ಸುಂಟಿಕೊಪ್ಪ, ಅ. ೧೦: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ೫೪ನೇ ವಾರ್ಷಿಕೋತ್ಸವದ ಅಂಗವಾಗಿ ಸಂಘದ ವತಿಯಿಂದ ಕುಶಾಲನಗರ ವಿಸನ್ಸ್ ಸ್ಪಿçಂಗ್ ಹಾಗೂ ಆಶೋಧಯ ಸಮಿತಿ ಮಡಿಕೇರಿ ಇವರ ಜಂಟಿ ಆಶ್ರಯದಲ್ಲಿ ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಲಾಯಿತು.

ವಾಹನ ಚಾಲಕರ ಸಂಘದ ವೇದಿಕೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಮಾತನಾಡಿದ ಕಿಟ್ಟಣ್ಣ ರೈ, ಗ್ರಾಮೀಣ ಬಡ ಜನರಿಗೆ ಸೇವೆ ನೀಡುವ ದೃಷ್ಠಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳವಂತೆ ಕರೆ ನೀಡಿದರು. ಶಿಬಿರದಲ್ಲಿ ೧೩೦ ಜನರ ಕಣ್ಣಿನ ತಪಾಸಣೆ, ೮೦ ಜನರಿಗೆ ಕನ್ನಡಕ ಹಾಗೂ ೭ ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ÷ಶಿಫಾರಸು ಮಾಡಲಾಯಿತು.

ಶಿಬಿರದಲ್ಲಿ ರಕ್ತದ ಒತ್ತಡ, ಹೆಚ್‌ಐವಿ, ಸಿಫಿಲಿಸ್ ಕಾಯಿಲೆಗಳ ತಪಾಸಣೆ ನಡೆಸಲಾಯಿತು. ತಜ್ಞ ವೈದ್ಯರಾದ ಪುಷ್ಪೇಂದ್ರ ಯಾಧವ್, ಪುಷ್ಪೇಂದ್ರ ಮಿಶ್ರ ಹಾಗೂ ಸಿಬ್ಬಂದಿಗಳು ತಪಾಸಣೆ ನಡೆಸಿದರು. ಈ ಸಂದರ್ಭ ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ರಕ್ಷಿತ್, ರಿಜ್ವಾನ್, ಬಸಪ್ಪ, ಶಕ್ತಿವೇಲು, ಕಾರ್ಯಕಾರಿ ಸಮಿತಿ ಸದಸ್ಯರು, ಸಾರ್ವಜನಿರು ಹಾಜರಿದ್ದರು.