿ ಕವಿಗೋಷ್ಠಿಯಲ್ಲಿ ಕೊಡಗಿನ ಕೊಡವ ಭಾಷಾ ಪ್ರತಿನಿಧಿಯಾಗಿ ಮುಲ್ಲೇಂಗಡ ಮಧೋಶ್ ಪೂವಯ್ಯ, ಕೊಡಗಿನ ಬ್ಯಾರಿ ಭಾಷೆಯ ಪ್ರತಿನಿಧಿಯಾಗಿ ಮುನೀರ್ ಅಹಮದ್ ಹಾಗೂ ಕೊಡಗಿನ ಅರೆಭಾಷೆ ಪ್ರತಿನಿಧಿಯಾಗಿ ರೇವತಿ ರಮೇಶ್ ಇವರು ತಮ್ಮ ಕವನ ವಾಚಿಸಿ ಕೇಳುಗರ ಗಮನ ಸೆಳೆದರು.