ಮಡಿಕೇರಿ, ಅ. ೧೦: ಮಡಿಕೇರಿಯ ಮಲ್ಲಿಕಾರ್ಜುನ ನಗರ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ಶ್ರೀರಾಮ, ಲಕ್ಷö್ಮಣ, ಸೀತೆ ಹಾಗೂ ಆಂಜನೇಯ ವಿಗ್ರಹಗಳಿಗೆ ಬೆಳ್ಳಿ ಕವಚ ಅರ್ಪಣೆ ಕಾರ್ಯಕ್ರಮ ಬುಧವಾರ ನೆರವೇರಿತು. ಅರ್ಚಕರುಗಳಾದ ರಾಮಚಂದ್ರ ಭಟ್ ಹಾಗೂ ಶ್ರೀನಿವಾಸ್ ಭಟ್ ಇವರುಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಈ ಕಾರ್ಯ ನೆರವೇರಿಸಿದರು.

ಈ ಸಂದರ್ಭ ಮುಖ್ಯ ದಾನಿಗಳಾದ ಡಾ. ಪ್ರೇಂನಾಥ್ ಪೂಂಜ ಹಾಗೂ ಇತರ ಪ್ರಮುಖ ದಾನಿಗಳಾದ ಮಾಜಿ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ಮತ್ತು ಅವರ ಪತ್ನಿ ಶೈಲಾ ಪೊನ್ನಮ್ಮ, ಎಸ್. ಎಸ್.ಸಂಪತ್ ಕುಮಾರ್, ಹನುಮಕ್ಕ ರಮೇಶ್ ಹಾಗೂ ಬೆಳ್ಳಿ ಉತ್ಸವ ಮೂರ್ತಿಯನ್ನು ನೀಡಿದ ಅಣ್ವೇಕರ್ ಜ್ಯುವೆಲ್ಲರ್ಸ್ನ ಸಂತೋಷ್ ಇವರುಗಳಿಗೆ ಶ್ರೀ ಕೋದಂಡರಾಮ ಟ್ರಸ್ಟ್ನಿಂದ ಗೌರವಾರ್ಪಣೆ ನಡೆಯಿತು. ಇತರ ಅನೇಕ ದಾನಿಗಳಿಗೆ ಗೌರವ ಪ್ರಸಾದ ನೀಡಲಾಯಿತು. ಈ ಸಂದರ್ಭ ಕಳೆದ ಸಾಲಿನ ದೇವಾಲಯ ದಸರಾ ಸಮಿತಿಯಿಂದ ಸೀತಾಮಾತೆಗೆ ಚಿನ್ನದ ಹಾರವನ್ನು ಮಾಜಿ ಅಧ್ಯಕ್ಷ ಗೋಪಿನಾಥ್ ಸಮರ್ಪಿಸಿದರು.

ವಿಶಾಲಾಕ್ಷಮ್ಮ ಅವರ ನೇತೃತ್ವದಲ್ಲಿ ಸ್ಥಳೀಯ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಜಿ. ಚಿದ್ವಿಲಾಸ್ ಪ್ರಾರ್ಥನೆ ಮಾಡಿದರು. ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಟ್ರಸ್ಟ್ ಪದಾಧಿಕಾರಿಗಳಾದ ನಂಜುAಡ, ನರಸಿಂಹ ಮೂರ್ತಿ, ಪರಮೇಶ್ ಹಾಗೂ ಇತರ ಟ್ರಸ್ಟಿಗಳು, ಶ್ರೀ ರಾಮ ಸೇವಾ ಸಮಿತಿ ಪದಾಧಿಕಾರಿಗಳಾದ ವಿಶ್ವನಾಥ್, ಆನಂದ್, ದೇವಾಲಯ ದಸರಾ ಸಮಿತಿ ಅಧ್ಯಕ್ಷ ಕುಶಲ, ಜ್ಯೋತಿ ಯುವಕ ಸಂಘದ ಅಧ್ಯಕ್ಷ ರೋಷನ್ ಮತ್ತಿತರರು ಹಾಜರಿದ್ದರು.