ಕುಶಾಲನಗರ: ಕುಶಾಲನಗರ ತಾಲೂಕು ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲೆಯ ಮಕ್ಕಳಿಗಾಗಿ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರದೀಪ್ ರವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಕೆ.ಎಸ್. ರಮ್ಯಾ ಮಕ್ಕಳಿಗೆ ತಾವು ದಿನನಿತ್ಯ ಬಳಸಿ ಸೇವಿಸುವ ತರಕಾರಿ ಸೊಪ್ಪು, ಮೊಟ್ಟೆ, ಹಾಲು, ಮೊಸರು, ಮಜ್ಜಿಗೆ ಮತ್ತು ಜೇನು ತುಪ್ಪ ಮತ್ತು ಅನ್ನ, ರಾಗಿಹಿಟ್ಟು ಇವುಗಳಲ್ಲಿ ಇರುವ ಎ. ಬಿ. ಸಿ. ಡಿ. ವಿಟಮಿನ್ ಯಾವ ರೀತಿ ನಮ್ಮ ದೇಹಕ್ಕೆ ವರದಾನವಾಗಿದೆ ಎಂಬುದರ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ವೆಂಕಟ ನಾಯಕ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸರ್ಕಾರಿ ಶಾಲೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದರು.
ಶಾಲಾ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ್ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕಿ ಸಿಎಂ ಬಬಿತಾ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾವತಿ ಮತ್ತು ಶಿವಾನಂದ ಮಕ್ಕಳಿಗೆ ವಿವಿಧ ಮಾಹಿತಿಗಳನ್ನು ನೀಡಿದರು. ವೇದಿಕೆಯಲ್ಲಿ ಶಿಕ್ಷಕಿ ಜಾನಕಿ, ದೈಹಿಕ ಶಿಕ್ಷಣ ಶಿಕ್ಷಕಿ ವಂಜಮ್ಮ, ಎಸ್ಡಿಎಂಸಿ ಉಪಾಧ್ಯಕ್ಷೆ ಅರ್ಪಿತ, ಸದಸ್ಯರಾದ ಧೀರಜ್ ಕುಮಾರ್, ರೇಣುಕಸ್ವಾಮಿ, ಅಡುಗೆಯವರಾದ ವಿನಿತಾ ಮತ್ತು ಮಂಜುಳಾ ಹಾಗೂ ಶಾಲಾ ಮಕ್ಕಳು ಇದ್ದರು.ಗೋಣಿಕೊಪ್ಪ ವರದಿ: ಪೌಷ್ಟಿಕತೆ ಆಹಾರ ಸೇವನೆ ಮಕ್ಕಳಿಂದ ದೇಶ ಬೆಳಗಿಸುವಂತೆ ಮಾಡುತ್ತದೆ ಎಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯೆ ಕೊಣಿಯಂಡ ಬೋಜಮ್ಮ ಉತ್ತಪ್ಪ ಅಭಿಪ್ರಾಯಪಟ್ಟರು.
ಒಂದನೇ ವಿಭಾಗದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಪೋಷಣ್ ಮಾಸಾಚರಣೆಯಲ್ಲಿ ಮಾತನಾಡಿ, ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಮುಖ್ಯವಾಗಿದೆ. ರಕ್ತ ಹೀನತೆ ನಿಯಂತ್ರಣಕ್ಕೆ ಉತ್ತಮ ಆಹಾರ ಸೇವೆನೆ ಅಗತ್ಯ. ಸಮಾಜಕ್ಕೆ ಸದೃಢ ಪ್ರಜೆಯನ್ನು ಅರ್ಪಿಸಿಕೊಳ್ಳಲು ಉತ್ತಮ ಆಹಾರ ಸೇವನೆಗೆ ಕೈಜೋಡಿಸಿ ಎಂದರು.
ಗರ್ಭಿಣಿಯರಿಗೆ ಸೀಮಂತ ನಡೆಯಿತು. ಗ್ರಾ. ಪಂ ಮಾಜಿ ಅಧ್ಯಕ್ಷೆ ಸೆಲ್ವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.