ಪೊನ್ನAಪೇಟೆ, ಅ. ೧೦: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾ ನಮಸ್ಕಾರ ಪೂಜೆ, ತಾ. ೧೨ ವಿಜಯ ದಶಮಿಯಂದು ಸಂಪನ್ನಗೊಳ್ಳಲಿದೆ ಎಂದು ಊರಿನ ತಕ್ಕಮುಖ್ಯಸ್ಥರು ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ, ಭದ್ರಕಾಳಿ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.

ಆಯುಧ ಪೂಜೆಯಂದು ಸಂಜೆ ೪ ಗಂಟೆಗೆ ಸಾಮೂಹಿಕ ವಾಹನ ಪೂಜೆಯ ಬಳಿಕ ಸಂಜೆ ೭ ಗಂಟೆಗೆ ನವರಾತ್ರಿಯ ಪೂಜೆ ಸಂಪನ್ನಗೊಳ್ಳಲಿದೆ. ವಿಜಯ ದಶಮಿಯಂದು ಬೆಳಿಗ್ಗೆಯಿಂದಲೇ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿದೆ. ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ ೧೦.೩೦ಕ್ಕೆ ಶ್ರೀ ಭದ್ರಕಾಳಿ ದೇವರ ದರ್ಶನದ ಬಳಿಕ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ. ಭಕ್ತರು ವಸ್ತç ಸಂಹಿತೆಯನ್ನು ಪಾಲನೆ ಮಾಡಬೇಕು.

ಹೆಚ್ಚಿನ ಮಾಹಿತಿಗೆ ೯೮೮೦೯೬೭೫೭೩, ೯೪೮೩೮೧೫೪೩೦ ಹಾಗೂ ೯೪೪೯೯ ೪೭೮೧೦ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.