ವೀರಾಜಪೇಟೆ, ಅ. ೮: ಜೈ ಭಾರತ್ ಆಟೋ ಚಾಲಕರ ಸಂಘದ ವತಿಯಿಂದ ವೀರಾಜಪೇಟೆ ನಗರದ ಪ್ರಪ್ರಥಮ ಆಟೋ ಚಾಲಕಿಯಾಗಿ ಆಟೋ ವೃತ್ತಿ ಪ್ರಾರಂಭಿಸಿರುವ ಕೋಮಲ ಪ್ರಿಯ ಜೈಸನ್ ಅವರನ್ನು ಸ್ವಾಗತಿಸಲಾಯಿತು.
ವೀರಾಜಪೇಟೆ ನಗರ ಪೊಲೀಸ್ ಠಾಣಾಧಿಕಾರಿ ಪ್ರಮೋದ್ ಹೆಚ್. ಎಸ್. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನಗರದಲ್ಲಿ ಮೊದಲ ಮಹಿಳಾ ಆಟೋ ಚಾಲಕಿಯಾಗಿ ವೃತ್ತಿ ಪ್ರಾರಂಭಿಸಿರುವ ಪ್ರಿಯ ಅವರಿಗೆ ಶುಭಾಶಯ ಕೋರಿದರು. ಪುರಸಭೆಯ ಸದಸ್ಯ ಸಿ.ಕೆ. ಪೃಥ್ವಿನಾಥ್ ಮಾತನಾಡಿ, ಪುರಸಭೆ ಉಪಾಧ್ಯಕ್ಷ ಫಸಿಯ ತಬ್ಬಸಂ, ಸದಸ್ಯರಾದ ಸುನೀತಾ, ಜೈಭಾರತ್ ಆಟೋ ಚಾಲಕ ಮತ್ತು ಮಾಲಿಕರ ಸಂಘದ ಸ್ಥಾಪಕ ಅಧ್ಯಕ್ಷ ಶಿವು, ಸಂಘದ ಅಧ್ಯಕ್ಷ ಪುಟ್ಟ ಬೆಳ್ಳಿಯಪ್ಪ, ಕಾರ್ಯದರ್ಶಿ ಜೀವನ್, ತೊರೆರ ಪ್ರಭು ಕುಟ್ಟಪ್ಪ, ಉದ್ಯಮಿ ವಿನೊಬ್ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.