ಮಡಿಕೇರಿ, ಅ. ೧೦: ಪ್ರಪ್ರಥಮ ಬಾರಿಗೆ ಕೆಎ-೧೨ ಕೊಡಗು ನೋಂದಣಿಯ ೫ ಸರಕಾರಿ ಅಶ್ವಮೇಧ ಬಸ್ ಮಡಿಕೇರಿ ವಿಭಾಗದ ಡಿಪೋಗೆ ದೊರೆತ್ತಿದ್ದು, ಮಡಿಕೇರಿ ಶಾಸಕ

ಡಾ. ಮಂತರ್ ಗೌಡ ಅವರು ಬಸ್ ಸೇವೆಗೆ ಚಾಲನೆ ನೀಡಿದರು.

ನಗರದ ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿ ಬಸ್ ಸೇವೆಗೆ ಮಂತರ್ ಗೌಡ ಚಾಲನೆ ನೀಡಿ ಮಾತನಾಡಿ, ಇತಿಹಾಸದಲ್ಲಿ ಮೊದಲ ಬಾರಿಗೆ ಮಡಿಕೇರಿ ಡಿಪೋಗೆ ಕೊಡಗು ನೋಂದಣಿಯ ಬಸ್‌ಗಳು ಲಭ್ಯವಾಗಿವೆ. ಈ ಹಿಂದೆ ಬೇರೆ ಜಿಲ್ಲೆಗಳ ನೋಂದಣಿಯ ಬಸ್‌ಗಳು ಮಾತ್ರ ಸಂಚರಿಸುತ್ತಿದ್ದವು. ಶನಿವಾರಸಂತೆಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಆಗಮಿಸಿದ್ದ ಸಂದರ್ಭ ಹೆಚ್ಚುವರಿ ಬಸ್ ನೀಡುವಂತೆ ಗಮನ ಸೆಳೆದಿದ್ದೆ. ಮನವಿಗೆ ಸ್ಪಂದಿಸಿದ ಸಚಿವರು ಬಸ್ ಒದಗಿಸಿದ್ದಾರೆ ಎಂದರು.

ದೊರೆತ ಬಸ್‌ಗಳನ್ನು ಸರಿಯಾಗಿ ನಿರ್ವಹಿಸಿದರೆ

(ಮೊದಲ ಪುಟದಿಂದ) ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್‌ಗಳನ್ನು ಸರಕಾರ ಒದಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಲಭ್ಯವಾಗಿರುವ ಬಸ್‌ಗಳು ದಸರಾ ಹಿನ್ನೆಲೆ ಮಡಿಕೇರಿ-ಮೈಸೂರು-ಬೆಂಗಳೂರು ನಡುವೆ ಸಂಚರಿಸಲಿವೆ. ಮೂರು ದಿನಗಳ ನಂತರ ಕೊಡಗು ಜಿಲ್ಲೆಯ ಮಾರ್ಗ ನಿರ್ಧರಿಸಿ ಓಡಾಟ ಆರಂಭಿಸಲಿವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಡಿಪೋ ವ್ಯವಸ್ಥಾಪಕ ಮೆಹಬೂಬ್ ಅಲಿ, ಸರಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಟಿ.ಪಿ. ರಮೇಶ್, ಹೆಚ್.ಎಂ. ನಂದಕುಮಾರ್, ಪ್ರಕಾಶ್ ಆಚಾರ್ಯ, ಮಂಡೀರ ಸದಾ ಮುದ್ದಪ್ಪ, ಚುಮ್ಮಿ ದೇವಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.