ಮಡಿಕೇರಿ,ಅ.೧೦: ಮಡಿಕೇರಿ ದಸರಾ ಸಮಿತಿ ವತಿಯಿಂದ ನಡೆಯುತ್ತಿರುವ ಮಡಿಕೇರಿ ದಸರಾ ಜನೋತ್ಸವ ಹಾಗೂ ಆಯುಧಾ ಪೂಜೋತ್ಸವ ತಾ, ೧೧ ಹಾಗೂ ೧೨ರಂದು ವಿಜೃಂಭಣೆಯಿAದ ನೆರವೇರಲಿದೆ. ಗಾಂಧಿ ಮೈದಾನದಲ್ಲಿರುವ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಬಾರಿ ವಿಶೇಷವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು, ಜಿಲ್ಲಾಡಳಿತದ ಅಧಿಕಾರಿಗಳು, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾದ ಪೊಲೀಸ್ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಡಿಕೇರಿ ನಗರ ದಸರಾ ಸಮಿತಿ ಗೌರವ ಸಲಹೆಗಾರ ಜಿ.ಚಿದ್ವಿಲಾಸ್; ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಸೂಚನೆ ಮೇರೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ದಸರಾ ಉತ್ಸವ ಸಂದರ್ಭದ ಆಯುಧಾ ಪೂಜಾ ದಿನವಾದ ತಾ. ೧೧ರಂದು ಸನ್ಮಾನಿಸಲು ತೀರ್ಮಾನಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ. ಅನಿಲ್ ಚಂಗಪ್ಪ, ವಾಣಿಜ್ಯ ಕ್ಷೇತ್ರದಿಂದ ದಿನೇಶ್ ಕಾರ್ಯಪ್ಪ, ಸಮಾಜಸೇವೆಗಾಗಿ ಕೆ.ಟಿ.ಬೇಬಿ ಮ್ಯಾಥ್ಯೂ, ಮಹಿಳಾ ಉದ್ಯಮಿಯಾಗಿ ಸಾಮಾಜಿಕ ಕಾರ್ಯಕರ್ತೆ ಮೋಂತಿ ಗಣೇಶ್, ಹಾಗೂ ರಾಷ್ಟಿçÃಯ ಬಾಸ್ಕೆಟ್ ಬಾಲ್ ಆಟಗಾರ್ತಿ ಸುಂಟಿಕೊಪ್ಪದ ಪಟ್ಟೆಮನೆ ನವನೀತ, ಸಂಘ ಸಂಸ್ಥೆಗಳ ಪರವಾಗಿ ಮಡಿಕೇರಿಯ ತನಲ್ ಸಂಸ್ಥೆಯ ಪದಾಧಿಕಾರಿಗಳನ್ನು ಸನ್ಮಾನಿಸ ಲಾಗುವದೆಂದು ತಿಳಿಸಿದರು.

ಪೊಲೀಸರಿಗೆ ಸನ್ಮಾನ

ಇದರೊಂದಿಗೆ ಈಚೆಗಷ್ಟೇ ಅಂತರರಾಷ್ಟಿçÃಯ ಮಾದಕ ವಸ್ತು ಮಾರಾಟ ಜಾಲವನ್ನು ಭೇದಿಸಿದ ಕೊಡಗು ಜಿಲ್ಲಾ ಪೊಲೀಸರ ತಂಡವನ್ನು ಸನ್ಮಾನಿಸಲಾಗುವದು. ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿ ವಿದೇಶಕ್ಕೆ ಪರಾರಿಯಾಗುತ್ತಿದ್ದ ಪ್ರಮುಖ

(ಮೊದಲ ಪುಟದಿಂದ) ಆರೋಪಿ ಸೇರಿ ೯ ಮಂದಿಯನ್ನು ಬಂದಿಸಿದ್ದಲ್ಲದೆ, ಮೂರು ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕಳೆದ ೨೦೨೩ರಿಂದ ೭-೧೦-೨೦೨೪ರವರೆಗೆ ಸುಮಾರು ೧೬೫ ಅಪರಾಧ ಪ್ರಕರಣಗಳನ್ನು ಭೇದಿಸಿ ೩೫೫ ಆರೋಪಿಗಳನ್ನು ಬಂದಿಸಿರುವ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲು ತೀರ್ಮಾನಿಸಿದ ಸಂದರ್ಭ ಪೊಲೀಸ್ ವರಿಷ್ಠಾಧಿಕಾರಿಗಳ ಕೋರಿಕೆ ಮೇರೆಗೆ ಸುಮಾರು ೩೩ ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.

ಅಧಿಕಾರಿಗಳಿಗೆ ಸನ್ಮಾನ

ಇದರೊಂದಿಗೆ ಶಾಸಕರ ಸೂಚನೆ ಮೇರೆಗೆ ಈ ಬಾರಿಯ ದಸರಾ ಉತ್ಸವವನ್ನು ಯಶಸ್ವಿಯಾಗಿ ಆಚರಣೆ ಮಾಡುವಲ್ಲಿ ಶ್ರಮವಹಿಸಿದ ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರೂ ಆಗಿರುವ ವೆಂಕಟ್‌ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ್ ಮೀನಾ, ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಜಿಲ್ಲಾ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಆವರುಗಳನ್ನು ಕೂಡ ಸನ್ಮಾನಿಸಲಾಗುವದೆಂದು ತಿಳಿಸಿದರು.

ನಗರ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ವೈ.ರಾಜೇಶ್ ಮಾತನಾಡಿ, ತಾ. ೧೧ರಂದು(ಇAದು) ಆಯುಧ ಪೂಜೆ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ೮.೩೦ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಶಾಸಕ ಡಾ.ಮಂತರ್ ಗೌಡ, ಉಸ್ತುವಾರಿ ಸಚಿವ ಎಸ್.ಎನ್. ಬೋಸರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ತಂಗಡಗಿ ಶಿವರಾಜ್ ಸಮಗಪ್ಪ, ಶಾಸಕ ಎ.ಎಸ್. ಪೊನ್ನಣ್ಣ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಇತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಅಂದು ಕ್ರಿಡಾಕೂಟದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವದು. ತಾ.೧೨ರ ವಿಜಯದಶಮಿಯಂದು ಅಲಂಕಾರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವದು. ತಾ. ೧೩ರ ಮುಂಜಾನೆ ೫ ಗಂಟೆಗೆ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವದೆಂದು ತಿಳಿಸಿದರು.

ಉಪ ಮುಖ್ಯಮಂತ್ರಿಗಳ ದೇವಾಲಯ ಭೇಟಿ

ದಸರಾ ಸಮಿತಿ ಕಾರ್ಯಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ; ತಾ. ೧೧ರ ಆಯುಧ ಪೂಜಾ ಕಾರ್ಯಕ್ರಮಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಆಗಮಿಸಲಿದ್ದಾರೆ. ಅದಕ್ಕೂ ಮುನ್ನ ದಸರಾದಂದು ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ನಗರದ ಹತ್ತು ದೇವಾಲಯಗಳಿಗೆ ಹಗಲು ವೇಳೆ ಭೇಟಿ ನೀಡಿ ದೇವಾಲಯಗಳ ವೀಕ್ಷಣೆಯೊಂದಿಗೆ ದಶಮಂಟಪಗಳ ಇತಿಹಾಸದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ದಸರಾ ಸಮಿತಿ ಉಪಾಧ್ಯಕ್ಷ ಬಿ.ಎಂ.ರಾಜೇಶ್ ಮಾತನಾಡಿ; ತಾ. ೧೨ರಂದು ವಿಜಯದಶಮಿ ಆಚರಣೆ ನಡೆಯಲಿದ್ದು, ತಾ. ೧೧ ರಂದು ಏರ್ಪಡಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗು ಗಾಯಕ ರಾಜೇಶ್ ಕೃಷ್ಣನ್ ಅವರುಗಳಿಂದ ಕಾರ್ಯಕ್ರಮಗಳು ಮೂಡಿಬರಲಿವೆ. ಇದರೊಂದಿಗೆ ಮಡಿಕೇರಿಯ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋ ತಂಡದಿAದ ನೃತ್ಯ ಸಂಗಮ, ವೀರಾಜಪೇಟೆಯ ಟೀಮ್ ಇಂಟೋಪೀಸ್ ಡ್ಯಾನ್ಸ್ ಸ್ಟುಡಿಯೋ ಇವರಿಂದ ನೃತ್ಯ ವೈವಿಧ್ಯ, ಮೈಸೂರಿನ ನಾದ ವಿದ್ಯಾಲಯ ಸಂಗೀತ ಮತ್ತು ನೃತ್ಯ ಅಕಾಡೆಮಿ ತಂಡದಿAದ ನೃತ್ಯವೈವಿಧ್ಯ, ಕಂಚಿ ಕಾಮಾಕ್ಷಿ ದೇವಾಲಯ ತಂಡದಿAದ ಕಾರ್ಯಕ್ರಮ ನಡೆಯಲಿದೆ.

ಅದ್ದೂರಿ ಶೋಭಾಯಾತ್ರೆ

ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್ ಮಾತನಾಡಿ; ಈ ಬಾರಿಯ ದಸರಾ ಉತ್ಸವವನ್ನು ಯಶಗೊಳಿಸುವ ನಿಟ್ಟಿನಲ್ಲಿ ಹಲವು ಸಭೆಗಳನ್ನು ನಡೆಸಲಾಗಿದ್ದು, ಹೊಸತನದೊಂದಿಗೆ ಆಚರಿಸಲಾಗು ವದು. ಶೋಭಾಯಾತ್ರೆ ಅದ್ದೂರಿ ಯಾಗಿ ರಲಿದ್ದು, ನಿಯಮಗಳ ಪಾಲನೆಯೊಂದಿಗೆ ಆಚರಿಸಲಾಗು ವದು. ಡಿಜೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಲಿರುವದರಿಂದ ಶಬ್ಧದ ಮಿತಿಯನ್ನು ಕಡಿತಗೊಳಿಸ ಲಾಗುವದು. ಕಣ್ಣು ಕೋರೈಸುವ ಲೇಸರ್ ಲೈಟ್‌ಗಳನ್ನು ನಿರ್ಬಂಧಿಸ ಲಾಗುವದು. ಮಂಟಪದ ಚಲನ ವಲನದ ಪ್ರದರ್ಶನ ಹಾಗೂ ತೀರ್ಪುಗಾರಿಕೆ ಕೂಡ ಸಮಯಕ್ಕೆ ಸರಿಯಾಗಿ ಆಗಲಿದೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ದಸರಾ ಸಮಿತಿ ಖಜಾಂಚಿ ಅರುಣ್‌ಶೆಟ್ಟಿ ಇದ್ದರು.