ಚೆಯ್ಯಂಡಾಣೆ, ಅ. ೧೦: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (ಕೆಎಸ್‌ಡಬ್ಲ್ಯೂಎ) ಸೌದಿ ಅರೇಬಿಯಾ ರಾಷ್ಟಿçÃಯ ಸಮಿತಿಯ ವತಿಯಿಂದ "ವಿಶ್ವ ವಿಮೋಚನೆಯ ಹಾದಿ ಪುಣ್ಯ ಪ್ರವಾದಿ" ಎಂಬ ಧ್ಯೇಯ ವಾಕ್ಯದೊಂದಿಗೆ ಬೃಹತ್ ಮಿಲಾದ್ ಸಮಾವೇಶ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಸೌದಿ ಅರೇಬಿಯಾದ ದಮಾಮ್‌ನಲ್ಲಿ ಜರುಗಿತು.

ಇತ್ತೀಚೆಗೆ ಸೌದಿ ಅರೇಬಿಯಾದ ದಮಾಮ್‌ನ ಹಾಲಿಡೇಸ್ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆದ ಬೃಹತ್ ಮಿಲಾದ್ ಸಮಾವೇಶದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಯ್ಯದ್ ಇಲ್ಯಾಸ್ ಅಲ್ ಹೈದರೂಸಿ ತಂಙಳ್ ಎಮ್ಮೆಮಾಡು, ಮೊಹಮ್ಮದ್ ಪೈಗಂಬರ್ (ಸ.ಅ) ಅವರ ಜೀವನ ಚರಿತ್ರೆಯನ್ನು ನಾವು ರೂಢಿಸಿಕೊಳ್ಳಬೇಕು, ಅವರ ಶಾಂತಿಯ ಸಂದೇಶ, ಸೌಹಾರ್ದತೆ ನಮಗೆ ಮಾದರಿಯಾಗಬೇಕು ಎಂದರು.

ಮತ್ತೋರ್ವ ಮುಖ್ಯ ಅತಿಥಿ ಎಸ್‌ವೈಎಸ್ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಕೊಳಕೇರಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಾಂತ್ವನ ಚಟುವಟಿಕೆಗಳನ್ನು ಮತ್ತಷ್ಟು ಸಕ್ರಿಯಗೊಳಿಸಿ, ಜಿಲ್ಲೆಯ ಬಡ, ನಿರ್ಗತಿಕ, ಅನಾಥ ವಿಧ್ಯಾರ್ಥಿಗಳ ಉನ್ನತ ಶಿಕ್ಷಣದ ಸಹಾಯಕ್ಕೆ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಕೊಡಗು ಸುನ್ನಿ ವೇಲ್ಫೇರ್ ಅಸೋಸಿಯೇಷನ್ ಸೌದಿ ರಾಷ್ಟಿçÃಯ ಸಮಿತಿ ಅಧ್ಯಕ್ಷ ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸಕ್ತ ವರ್ಷದಲ್ಲಿ ಜಿಲ್ಲೆಯ ಒಂದು ವಿದ್ಯಾರ್ಥಿಯ ಉನ್ನತ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ವೆಲ್ಫೇರ್ ವತಿಯಿಂದ ಬರಿಸಲಾಗುವುದು ಎಂದು ಮಾಹಿತಿ ನೀಡಿದರು.

ವೆಲ್ಫೇರ್ ವತಿಯಿಂದ ಮುಖ್ಯ ಅತಿಥಿಗಳಾದ ಸಯ್ಯದ್ ಇಲ್ಯಾಸ್ ತಂಙಳ್, ಅಬ್ದುಲ್ ಹಫೀಲ್ ಸಅದಿ, ಕೆಸಿಎಫ್ ದಮಾಮ್ ಝೋನ್ ಸಾಂತ್ವನ ವಿಂಗ್ ಛೇರ್ಮನ್ ಭಾಷ ಗಂಗಾವಳಿ, ರಫೀಕ್ ತಂಙಳ್ ಮಾಲ್ದಾರೆ, ಸಮಾಜ ಸೇವಕರಾದ ಫಾರೂಕ್ ೭ನೇ ಹೊಸಕೋಟೆ, ಅಝೀಝ್ ಕಲ್ಲಡ್ಕ, ಅನಿವಾಸಿಯಾಗಿದ್ದು ತಾಯಿನಾಡಿಗೆ ಮರಳುವ ಅಲ್-ಹಸ್ಸಾ ಝೋನ್ ಅಧ್ಯಕ್ಷ ರಝಾಕ್ ರಂಗಸಮುದ್ರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕೆಸಿಎಫ್ ದಮಾಮ್ ಝೋನ್ ಅಧ್ಯಕ್ಷ ಫಾರೂಕ್ ಮುಸ್ಲಿಯಾರ್ ಕುಪ್ಪಟ್ಟಿ, ಯೂಸುಫ್ ಸಅದಿ ಅಯ್ಯಂಗೇರಿ, ಆಬಿದ್ ಝುಹರಿ ಚೇರಂಬಾಣೆ, ಅಬ್ದುಲ್ ಅಝೀಜ್ ಕಲ್ಲಡ್ಕ, ಭಾಷ ಗಂಗಾವಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು. ಈ ಸಂದರ್ಭ ರಫೀಕ್ ತಂಙಳ್ ಮಾಲ್ದಾರೆ, ಅಝೀಜ್ ನೆಲ್ಲಿಹುದಿಕೇರಿ, ನಝೀರ್ ಗುಂಡಿಗೆರೆ, ಷಂಶುದ್ದೀನ್ ಕೊಳಕೇರಿ, ಸಯ್ಯದ್ ಶಿಹಾಬ್ ಕೊಂಡAಗೇರಿ, ನಿಝಾಮ್ ಅಂಬಟ್ಟಿ, ಫಾರೂಕ್ ೭ನೇ ಹೊಸಕೋಟೆ, ಆದಂ, ಅಬಿದ್ ಕಂಡಕ್ಕರೆ, ಮುಸ್ತಫಾ ಝೈನಿ, ರಫೀಕ್ ನೆಲ್ಲಿಹುದಿಕೇರಿ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಬಿದ್ ಕಂಡಕ್ಕರೆ ಸ್ವಾಗತಿಸಿ, ಮುಸ್ತಫ ಝೈನಿ ನಿರೂಪಿಸಿ, ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ರಫೀಕ್ ವಂದಿಸಿದರು.