ಮಡಿಕೇರಿ, ಅ. ೧೦: ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಆಕರ್ಷಿಸುತ್ತಿದ್ದ ಕಲಾಸಂಭ್ರಮ ವೇದಿಕೆಯಲ್ಲಿಂದು ಜಾನಪದ ಲೋಕವೇ ಸೃಷ್ಟಿಯಾಗಿತ್ತು. ಮಿಂಚಿ ಮರೆಯಾಗುತ್ತಿರುವ ಜಾನಪದ ಗೀತೆ, ನೃತ್ಯ, ಗೀಗಿ ಪದ, ಕೋಲಾಟ, ಕಂಸಾಳೆ, ವೀರಗಾಸೆ, ಡೊಳ್ಳುಕುಣಿತ ಸೇರಿದಂತೆ ಇನ್ನಿತರ ಅಪರೂಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲಾವಿದರು ಪ್ರಸ್ತುತಪಡಿಸುವ ಮೂಲಕ ಜಾನಪದದ ಶ್ರೀಮಂತಿಕೆಯನ್ನು ಅನಾವರಣಗೈದರು.

ಮಡಿಕೇರಿ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕ ವತಿಯಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆದ ಜಾನಪದ ದಸರಾ ಕಾರ್ಯಕ್ರಮ ಜನಮನಸೂರೆಗೊಳಿಸಿತು.

(ಮೊದಲ ಪುಟದಿಂದ) ಆರೋಪಿ ಸೇರಿ ೯ ಮಂದಿಯನ್ನು ಬಂದಿಸಿದ್ದಲ್ಲದೆ, ಮೂರು ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕಳೆದ ೨೦೨೩ರಿಂದ ೭-೧೦-೨೦೨೪ರವರೆಗೆ ಸುಮಾರು ೧೬೫ ಅಪರಾಧ ಪ್ರಕರಣಗಳನ್ನು ಭೇದಿಸಿ ೩೫೫ ಆರೋಪಿಗಳನ್ನು ಬಂದಿಸಿರುವ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲು ತೀರ್ಮಾನಿಸಿದ ಸಂದರ್ಭ ಪೊಲೀಸ್ ವರಿಷ್ಠಾಧಿಕಾರಿಗಳ ಕೋರಿಕೆ ಮೇರೆಗೆ ಸುಮಾರು ೩೩ ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.

ಅಧಿಕಾರಿಗಳಿಗೆ ಸನ್ಮಾನ

ಇದರೊಂದಿಗೆ ಶಾಸಕರ ಸೂಚನೆ ಮೇರೆಗೆ ಈ ಬಾರಿಯ ದಸರಾ ಉತ್ಸವವನ್ನು ಯಶಸ್ವಿಯಾಗಿ ಆಚರಣೆ ಮಾಡುವಲ್ಲಿ ಶ್ರಮವಹಿಸಿದ ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರೂ ಆಗಿರುವ ವೆಂಕಟ್‌ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ್ ಮೀನಾ, ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಜಿಲ್ಲಾ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಆವರುಗಳನ್ನು ಕೂಡ ಸನ್ಮಾನಿಸಲಾಗುವದೆಂದು ತಿಳಿಸಿದರು.

ನಗರ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ವೈ.ರಾಜೇಶ್ ಮಾತನಾಡಿ, ತಾ. ೧೧ರಂದು(ಇAದು) ಆಯುಧ ಪೂಜೆ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ೮.೩೦ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಶಾಸಕ ಡಾ.ಮಂತರ್ ಗೌಡ, ಉಸ್ತುವಾರಿ ಸಚಿವ ಎಸ್.ಎನ್. ಬೋಸರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ತಂಗಡಗಿ ಶಿವರಾಜ್ ಸಮಗಪ್ಪ, ಶಾಸಕ ಎ.ಎಸ್. ಪೊನ್ನಣ್ಣ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಇತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಅಂದು ಕ್ರಿಡಾಕೂಟದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವದು. ತಾ.೧೨ರ ವಿಜಯದಶಮಿಯಂದು ಅಲಂಕಾರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವದು. ತಾ. ೧೩ರ ಮುಂಜಾನೆ ೫ ಗಂಟೆಗೆ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವದೆಂದು ತಿಳಿಸಿದರು.

ಉಪ ಮುಖ್ಯಮಂತ್ರಿಗಳ ದೇವಾಲಯ ಭೇಟಿ

ದಸರಾ ಸಮಿತಿ ಕಾರ್ಯಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ; ತಾ. ೧೧ರ ಆಯುಧ ಪೂಜಾ ಕಾರ್ಯಕ್ರಮಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಆಗಮಿಸಲಿದ್ದಾರೆ. ಅದಕ್ಕೂ ಮುನ್ನ ದಸರಾದಂದು ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ನಗರದ ಹತ್ತು ದೇವಾಲಯಗಳಿಗೆ ಹಗಲು ವೇಳೆ ಭೇಟಿ ನೀಡಿ ದೇವಾಲಯಗಳ ವೀಕ್ಷಣೆಯೊಂದಿಗೆ ದಶಮಂಟಪಗಳ ಇತಿಹಾಸದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ದಸರಾ ಸಮಿತಿ ಉಪಾಧ್ಯಕ್ಷ ಬಿ.ಎಂ.ರಾಜೇಶ್ ಮಾತನಾಡಿ; ತಾ. ೧೨ರಂದು ವಿಜಯದಶಮಿ ಆಚರಣೆ ನಡೆಯಲಿದ್ದು, ತಾ. ೧೧ ರಂದು ಏರ್ಪಡಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗು ಗಾಯಕ ರಾಜೇಶ್ ಕೃಷ್ಣನ್ ಅವರುಗಳಿಂದ ಕಾರ್ಯಕ್ರಮಗಳು ಮೂಡಿಬರಲಿವೆ. ಇದರೊಂದಿಗೆ ಮಡಿಕೇರಿಯ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋ ತಂಡದಿAದ ನೃತ್ಯ ಸಂಗಮ, ವೀರಾಜಪೇಟೆಯ ಟೀಮ್ ಇಂಟೋಪೀಸ್ ಡ್ಯಾನ್ಸ್ ಸ್ಟುಡಿಯೋ ಇವರಿಂದ ನೃತ್ಯ ವೈವಿಧ್ಯ, ಮೈಸೂರಿನ ನಾದ ವಿದ್ಯಾಲಯ ಸಂಗೀತ ಮತ್ತು ನೃತ್ಯ ಅಕಾಡೆಮಿ ತಂಡದಿAದ ನೃತ್ಯವೈವಿಧ್ಯ, ಕಂಚಿ ಕಾಮಾಕ್ಷಿ ದೇವಾಲಯ ತಂಡದಿAದ ಕಾರ್ಯಕ್ರಮ ನಡೆಯಲಿದೆ.

ಅದ್ದೂರಿ ಶೋಭಾಯಾತ್ರೆ

ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್ ಮಾತನಾಡಿ; ಈ ಬಾರಿಯ ದಸರಾ ಉತ್ಸವವನ್ನು ಯಶಗೊಳಿಸುವ ನಿಟ್ಟಿನಲ್ಲಿ ಹಲವು ಸಭೆಗಳನ್ನು ನಡೆಸಲಾಗಿದ್ದು, ಹೊಸತನದೊಂದಿಗೆ ಆಚರಿಸಲಾಗು ವದು. ಶೋಭಾಯಾತ್ರೆ ಅದ್ದೂರಿ ಯಾಗಿ ರಲಿದ್ದು, ನಿಯಮಗಳ ಪಾಲನೆಯೊಂದಿಗೆ ಆಚರಿಸಲಾಗು ವದು. ಡಿಜೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಲಿರುವದರಿಂದ ಶಬ್ಧದ ಮಿತಿಯನ್ನು ಕಡಿತಗೊಳಿಸ ಲಾಗುವದು. ಕಣ್ಣು ಕೋರೈಸುವ ಲೇಸರ್ ಲೈಟ್‌ಗಳನ್ನು ನಿರ್ಬಂಧಿಸ ಲಾಗುವದು. ಮಂಟಪದ ಚಲನ ವಲನದ ಪ್ರದರ್ಶನ ಹಾಗೂ ತೀರ್ಪುಗಾರಿಕೆ ಕೂಡ ಸಮಯಕ್ಕೆ ಸರಿಯಾಗಿ ಆಗಲಿದೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ದಸರಾ ಸಮಿತಿ ಖಜಾಂಚಿ ಅರುಣ್‌ಶೆಟ್ಟಿ ಇದ್ದರು.

ಜಾನಪದ ಮೌಲ್ಯ ಜೀವನಕ್ಕೆ ಬಹುಮುಖ್ಯ - ವೆಂಕಟ್ ರಾಜಾ

ಜಾನಪದದಲ್ಲಿ ಅಡಗಿರುವ ಮೌಲ್ಯ ನಮ್ಮೆಲ್ಲರ ಜೀವನಕ್ಕೆ ಬಹುಮುಖ್ಯ ಎಂದು ಜಿಲ್ಲಾಧಿಕಾರಿ, ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷ ವೆಂಕಟ್ ರಾಜಾ ಹೇಳಿದರು.

ಜಾನಪದೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಡಿಕೇರಿ ದಸರಾ ಜನೋತ್ಸವದಲ್ಲಿ ಜಾನಪದೋತ್ಸವ ವಿಭಿನ್ನವಾಗಿದೆ. ನಮ್ಮೆಲ್ಲರ ಬದುಕಿನಲ್ಲಿಯೂ ಜಾನಪದ ಅಡಗಿರುತ್ತದೆ. ಅಜ್ಜಿ ಹೇಳಿದ ಕತೆಯಲ್ಲಿ ನೈತಿಕ ಪಾಠವಿರುತ್ತದೆ. ಪೀಳಿಗೆಯಿಂದ ಪೀಳಿಗೆಗೆ ಜಾನಪದ ಹಸ್ತಾಂತರವಾಗಬೇಕಾದ ಸನ್ನಿವೇಶವಿದೆ. ವಿವಿಧತೆಯಲ್ಲಿ ಏಕತೆಯ ನಾಡಿಗೆ ಜಾನಪದವೇ ಮೂಲ ಎಂದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲರಿಗೂ ಜವಾಬ್ದಾರಿ ಇರುತ್ತದೆ. ಪರಿಸರ ಕಾಳಜಿ, ಮಾನವೀಯ ಮೌಲ್ಯಗಳು ಜಾನಪದದಲ್ಲಿ ಉಲ್ಲೇಖವಾಗಿದ್ದು, ಮೊದಲು ರಜೆ ಸಮಯದಲ್ಲಿ ಅಜ್ಜ-ಅಜ್ಜಿ ಮನೆಗೆ ಮಕ್ಕಳನ್ನು ಕಳುಹಿಸುವ ಪದ್ಧತಿ ಇತ್ತು. ಇದರಿಂದ ಬದುಕಿನ ಮೌಲ್ಯ ವೃದ್ಧಿಸುತ್ತಿತ್ತು ಎಂದು ಪ್ರತಿಪಾದಿಸಿದರು.

ಜಾನಪದ ಪರಿಷತ್‌ನ ಕಟ್ಟಡ ನಿರ್ಮಾಣ ಸಂಬAಧ ಜಾಗಕ್ಕೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಲಹೆ ನೀಡಿದ ಅವರು, ಈ ಬಗ್ಗೆ ವಿಶೇಷ ಗಮನ ಹರಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಸಾಕಷ್ಟು ಜಾನಪದ ಕಲೆಗಳಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಇವುಗಳು ಮನ್ನಣೆ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ. ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಜಾನಪದ ಆಂದೋಲನ ನಡೆದಿದೆ. ಕರ್ನಾಟಕ ಜಾನಪದವನ್ನು ಯುನೆಸ್ಕೊ ಗುರುತಿಸಿ ಮಾನ್ಯತೆ ನೀಡಿರುವುದು ಹೆಗ್ಗಳಿಕೆ ಎಂದರು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಭಾರತ ಬಹುಸಂಸ್ಕೃತಿಯ ದೇಶ. ಜಾನಪದ ಕಲೆಗೆ ಜಾತಿ, ಬೇಧ-ಭಾವವಿಲ್ಲ. ಜಾನಪದ ಪದ್ಧತಿ ಅಲ್ಲ ಸಂಸ್ಕೃತಿ ಎಂದರು.

ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಮಾತನಾಡಿ, ಜಾನಪದ ಕಲೆ ನಶಿಸುತ್ತಿರುವ ಕಾಲಘಟ್ಟದಲ್ಲಿ ಈ ರೀತಿ ಕಾರ್ಯಕ್ರಮ ಆಯೋಜಿಸಿ ಮುನ್ನಲೆಗೆ ತರುವ ಪ್ರಯತ್ನ ಶ್ಲಾಘನೀಯ. ಮುಂದಿನ ಪೀಳಿಗೆಗೆ ಜಾನಪದ ಪರಿಚಯಿಸುವ ವೇದಿಕೆ ಇದಾಗಲಿ ಎಂದು ಆಶಿಸಿದರು.

ಜಾನಪದ ದಸರಾ ಸಂಚಾಲಕ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಟಿ. ಅನಿಲ್ ಮಾತನಾಡಿದರು.

(ಮೊದಲ ಪುಟದಿಂದ) ಹಿರಿಯ ಜಾನಪದ ಕಲಾವಿದ ಶಂಕರಯ್ಯ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಕಿಗ್ಗಾಲು ಗಿರೀಶ್ ಬರೆದ ‘ಅಪ್ರತಿಮ ಸಾಹಸಿ ಜ. ತಿಮ್ಮಯ್ಯ ಹಾಗೂ ‘ಇತರ ಲೇಖನ’ ಪ್ರಬಂಧ ಸಂಕಲನ ಹಾಗೂ ಹಂಚೆಟ್ಟಿರ ಫ್ಯಾನ್ಸಿ ಬರೆದ ‘ಒಡಲ ಉರಿ’ ಕಥಾ ಸಂಕಲನ ಬಿಡುಗಡೆಗೊಂಡವು.

ಜಿಲ್ಲಾ ಜಾನಪದ ಪರಿಷತ್ ಉಪಾಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಕೋಶಾಧಿಕಾರಿ ಸಂಪತ್ ಕುಮಾರ್ ಸರಳಾಯ, ಕಾರ್ಯದರ್ಶಿ ಉಜ್ವಲ್ ರಂಜಿತ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಟಾಮಿ ಥೋಮಸ್ ನಾ ಕನ್ನಡಿಗ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ದಿಲನ್ ಚಂಗಪ್ಪ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪ್ರಕಾಶ್, ಶನಿವಾರಸಂತೆ ಹೋಬಳಿ ಘಟಕ ಅಧ್ಯಕ್ಷೆ ಡಿ. ಸುಜಾಲಾ ದೇವಿ, ಮೂರ್ನಾಡು ಘಟಕದ ಅಧ್ಯಕ್ಷ ಪ್ರಶಾಂತ್, ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಸ್ವಾಗತಿಸಿ, ಖಜಾಂಚಿ ಸಂಪತ್ ಕುಮಾರ್ ವಂದಿಸಿದರು. ಕೊಡಗು ಗೌಡ ಮಹಿಳಾ ಒಕ್ಕೂಟದ ಸದಸ್ಯರು ಜಾನಪದ ಗೀತೆ ಹಾಡಿದರು.