ಶನಿವಾರಸಂತೆ, ಅ. ೧೦: ಸೋಮವಾರಪೇಟೆ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೊಡ್ಲಿಪೇಟೆ ವಲಯದ “ಬಿ’’ ಕಾರ್ಯಕ್ಷೇತ್ರದಲ್ಲಿ ಕೃಷಿ ಯಾಂತ್ರೀಕರಣ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷ ಚೇತನ್ ಉದ್ಘಾಟಿಸಿ ಮಾತನಾಡಿದರು. ಕೃಷಿ ಯಂತ್ರಧಾರೆ ಕೊಡ್ಲಿಪೇಟೆ ಕಚೇರಿ ಸಹಾಯಕಿ ಸುಮಿತ್ರಾ ಮಾತನಾಡಿ, ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣಗಳ ಲಭ್ಯತೆ, ಬಾಡಿಗೆ ದರಗಳ ಬಗ್ಗೆ ಹಾಗೂ ಯಂತ್ರದ ಮೂಲಕ ಭತ್ತದ ನಾಟಿ ಮಾಡುವ ಕ್ರಮದ ಬಗ್ಗೆ ಮಾಹಿತಿ ನೀಡಿದರು. ನಂತರ ಕಾರ್ಯಕ್ರಮದಲ್ಲಿ ‘ದಶಾಂಶ ಮತ್ತು ಸರ್ವ ಸದಸ್ಯರ ಪ್ರಬುದ್ಧತೆಯೇ ನಮ್ಮ ಬದ್ಧತೆ’ ಎಂಬ ಬಗ್ಗೆ ಮಾಹಿತಿ ನೀಡಲಾಯಿತು.

ಕಿರಿಕೊಡ್ಲಿ ಗ್ರಾಮಾಧ್ಯಕ್ಷ ತ್ಯಾಗರಾಜ್, ಆಶಾ ಕಾರ್ಯಕರ್ತೆ ಕಲಾವತಿ, ಅಂಗನವಾಡಿ ಕಾರ್ಯಕರ್ತೆ ಗುಣವತಿ, ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘದ ಸದಸ್ಯರು, ಗ್ರಾಮದ ಪ್ರಮುಖರು ಹಾಜರಿದ್ದರು.