ಮಡಿಕೇರಿ, ಅ. ೧೦: ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ ೭೯ಎ, ೭೯ಬಿ ದುರುಪಯೋಗ ವಾಗುತ್ತಿದ್ದು, ಇಂದು ಬೃಹತ್ ಭೂ ಪರಿವರ್ತನೆ ಮತ್ತು ಭೂವಿಲೇವಾರಿಯ ಮೂಲಕ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ಆರ್ಥಿಕ ಅಪರಾಧಿಗಳು ಹಾಗೂ ಉದ್ಯಮಪತಿಗಳು ಕೊಡವಲ್ಯಾಂಡ್‌ನ ಪರಿಸರವನ್ನು ಸಂಪೂರ್ಣ ನಾಶ ಮಾಡುತ್ತಿದ್ದಾರೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಆರೋಪಿಸಿದರು.

ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂ ಪರಿವರ್ತನೆ ಮತ್ತು ಭೂವಿಲೇವಾರಿ ಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಅಮ್ಮತ್ತಿಯಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ರಾಜಕಾರಣಿಗಳು ಹಾಗೂ ಅಧಿಕಾರಶಾಹಿಗೆ ಕೇವಲ ಹಣವಷ್ಟೇ ಬೇಕಾಗಿದೆ. ಮಾಫಿಯಾಗಳು ಹಬ್ಬ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಕೇಂದ್ರಗಳು ಮತ್ತು ಕ್ರೀಡೋತ್ಸವಗಳಿಗೆ ದೇಣಿಗೆ ನೀಡಿ ಜನರ ಗಮನವನ್ನು ಬೇರೆಡೆಗೆ ಸೆಳೆದು ಕರ್ನಾಟಕ ಭೂಸುಧಾರಣಾ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದಾರೆ. ಪರಿಸರದ ಮೇಲೆ ದಾಳಿ ಮಾಡಿ ಅನಾರೋಗ್ಯಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದ್ದಾರೆ. ಕೊಡವರೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಿದಾಗ ಮಾತ್ರ ಇದೆಲ್ಲವನ್ನು ತಡೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಸರಕಾರ ಬೇರೆ ಬೇರೆ ಯೋಜನೆ ಗಳಿಗೆ ಹಣ ಖರ್ಚು ಮಾಡಿ ಕೈಸುಟ್ಟು ಕೊಂಡಿದೆ. ಆರ್ಥಿಕ ಕ್ರೋಢೀಕರಣ ಕ್ಕಾಗಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಮಿತಿ ಮೀರಿ ನಡೆಸುತ್ತಿದೆ. ಇದರಿಂದ ಬೃಹತ್ ಪ್ರಮಾಣದ ಹಣ ನೇರ ಮತ್ತು ಪರೋಕ್ಷವಾಗಿ ಚಲಾವಣೆಯಾಗುತ್ತಿದೆ ಎಂದು ಆರೋಪಿಸಿದರು.

ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ``ಕೊಡವ ಲ್ಯಾಂಡ್'' ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್ ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಜನಜಾಗೃತಿ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದ ಸಿಎನ್‌ಸಿ ಪ್ರಮುಖರು ಹಾಗೂ ಗ್ರಾಮಸ್ಥರು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಜನಜಾಗೃತಿ ಕಾರ್ಯಕ್ರಮದಲ್ಲಿ ಮುದ್ದಿಯಡ ಲೀಲಾವತಿ, ಮಂಡೇಪAಡ ಲಾಲಾ ಮಾಚಯ್ಯ, ಕುಂಞAಡ ನಿರು ನಾಣಯ್ಯ, ನೆಲ್ಲಮಕ್ಕಡ ವಿವೇಕ್, ಪಟ್ಟಡ ಅರುಣ್, ಕೆ.ಎಸ್.ತಿಮ್ಮಯ್ಯ, ಎಂ.ಸಿ. ಅಯ್ಯಪ್ಪ, ಪಿ.ಪಿ. ಪೂವಯ್ಯ, ನೆಲ್ಲಮಕ್ಕಡ ಸಾಗರ್, ಎಂ.ಎA. ದೇವಯ್ಯ, ಪಿ.ಗಗನ್ ಗಣಪತಿ, ಬಿ.ಎ. ಮಂದಣ್ಣ, ಕೆ.ಟಿ. ಮನು, ಎಂ.ಪಿ. ರಾಜೀವ್, ಕೆ.ಎ. ಅಯ್ಯಪ್ಪ, ನೆಲ್ಲಮಕ್ಕಡ ಬೊಳ್ಯಪ್ಪ, ನೆಲ್ಲಮಕ್ಕಡ ಸುಬ್ರಮಣಿ, ನೆಲ್ಲಮಕ್ಕಡ ಪೆಮ್ಮಯ್ಯ, ನೆಲ್ಲಮಕ್ಕಡ ಮಾಚಯ್ಯ, ಐನಂಡ ಪ್ರಕಾಶ್, ಐನಂಡ ಮೊಣ್ಣಪ್ಪ, ನೆಲ್ಲಮಕ್ಕಡ ಗಣಪತಿ, ನಾಯಡ ಪವಿ ಪೂವಯ್ಯ, ಸಿ.ಯು.ಗಣೇಶ್, ಎಂ.ಎA. ತಮ್ಮಯ್ಯ, ಪುದಿಯೊಕ್ಕಡ ಬೋಪಣ್ಣ, ಮಚ್ಚಾರಂಡ ಗಣೇಶ್, ಪುಗ್ಗೆರ ರಾಜೇಶ್, ಮಚ್ಚಾರಂಡ ಬೋಪಣ್ಣ, ಮಾಚಿಮಂಡ ಸುರೇಶ್ ಅಯ್ಯಪ್ಪ, ಕೋಳೆರ ರನ್ನ, ಮಚ್ಚಾರಂಡ ಸುಬ್ಬಯ್ಯ, ಮುದ್ದಿಯಡ ಮಾದಪ್ಪ, ಅಚ್ಚಿಯಂಡ ಮುತ್ತಪ್ಪ, ಮಚ್ಚಾರಂಡ ಪೆಮ್ಮಯ್ಯ, ಎಂ.ಎA. ಮಾಚಯ್ಯ, ಕೆ.ಕೆ. ನಾಚಪ್ಪ, ಕೆ.ಬಿ. ಗಣಪತಿ, ಪಿ.ಬಿ. ಚಂಗಪ್ಪ, ಪಟ್ಟಡ ದೇವು ಉತ್ತಯ್ಯ, ಕೆ.ಬಿ.ನಾಣಯ್ಯ, ಚೋವಂಡ ಅಭಿನ್ ಮಂದಣ್ಣ, ಕೆ.ಪಿ.ಕುಂಞAಪ್ಪ, ಕಿರಿಯಮಡ ಶರೀನ್, ನೆಲ್ಲಮಕ್ಕಡ ಧರಣು, ಮಂಡೇಪAಡ ಚಂಗಪ್ಪ, ಮಂಡೇಪAಡ ನಂಜಪ್ಪ, ನೆಲ್ಲಮಕ್ಕಡ ಅಯ್ಯಪ್ಪ, ಐನಂಡ ಮಾಚಯ್ಯ, ಮಾಚಿಮಡ ಚಿಣ್ಣಪ್ಪ, ಕಾವಡಿಚಂಡ ಕುಟ್ಟಪ್ಪ, ಸಿ.ಎನ್. ಅಪ್ಪಣ್ಣ, ಉದ್ದಪಂಡ ಐಯಣ್ಣ, ಕೆ.ಪಿ. ಮುದ್ದಯ್ಯ, ಐನಂಡ ಲಾಲ, ಚಂಬAಡ ಜನತ್ ಪಾಲ್ಗೊಂಡಿದ್ದರು.

ಮುAದಿನ ದಿನಗಳಲ್ಲಿ ಭಾಗಮಂಡಲ ಮತ್ತು ಮಡಿಕೇರಿಯಲ್ಲಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ.