ಕಣಿವೆ, ಅ. ೯: ಮೈಸೂರು ಬಂಟ್ವಾಳ ರಾಷ್ಟಿçÃಯ ಹೆದ್ದಾರಿಯ ಚತುಷ್ಪಥ ರಸ್ತೆ ನಿರ್ಮಾಣದ ಉದ್ದೇಶದಿಂದಾಗಿ ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಬಳಿಯ ತೆಪ್ಪದ ಕಂಡಿಯ ಆಸುಪಾಸಿನಲ್ಲಿ ಇದ್ದ ಆರ್.ಸಿ.ಸಿ. ಮನೆಗಳನ್ನು ಜೆಸಿಬಿ ಯಂತ್ರದಿAದ ತೆರವುಗೊಳಿಸಲಾಗುತ್ತಿದೆ.

ಹಾಗೆಯೇ ಕಲ್ಪವೃಕ್ಷವೆನಿಸಿರುವ ತೆಂಗಿನ ಮರಗಳನ್ನು ಬೇರು ಸಹಿತ ತೆರವು ಮಾಡಲಾಗುತ್ತಿದೆ.

ಮೈಸೂರಿನಿಂದ ಕುಶಾಲನಗರ ತಾಲೂಕಿನ ಆನೆಕಾಡು ಅರಣ್ಯ ಪ್ರದೇಶದಂಚಿನವರೆಗೂ ನಿರ್ಮಾಣವಾಗಲಿರುವ ಚತುಷ್ಪಥ ಹೆದ್ದಾರಿ ಮಂತೇನಹಳ್ಳಿಯ ಬಳಿ ರಾಷ್ಟಿçÃಯ ಹೆದ್ದಾರಿಯ ಎಡಭಾಗದಲ್ಲಿ ಒಳ ಸಾಗಿ ರಾಣಿಗೇಟು, ಕೊಪ್ಪ, ಮರೂರು ಗ್ರಾಮಕ್ಕಾಗಿ ಕಾವೇರಿ ನದಿಯ ತೆಪ್ಪದ ಕಂಡಿಯ ಬಳಿ ಕುಶಾಲನಗರ ವೀರಾಜಪೇಟೆ ರಾಜ್ಯ ಹೆದ್ದಾರಿಗೆ ಸಂಧಿಸುವಾಗ ಅಲ್ಲಿ ನಿರ್ಮಾಣವಾಗುವ ಸುತ್ತಳತೆಯ ಬೃಹತ್ ವೃತ್ತಕ್ಕಾಗಿ ಇಲ್ಲಿನ ಒಂದಷ್ಟು ಮನೆಗಳನ್ನು ತೆರವುಗೊಳಿಸಲಾಗುತ್ತಿದೆ.

ಹಾಗೆಯೇ ಅಮೂಲ್ಯವಾದ ಮರಗಳನ್ನು ಕಡಿದುರುಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಇಲ್ಲಿನ ನಿವಾಸಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿಗದಿಪಡಿಸಿದ ಪರಿಹಾರದ ಹಣವನ್ನು ಪಾವತಿಸಿದೆ.

ರಾಷ್ಟಿçÃಯ ಹೆದ್ದಾರಿ ನಿರ್ಮಾಣಕ್ಕಾಗಿ ತಮ್ಮೆಲ್ಲ ಆಸ್ತಿ ಪಾಸ್ತಿಗಳನ್ನು ಎಲ್ಲಕ್ಕಿಂತ ಹೆಚ್ಚಾಗಿ ಕೆಲವೊಂದು ವಸ್ತುಗಳ ಮೇಲಿನ ಭಾವನೆಗಳನ್ನು ಬಲಿ ಕೊಟ್ಟು ದೂರದ ಸ್ಥಳಕ್ಕೆ ತೆರಳುತ್ತಿದ್ದಾರೆ.

ತಾತನ ಕಾಲದಿಂದ ಬಳಸುತ್ತಿದ್ದ ನೀರಿನ ಬಾವಿ, ಎಳನೀರು ಹಾಗೂ ಕಾಯಿ ನೀಡುತ್ತಿದ್ದ ತೆಂಗಿನ ಮರಗಳು, ಕಣ್ಣೆದುರೇ ಹರಿಯುತ್ತಿದ್ದ ಕಾವೇರಿ ನದಿ ತೀರ ಹೀಗೆ ಎಲ್ಲವನ್ನು ಬಿಟ್ಟು, ಹಿರಿದಾದ ಹೆದ್ದಾರಿಗಾಗಿ ಬಲಿ ಕೊಟ್ಟು ತಾವು ಸಾಕಿದಂತಹ ಮುದ್ದಿನ ಶ್ವಾನಗಳು, ಬೆಕ್ಕುಗಳು, ಕೋಳಿಗಳು, ಜಾನುವಾರುಗಳೊಂದಿಗೆ ದೂರದ ಪ್ರದೇಶಗಳಲ್ಲಿ ಹೊಸ ಬದುಕು ಕಟ್ಟಲು ತೆರಳುತ್ತಿದ್ದಾರೆ ಇಲ್ಲಿನ ಜನರು.

ವರದಿ : ಕೆ.ಎಸ್.ಮೂರ್ತಿ