ಸುAಟಿಕೊಪ್ಪ, ಅ. ೧೦: ಯಾವುದೇ ಒಂದು ಸಮಾಜ ಸ್ವಾಸ್ಥö್ಯವಾಗಿ ರೂಪುಗೊಳ್ಳಬೇಕೆಂದರೆ, ಯುವಜನತೆಯಿಂದ ಮಾತ್ರ ಸಾಧ್ಯವೆಂದು ಸಂಪನ್ಮೂಲ ವ್ಯಕ್ತಿ ಮಾಲಾದೇವಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇತ್ತೀಚೆಗೆ ಕಾನ್‌ಬೈಲ್ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದ ಸ್ವಾಸ್ಥö್ಯ ಸಂಕಲ್ಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಾಲಾದೇವಿ ಮಾತನಾಡಿ, ದುಶ್ಚಟಗಳ ದಾಸತ್ವಕ್ಕೆ ಬಲಿಯಾದ ಕುಟುಂಬಗಳು ನೆಮ್ಮದಿ, ಶಾಂತಿಯನ್ನು ಕಳೆದುಕೊಂಡು ಬೀದಿಪಾಲಾಗಿರುವ ಹಲವು ಉದಾಹರಣೆಗಳು ಇಂದಿಗೂ ಕಣ್ಣಮುಂದೆ ಕಾಣುವಂತಾಗಿದೆ. ಯುವಜನಾಂಗವು ಮಾದಕ ವಸ್ತು ಸೇರಿದಂತೆ ಮತ್ತಿತರ ದುಶ್ಚಟಗಳತ್ತ ಹೆಚ್ಚು ಆಕರ್ಷಿತರಾಗುವುರೊಂದಿಗೆ ಸಮಾಜದಲ್ಲಿ ಸ್ವಾಸ್ಥö್ಯ ಕೆಡಿಸುತ್ತಿದ್ದಾರೆ. ಆದುದರಿಂದ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡುವುದರೊಂದಿಗೆ ದೇಶದ ಉತ್ತಮ ಪ್ರಜೆಗಳಾಗಿ ಮೂಡಿಬರುವ ಮೂಲಕ ಸಮಾಜದಲ್ಲಿ ನಡೆಯುವ ಅಂಕು ಡೊಂಕುಗಳನ್ನು ತಿದ್ದುವ ಕೆಲಸವಾಗಬೇಕಿದೆ ಎಂದು ಕಿವಿಮಾತು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಮೂರ್ತಿ ವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಹಾಗೂ ಶಿಕ್ಷಕಿ ಮಾಲಾದೇವಿ ಅವರು ಸ್ವಾಸ್ಥö್ಯ ಸಂಕಲ್ಪದ ಕುರಿತು ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಸಮಾರಂಭದ ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಭವ್ಯ, ಸೇವಾಪ್ರತಿನಿಧಿ ಯಶೋಧ, ಶಾಲೆಯ ಸಹ ಶಿಕ್ಷಕರು ಇದ್ದರು.