ಕುಶಾಲನಗರ, ಅ. ೧೦: ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರಪೇಟೆ, ಕುಶಾಲನಗರ ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ ಒಂದು ದಿನದ ೫೦ಕ್ಕೂ ಹೆಚ್ಚು ಶಿಬಿರಾರ್ಥಿಗಳನ್ನು ಒಳಗೊಂಡ ಮಾನಸಿಕ ಆರೋಗ್ಯ ತರಬೇತಿ ಕಾರ್ಯಾಗಾರ ನಡೆಯಿತು.

ಈ ಕಾರ್ಯದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಅವರು ಮಾತನಾಡಿ, ಮಾನಸಿಕ ಕಾಯಿಲೆಗಳ ಚಿಕಿತ್ಸೆಯ ಬಗ್ಗೆ ಸಿಬ್ಬಂದಿ ವರ್ಗದವರಿಗೆ ತಿಳಿ ಹೇಳಿದರು. ಅತಿ ತೀವ್ರ ಮಾನಸಿಕ ಕಾಯಿಲೆಗಳು, ಖಿನ್ನತೆ ಆತಂಕ, ನಿದ್ರಾಹೀನತೆ ಬಗ್ಗೆ ಮಾನಸಿಕ ತಜ್ಞರನ್ನು ಸಂಪರ್ಕಿಸಬೇಕೆAದರು. ಹಾಗೂ ಮನೋ ಚೈತನ್ಯ ಶಿಬಿರಗಳನ್ನು ಆಯೋಜಿಸಲು ಇಲಾಖೆಯು ಕ್ರಮ ಕೈಗೊಂಡಿದೆ ಎಂದರು. ಈ ಕಾರ್ಯದಲ್ಲಿ ಡಾ. ಡೇವಿಸ್, ವಿಶ್ವಜ್ಞ, ಅಶ್ವಿನಿ, ಸಂಜಯ್ ಆರೋಗ್ಯ ಇಲಾಖೆ ಎಲ್ಲಾ ಸಿಬ್ಬಂದಿ ವರ್ಗ ಹಾಜರಿದ್ದರು.