ಮುಳ್ಳೂರು, ಅ. ೧೦: ಕರ್ನಾಟಕ ಜಾನಪದ ಪರಿಷತ್ ಶನಿವಾರಸಂತೆ ಹೋಬಳಿ ಘಟಕದ ವಾರ್ಷಿಕ ಸಭೆಯು ಘಟಕದ ಅಧ್ಯಕ್ಷೆ ಡಿ. ಸುಜಲಾದೇವಿ ಅಧ್ಯಕ್ಷತೆಯಲ್ಲಿ ಸುಪ್ರಜ ಗುರುಕುಲ ಶಾಲೆಯಲ್ಲಿ ನಡೆಯಿತು.

ಮುಂದಿನ ದಿನಗಳಲ್ಲಿ ಶನಿವಾರಸಂತೆ ಹೋಬಳಿ ಘಟಕದ ವತಿಯಿಂದ ಜಾನಪದ ಸಂಸ್ಕೃತಿಗೆ ಸಂಬAಧ ಪಟ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ಘಟಕವನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ಘಟಕದ ಗೌರವ ಅಧ್ಯಕ್ಷ ಸರ್ದಾರ್ ಆಹಮದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಘಟಕದಿಂದ ಕಾರ್ಯಕ್ರಮಗಳನ್ನು ಆಯೋಜಿಸುವ ಜೊತೆಯಲ್ಲಿ ಘಟಕವನ್ನು ಇತರೆ ಸಂಘ-ಸAಸ್ಥೆಗಳಲ್ಲಿರುವ ನಿಯಮಗಳಂತೆ ಬೆಳೆಸಬೇಕಾಗುತ್ತದೆ ಎಂದು ಘಟಕದ ಖಜಾಂಚಿ ಹರೀಶ್‌ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಮುಂದಿನ ದಿನದಲ್ಲಿ ಸದರಿ ಘಟಕದಿಂದ ನಡೆಸುವ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು. ಶನಿವಾರಸಂತೆ ಹೋಬಳಿ ಘಟಕದ ವತಿಯಿಂದ ತಾ. ೧೦ ರಂದು ಮಡಿಕೇರಿಯಲ್ಲಿ ನಡೆಯ ಲಿರುವ ಜಾನಪದ ದಸರಾದಲ್ಲಿ ಕಾರ್ಯಕ್ರಮ ನೀಡುವ ಬಗ್ಗೆ ತೀರ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷೆ ಡಿ. ಸುಜಲಾದೇವಿ ಮಾತನಾಡಿ, ಜಾನಪದ ಪರಿಷತ್ ಘಟಕದ ವತಿಯಿಂದ ಮುಂದಿನ ದಿನಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಈ ನಿಟ್ಟಿನಲ್ಲಿ ಘಟಕದ ಸದಸ್ಯರು ಕಾರ್ಯಕ್ರಮಗಳ ಯಶಸ್ವಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಘಟಕದ ಅಧ್ಯಕ್ಷೆ ಮತ್ತು ಕಾರ್ಯದರ್ಶಿ ಸ್ಥಾನ ಹೊರತುಪಡಿಸಿದಂತೆ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಈ ಪೈಕಿ ಘಟಕದ ಉಪಾಧ್ಯಕ್ಷರಾಗಿ ಕೆ.ಎನ್. ದಿನೇಶ್ ಮಾಲಂಬಿ, ಗೌರವ ಅಧ್ಯಕ್ಷರಾಗಿ ಸರ್ದಾರ್ ಆಹಮದ್, ಖಜಾಂಚಿಯಾಗಿ ಹೆಚ್.ಆರ್. ಹರೀಶ್ ಕುಮಾರ್ ಮತ್ತು ಸಹ ಕಾರ್ಯದರ್ಶಿಯಾಗಿ ಭಾಸ್ಕರ್ ಮುಳ್ಳೂರು ಅವರುಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಘಟಕದ ಸದಸ್ಯರಾದ ಎಸ್.ಆರ್. ಶೋಭಾವತಿ, ಮನುಫ್‌ಪಾಷ ಹಾಜರಿದ್ದರು.